ಕಡಂದಲೆ ಗ್ರಾಮದಲ್ಲಿ ವಾಮಾಚಾರ ಶಂಕೆ: ಗ್ರಾಮಸ್ಥರಿಂದ ಪೊಲೀಸರಿಗೆ ದೂರು

0
253

ವರದಿ : ಜಗದೀಶ್‌ ಪೂಜಾರಿ ಕಡಂದಲೆ

ಮೂಡುಬಿದಿರೆ: ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಂದಲೆ ಗ್ರಾಮದಲ್ಲಿ‌ ಕಳೆದ‌ ಕೆಲವು ದಿನಗಳಿಂದ ಪ್ರೇತಾ ಉಚ್ಚಾಟನೆಯ‌ ಮಾದರಿಯಲ್ಲಿ ಯಾರೋ ವಾಮಾಚಾರ ನಡೆಸುತ್ತಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಿರುವ ಗ್ರಾಮಸ್ಥರು ಮೂಡುಬಿದಿರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪಾಲಡ್ಕ ಗ್ರಾಮ‌ ಪಂಚಾಯತ್ ಸದಸ್ಯ ಜಗದೀಶ್ ಕೋಟ್ಯಾನ್ ಅವರು ಈ ಸಂಬಂಧ ಪೊಲೀಸರಿಗೆ ಮಂಗಳವಾರ‌ ದೂರು ನೀಡಿದ್ದಾರೆ. ಗ್ರಾಮದ ಜೋಡುಕಟ್ಟೆ ಹಾಗೂ ಜನತಾ‌ನಗರ ಸಂಪರ್ಕಿಸುವ, ಮೂರು ರಸ್ತೆಗಳ ಕೂಡುವ ರಸ್ತೆಯಲ್ಲಿ ಹಲವು ಬಾರಿ ಪ್ರೇತ ಉಚ್ಛಾಟನೆ ವಾಮಾಚಾರ ನಡೆಸುತ್ತಿರುವುದು ಕಂಡುಂದಿದೆ. ಅದಕ್ಕೆ ಪುಷ್ಠಿ ನೀಡುವ ಕೆಲವು ವಸ್ತುಗಳು ರಸ್ತೆಯಲ್ಲಿ ಕಾಣಸಿಕ್ಕಿದೆ. ಶಾಲಾ ಮಕ್ಕಳು ಸಹಿತ ಸಾರ್ವಜನಿಕರೇ ಹೆಚ್ಚು ಓಡಾಡುವ ಈ ಸ್ಥಳದಲ್ಲಿ ಈ ರೀತಿಯ ಕೃತ್ಯ ಮಾಡಿದ್ದು, ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ. ದೂರು ಸ್ವೀಕರಿಸಿದ ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ.

LEAVE A REPLY

Please enter your comment!
Please enter your name here