ನಮ್ಮ‌ ಬೆದ್ರ ಕಲಾವಿದರ ನೂತನ ಕೃತಿ “ವರಮಹಾಲಕ್ಷ್ಮೀ” ನಾಟಕಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮುಹೂರ್ತ

0
14

ಮೂಡುಬಿದಿರೆ : ನಮ್ಮ ಕಲಾವಿದೆರ್ ಬೆದ್ರ ತಂಡದ ಉಮೇಶ್ ಮಿಜಾರ್ ರಚನೆ ಹಾಗೂ ನಿರ್ದೇಶನವಿರುವ ಹೊಸ ವಿಭಿನ್ನ ಶೈಲಿಯ “ವರಮಹಾಲಕ್ಷ್ಮೀ” ನಾಟಕ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಡಾ ಡಿ ವೀರೇಂದ್ರ ಹೆಗ್ಗಡೆಯವರ ದಿವ್ಯ ಹಸ್ತದಿಂದ ಮುಹೂರ್ತ ನೆರವೇರಿತು.

ನಾಟಕ ರಚನೆಕಾರ ನಿರ್ದೇಶಕ ಉಮೇಶ್ ಮಿಜಾರ್, ಶ್ರೀನಾಥ್ ಮೂಡುಬಿದಿರೆ, ನಿತಿನ್ ಮುಲ್ಕಿ, ಸಂಗೀತಾ ಮುಲ್ಕಿ, ರೇಖಾ ಕೆಂಚನಕೆರೆ, ಅನಿಶಾ ಕುಡ್ಲ, ಶ್ಯಾಮಿಲಿ ಕುಡ್ಲ, ಹರಿಶ್ಚಂದ್ರ ಪೆರಾಡಿ, ದಯೇಶ್ ಮುಲ್ಕಿ ಪುತ್ತೂರು, ಹರೀಶ್ ಆಲದಪದವು, ಹರೀಶ್ ಕಡಂದಲೆ, ಚಂದ್ರಹಾಸ್ ಪೂಜಾರಿ ಸಾಣೂರು. ಶ್ರೀಜಿತ್ ಶೆಟ್ಟಿ ನಡಾರ್, ಸುರೇಂದ್ರ ಸಾಣೂರು, ವಿನಾಯಕ್ ಜೆಪ್ಪು ಉಪಸ್ಥಿತರಿದ್ದರು.

ಹೊಸ ನಾಟಕದ ಮುಖಾಂತರ ಹೊಸದನ್ನು ಕೊಡುತ್ತಿರುವ ಉಮೇಶ್ ಮಿಜಾರ್ ರವರ ಈ ವರ್ಷದ ತುಳು ನಾಟಕ ವರಮಹಾಲಕ್ಶ್ಮೀ …ಎಂಬ ಟೈಟಲ್ ನೊಂದಿಗೆ ಕಲಾರಸಿಕರ ನಿರೀಕ್ಷೆಯನ್ನು ಇನ್ನೂ ಹೆಚ್ಚಿಸಿದೆ.

ತುಳುರಂಗಭೂಮಿಯಲ್ಲಿ ವಿಭಿನ್ನ ಪ್ರಯೋಗಗಳನ್ನು ಮಾಡುವ ಮೂಲಕ ಚೋಟು ಎಂದೇ ಪ್ರಸಿದ್ದಿ ಪಡೆದಿರುವ ಉಮೇಶ್ ಮಿಜಾರ್ ಬಹಳಷ್ಟು ಕಲಾವಿದರನ್ನು ರಂಗಭೂಮಿಗೆ ಪರಿಚಯಿಸಿದ್ದಾರೆ. ಅವರ ಹೊಸ ನಾಟಕ “ವರಮಹಾಲಕ್ಷ್ಮೀ” ನಾಟಕದ ಕುರಿತು ಪ್ರೇಕ್ಷಕರಲ್ಲಿ ಕುತೂಹಲ, ನಿರೀಕ್ಷೆ ಹೆಚ್ಚಿಸಿದೆ. ಕಳೆದ ವರ್ಷದ ಅವರ ನಾಟಕ “ವೈರಲ್ ವೈಶಾಲಿ” ಪ್ರೇಕ್ಷಕರಿಂದ ಮುಕ್ತ ಕಂಠದಿಂದ ಪ್ರಶಂಸಿಸಲ್ಪಟ್ಟಿತು.