₹2.25 ಕೋಟಿ ಯೋಜನೆಗೆ ಚಾಲನೆ: ಪೆರಂಪಳ್ಳಿ ಶೀಂಬ್ರ ಮಹಾಗಣಪತಿ ದೇವಸ್ಥಾನದ ಬಳಿ ಸಂರಕ್ಷಣೆ ಕಾರ್ಯ ಆರಂಭ

0
125

ಮೂಡು ಪೆರಂಪಳ್ಳಿ ವಾರ್ಡಿನ ಶೀಂಬ್ರ ಮಹಾಗಣಪತಿ ದೇವಸ್ಥಾನದ ಹತ್ತಿರ ಸಣ್ಣ ನೀರಾವರಿ ಇಲಾಖೆಯ ಅನುದಾನದಲ್ಲಿ 2.25 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಸಂರಕ್ಷಣಾ ಕಾಮಗಾರಿಗೆ ಶಾಸಕ ಯಶ್ ಪಾಲ್ ಸುವರ್ಣ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಯಶ್ ಪಾಲ್ ಸುವರ್ಣ ಪ್ರತಿವರ್ಷ ಕೃಷ್ಣಂಗಾರಕ ಚತುರ್ದಶಿಯಂದು ಸಾವಿರಾರು ಭಕ್ತರು ತೀರ್ಥಸ್ನಾನಕ್ಕೆ ಆಗಮಿಸುವ ಶೀಂಬ್ರ ಮಹಾಗಣಪತಿ ದೇವಸ್ಥಾನದ ಸ್ನಾನಘಟ್ಟ ಕಳೆದ ಎರಡು ವರ್ಷದ ಹಿಂದೆ ತೀವ್ರ ನದಿ ಕೊರೆತದಿಂದ ಕೊಚ್ಚಿ ಹೋಗಿ ಭಕ್ತಾದಿಗಳಿಗೆ ಸಮಸ್ಯೆ ಉಂಟಾಗಿತ್ತು. ಈ ಬಗ್ಗೆ ತಕ್ಷಣ ಕಾಮಗಾರಿ ನಡೆಸಿ ಶಾಶ್ವತ ಪರಿಹಾರ ರೂಪಿಸುವ ನಿಟ್ಟಿನಲ್ಲಿ ಸಂರಕ್ಷಣಾ ಕಾಮಗಾರಿಗೆ ಸಣ್ಣ ನೀರಾವರಿ ಇಲಾಖೆಯ ಮೂಲಕ ಪ್ರಸ್ತಾವನೆ ಸಲ್ಲಿಸಿ ಇದೀಗ ಮಂಜೂರಾದ 2.25 ಕೋಟಿ ವೆಚ್ಚದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.

ಶೀಂಬ್ರ ಮಹಾಗಣಪತಿ ದೇವಸ್ಥಾನದ ಪ್ರಮುಖರಾದ ಇಂಜಿನಿಯರ್ ಕೆ.ರಮೇಶ್ ರಾವ್ ಮಾತನಾಡಿ ದೇವಸ್ಥಾನಕ್ಕೆ ತೀರ ಅಪಾಯಕಾರಿಯಾಗಿ ನದಿ ಕೊರೆತದಿಂದ ಸಮಸ್ಯೆ ಉಂಟಾಗುವ ಸಂದರ್ಭದಲ್ಲಿ ಭೇಟಿ ನೀಡಿದ್ದ ಶಾಸಕರು ವಿಶೇಷ ಮುತುವರ್ಜಿ ವಹಿಸಿ ಇದೀಗ ಕಾಮಗಾರಿಗೆ ಅನುದಾನ ಒದಗಿಸಿ ಸಂರಕ್ಷಣ ಕಾಮಗಾರಿ ಆರಂಭಿಸುವ ಮೂಲಕ ದೇವಸ್ಥಾನದ ಆಡಳಿತ ಮಂಡಳಿಯ ಪ್ರಮುಖ ಬೇಡಿಕೆಯನ್ನು ಈಡೇರಿಸಿದ್ದಾರೆ ಎಂದರು. ಸಾಮಾಜಿಕ ಕಾರ್ಯಕರ್ತ ವಾಸುದೇವ ಭಟ್ ಪೆರಂಪಳ್ಳಿ ಶಾಸಕ ಯಶ್ ಪಾಲ್ ಸುವರ್ಣರ ವಿಶೇಷ ಮುತುವರ್ಜಿಯಿಂದ ಸ್ನಾನ ಘಟ್ಟ ಕಾಮಗಾರಿ ಆರಂಭಗೊಂಡಿದ್ದು, ದೇವಸ್ಥಾನದ ಸಂಪರ್ಕ ರಸ್ತೆ ಕಾಂಕ್ರಿಟೀಕರಣ ನಡೆಸಿ ಭಕ್ತರಿಗೆ ಅನುಕೂಲ ಕಲ್ಪಿಸಿದ ಶಾಸಕರಿಗೆ ಭಕ್ತರ ಪರವಾಗಿ ಧನ್ಯವಾದ ಸಲ್ಲಿಸಿದರು.

ಈ ಸಂದರ್ಭಲ್ಲಿ ದೇವಳದ ಅರ್ಚಕರಾದ ನವೀನ್ ಶಿವತ್ತ, ಸ್ಥಳೀಯ ನಗರಸಭಾ ಸದಸ್ಯೆ ಶ್ರೀಮತಿ ಅನಿಟ ಡಿಸೋಜ, ಆರ್ಕಿಟೆಕ್ಟ್ ರಾಜೇಂದ್ರ ಮಯ್ಯ ,ಮಾಜಿ ನಗರಸಭಾ ಸದಸ್ಯ ಪ್ರಶಾಂತ್ ಭಟ್ , ನಗರ ಬಿಜೆಪಿ ಅಧ್ಯಕ್ಷ ಶ್ರೀ ದಿನೇಶ್ ಅಮೀನ್, ಪ್ರಮುಖರಾದ ಡೆನಿಸ್ ಮಸ್ಕರೇನಸ್ , ಶಶಾಂಕ್ ಶಿವತ್ತಾಯ , ವಿಜಯ ಪೂಜಾರಿ, ಸಂತೋಷ್ ಅಮೀನ್, ಸುಮ, ಯಶೋಧರ್ ಅಮೀನ್, ಲೀನಾ, ರಂಜಿತ್, ಸತೀಶ್, ಶೆರ್ಲಿನ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here