ಮುಲ್ಕಿ : ಮಾನಂಪಾಡಿ ವೀರಭದ್ರ ದೇವಸ್ಥಾನ ಸಂಪರ್ಕ ರಸ್ತೆ ತಾತ್ಕಾಲಿಕ ದುರಸ್ತಿ – ತುಳುನಾಡು ವಾರ್ತೆ ವರದಿ ಫಲ ಶೃತಿ

0
12

ಮುಲ್ಕಿ: ನಗರ ಪಂಚಾಯತ್ ವ್ಯಾಪ್ತಿಯ ಕಾರ್ನಾಡ್ ನಿಂದ ಮಾನಂಪಾಡಿ ವೀರಭದ್ರ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅವ್ಯವಸ್ಥೆಗಳ ಆಗರವಾಗಿದ್ದು ಸಂಚಾರ ದುಸ್ತರವಾಗಿ ಪರಿಣಮಿಸಿದೆ.

ರಸ್ತೆಯಲ್ಲಿ ಪೈಪ್ಲೈನ್ ಅಳವಡಿಸಲು ರಸ್ತೆ ತುಂಡರಿಸಿದ್ದು ಬಳಿಕ ಸರಿಯಾದ ಕಾಮಗಾರಿ ನಡೆಸದೆ ರಸ್ತೆಯಲ್ಲಿ ಬೃಹದಾಕಾರದ ಹೊಂಡಗಳು ಉಂಟಾಗಿದೆ ಬಳಿಕ ಈ ಭಾಗದಲ್ಲಿ ಅಮೃತ್ 2.0 ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿ ಕೂಡ ನಡೆದಿದ್ದು ರಸ್ತೆ ಮತ್ತಷ್ಟು ಹದಗೆಡಲು ಕಾರಣವಾಗಿದೆ.

ರಸ್ತೆ ಅಭಿವೃದ್ಧಿ ಸರಿಪಡಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಸಾಮಾಜಿಕ ಕಾರ್ಯಕರ್ತ ಶರತ್ ಕಾರ್ನಾಡ್ ಸಂಬಂಧಪಟ್ಟ ಇಲಾಖೆಯನ್ನು ತುಳುನಾಡು ನಾಡು ವಾರ್ತೆ ಮೂಲಕ ಎಚ್ಚರಿಸಿದ್ದು ಕೂಡಲೇ ಮುಲ್ಕಿ ನಗರ ಪಂಚಾಯತ್ ಮುಖ್ಯಾಧಿಕಾರಿ ಸಿಬ್ಬಂದಿಗಳ ಮೂಲಕ ತಾತ್ಕಾಲಿಕ ನೆಲೆಯಲ್ಲಿ ರಸ್ತೆಯನ್ನು ಸರಿಪಡಿಸಿದ್ದಾರೆ.

ಮುಖ್ಯಾಧಿಕಾರಿ ಮಧುಕರ್ ಮಾತನಾಡಿ ಅನುದಾನ ಕೊರತೆಯಿಂದ ಕಾಮಗಾರಿಗಳು ನಿಧಾನ ಗತಿಯಲ್ಲಿ ನಡೆಯುತ್ತಿದ್ದು ಮಳೆಗಾಲ ಮುಗಿದ ಬಳಿಕ ಸರಕಾರದಿಂದ ಅನುದಾನ ಮಂಜೂರಾದರೆ ರಸ್ತೆ ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ.

ವರದಿ : ಗಣೇಶ್‌ ದೇವಾಡಿಗ ಪಂಜ, ತುಳುನಾಡು ವಾರ್ತೆ