ಬೆಳ್ವೆ : ಕ್ಯಾನ್ಸರ್ ರೋಗಿಗಳಿಗೆ ಸಹಾಯಧನ ಹಸ್ತಾಂತರ

0
98

ಕ್ಯಾನ್ಸರ್ ರೋಗಿಗಳಿಗೆ ಸಹಾಯಧನ ಹಸ್ತಾಂತರ ಟೀಮ್‌ ಮಲೆನಾಡು ಹ್ಯೂಮ್ಯಾನಿಟೇರಿಯನ್‌ ಟ್ರಸ್ಟ್ (ರಿ)

ಬೆಳ್ವೆ, ಇದರ ವತಿಯಿಂದ ಬೆಳ್ವೆ ಆರ್ಡಿ ಗೋಳಿಯಂಗಡಿ ಲಯನ್ಸ್ ಕ್ಲಬ್ ಇದರ ಸಹಯೋಗದೊಂದಿಗೆ ಕ್ಯಾನ್ಸರ್ ರೋಗಿಗಳಿಗೆ ಸಹಾಯಧನ ಹಸ್ತಾಂತರ ಕಾರ್ಯಕ್ರಮ ಬೆಳ್ವೆ ಶ್ರೀ ಸಂದೇಶ್ ಕಿಣಿ ಮೆಮೋರಿಯಲ್ ಸಬಾಂಗಣ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ವೆ ಟೀಮ್‌ ಮಲೆನಾಡು ಹ್ಯೂಮ್ಯಾನಿಟೇರಿಯನ್‌ ಟ್ರಸ್ಟ್ ಪ್ರದಾನ ಕಾರ್ಯದರ್ಶಿ ಮೊಹಮ್ಮದ್ ರಫೀಕ್ ಅಜೆಕಾರು ವಹಿಸಿದ್ದರು.
ಮುಖ್ಯ ಅತಿಥಿಗಳಿಗೆ ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘ ಇದರ ಅಧ್ಯಕ್ಷ ಎಸ್. ಜಯರಾಮ್ ಶೆಟ್ಟಿ ಸರ್ಕಾರಿ ಪದವಿ ಪೂರ್ವ ಕಾಲೇಜ್ ಕೊಕ್ಕರ್ಣೆ ಇದರ ಉಪನ್ಯಾಸಕ ಹರ್ಷ ಪೂಜಾರಿ ,ನಮ್ಮ ನಾಡ ಒಕ್ಕೂಟ ಹೆಬ್ರಿ ಇದರ ಅಧ್ಯಕ್ಷ ಅನ್ಸಾರ್ ಹೊಸಂಗಡಿ , ಉಪಾಧ್ಯಕ್ಷ ಶರೀಫ್ ಸಾಹೇಬ್ ಬೆಳ್ವೆ , ಬೆಳ್ವೆ ಜುಮ್ಮಾ ಮಸೀದಿ ಅಧ್ಯಕ್ಷ ಅಹಮದ್ ಬ್ಯಾರಿ, ಲಯನ್ಸ್ ಕ್ಲಬ್ ಕಾರ್ಯದರ್ಶಿ ಸಂಜೀವ ಆರ್ಡಿ ಉಪಸ್ಥಿರಿದ್ದರು.7 ಮಂದಿ ಕ್ಯಾನ್ಸರ್ ರೋಗಿಗಳಿಗೆ ಸಹಾಯಧನ ಚೆಕ್ ವಿತರಿಸಲಾಯಿತು. ಒಂದು ಮಂದಿಗೆ ಕೃತಕ ಕಾಲು ಜೋಡಣೆಗೆ ಸಹಾಯಧನ ನೀಡಲಾಯಿತು. ಇದೆ ಸಂದರ್ಭದಲ್ಲಿ ಕುಂದಾಪುರ ಮಾವಿನಕಟ್ಟೆಯ
ಬಡ ಯುವತಿಯ ವಿವಾಹಕ್ಕೆ ಸಹಾಯಧನ ನೀಡಲಾಯಿತು. ಟ್ರಸ್ಟ್ ನ ಅಧ್ಯಕ್ಷರಾದ ಮುಸ್ತಾಕ್ ಅಹಮದ್ ಬೆಳ್ವೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಉಪಾಧ್ಯಕ್ಷ ಅಬ್ದುಲ್ ಶುಕುರ್ ಬೆಳ್ವೆ ಸಹಕರಿಸಿದರು
ಹುಝೈಫ್ ಕುರಾನ್ ಪಠಣಾಗೈದು ಪ್ರಾರ್ಥಿಸಿದರು. ಮೊಹಮ್ಮದ್ ರಬಿ ಕಾರ್ಯಕ್ರಮ ನಿರೂಪಿಸಿ ಜಾಸಿಂ ಬೆಳ್ವೆ ವಂದಿಸಿದರು .

LEAVE A REPLY

Please enter your comment!
Please enter your name here