ಕೊಲ್ಲಾಪುರದ ಸ್ಮಾರ್ಟ್ ಕಿಡ್ ಅಬಾಕಸ್ ಲರ್ನಿಂಗ್ ಪ್ರೈ. ಲಿ. ವತಿಯಿಂದ ಉಡುಪಿಯಲ್ಲಿ ದೊಡ್ಡನ ಗುಡ್ಡೆ ಜನತಾ ವ್ಯಾಯಾಮ ಶಾಲೆಯ ಸಭಾಂಗಣದಲ್ಲಿ ರಾಜ್ಯಮಟ್ಟದ ಅಬಾಕಸ್ ಮತ್ತು ವೇದಿಕ್ ಮ್ಯಾಥ್ಸ್ ಸ್ಪರ್ಧೆಯನ್ನು ಭವ್ಯವಾಗಿ ಆಯೋಜಿಸಲಾಯಿತು. ವಿವಿಧ ಶಾಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಗಣಿತ ನೈಪುಣ್ಯತೆಯನ್ನು ಮೆರೆದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಎ.ವಿ. ಬಾಳಿಗ ಮೆಮೋರಿಯಲ್ ಆಸ್ಪತ್ರೆಯ ದೊಡ್ಡಣಗುಡ್ಡೆ ಶಾಖೆಯ ನಿರ್ದೇಶಕರೂ ಪ್ರಸಿದ್ಧ ಮನೋವೈದ್ಯರೂ ಆದ ಡಾ. ಪಿ.ವಿ. ಬಂಡಾರಿ ಭಾಗವಹಿಸಿ ಮಕ್ಕಳೊಂದಿಗೆ ಆತ್ಮೀಯವಾಗಿ ಸಂವಾದ ನಡೆಸಿದರು.
ಅಬಾಕಸ್ ಮತ್ತು ವೇದ ಗಣಿತ ಕಲಿಯುವುದರಿಂದ ಮಕ್ಕಳ ಮಾನಸಿಕ ಬೆಳವಣಿಗೆ, ಗಣಿತದಲ್ಲಿ ವೇಗ, ಆತ್ಮವಿಶ್ವಾಸ ಹೆಚ್ಚಲು ಸಹಕಾರಿ. “ಇದನ್ನು ಒಂದು ರೇಸ್ ಹಾಜರಿನಲ್ಲಿ ನೋಡುವುದಕ್ಕಿಂತ, ಮಕ್ಕಳ ಸಾಮರ್ಥ್ಯ ವೃದ್ಧಿಗೆ ಮಾರ್ಗವಾಗಿಸಿಕೊಂಡರೆ ಉತ್ತಮ,” ಎಂದು ಅವರು ಹೇಳಿದರು. ಮಕ್ಕಳ ಮಾನಸಿಕ ಆರೋಗ್ಯ, ಓದು–ಆಟದ ಸಮತೋಲನ, ಮೊಬೈಲ್ ಗೇಮ್ಸ್ ಹಾಗೂ ಸೋಷಿಯಲ್ ಮೀಡಿಯಾದ ಅತಿಯಾದ ಬಳಕೆಯ ಹಾನಿಕಾರಕ ಪರಿಣಾಮಗಳ ಕುರಿತು ಅವರು ಅಮೂಲ್ಯ ಮಾರ್ಗದರ್ಶನ ನೀಡಿದರು. “ಸ್ಪರ್ಧೆಯಲ್ಲಿ ಭಾಗವಹಿಸುವುದು ವಿಜೇತಿಯಾಗುವುದಕ್ಕಿಂತ ಹೆಚ್ಚು ಮುಖ್ಯ. ಪೋಷಕರು ಮಕ್ಕಳನ್ನು ಇತರರೊಂದಿಗೆ ಹೋಲಿಸಬಾರದು,” ಎಂದು ಡಾ. ಬಂಡಾರಿ ಸಲಹೆ ನೀಡಿದರು. ಈ ಒಂದು ಸಂದರ್ಭದಲ್ಲಿ ಸಂಸ್ಥೆ ಹಿತೈಷಿಗಳಾದ ನಮ್ಮ ಉಡುಪಿ ಟಿವಿ ಹಾಗೂ ವಿ ಸ್ ಗ್ರೂಪ್ ನಿರ್ದೇಶಕರಾಗಿರುವ ವಿನೋದ್ ಶೆಟ್ಟಿ ಹಾಗೂ ಸುಧೀರ್ ಶೆಟ್ಟಿ ಇದ್ದರು ಉಪಸ್ಥಿತಿ. ಕಾರ್ಯಕ್ರಮದಲ್ಲಿ ಸ್ಮಾರ್ಟ್ ಕಿಡ್ ಅಬಾಕಸ್ ಲರ್ನಿಂಗ್ ಪ್ರೈ. ಲಿ. ನ ಕೋಒರ್ಡಿನೇಟರ್ ಶೀತಲ್ ಪಾಟೀಲ ಹಾಗೂ ಸ್ವಾತಿ, ಸ್ಥಳೀಯ ಗಣ್ಯರು, ಶಿಕ್ಷಕರು ಹಾಗೂ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು ಮತ್ತು ಸ್ಪರ್ಧೆಗೆ ಸಂಪೂರ್ಣ ಬೆಂಬಲ ನೀಡಿದರು. ಸ್ಪರ್ಧೆಯ ನಿರ್ವಹಣೆ ಮತ್ತು ಬಹುಮಾನ ವಿತರಣೆಯನ್ನು ಪಾವನ ಶಿವರಾಮ ಶೆಟ್ಟಿ ಮತ್ತು ಪಂಚಮಿ ಶಿವರಾಮ ಶೆಟ್ಟಿ ಅತ್ಯಂತ ಸುಸೂತ್ರವಾಗಿ ನಡೆಸಿಕೊಟ್ಟರು.
ಉಡುಪಿಯ ಗುಗಲ್ ಸ್ಮಾರ್ಟ್ ಕಿಡ್ ಅಬಾಕಸ್ ಮತ್ತು ವೇದಿಕ್ ಮ್ಯಾಥ್ಸ್ ಸಂಸ್ಥೆಯ ಪ್ರೊಪ್ರೈಟರ್ ಮಾಲತಿ ಶಿವರಾಮ ಶೆಟ್ಟಿ ಧನ್ಯವಾದ ಸಮರ್ಪಣೆ ಮೂಲಕ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯಗೊಂಡಿತು.


