ವಿಟ್ಲದಲ್ಲಿ ನಡೆದ ಜೆ.ಸಿ.ಐ ಭಾರತ ವಲಯ ೧೫ರ ಪದಗ್ರಹಣ ಸಮಾರಂಭದಲ್ಲಿ ಪ್ರತಿಷ್ಟಿತ ಜೆ.ಸಿ.ಐ ಕುಂದಾಪುರದ ಸುವಣ೯ ವಷ೯ದ ಅಧ್ಯಕ್ಷರಾದ ಶ್ರೀ ಸುಬ್ರಹ್ಮಣ್ಯ ಆಚಾಯ೯ ಗುಲ್ವಾಡಿ ಇವರು ಜೆ.ಸಿ.ಐ ವಲಯ ೧೫ರ ವಲಯ ಸಂಯೋಜಕರಾಗಿ ಆಯ್ಕೆಯಾಗಿದ್ದಾರೆ ಬ್ರಾಂಡಿಂಗ್ ಹಾಗೂ ಸೋಶೀಯಲ್ ಮೀಡಿಯಾ ಕವರೇಜ್ ವಿಭಾಗದಲ್ಲಿ ಸೇವೆ ಸಲ್ಲಿಸಲಿದ್ದು,೨೦೨೬ರ ವಲಯಾಧ್ಯಕ್ಷರಿಂದ ಪ್ರಮಾಣ ವಚನ ಪಡೆದಿರುತ್ತಾರೆ.
ಜೆ.ಸಿ.ಐ ಕುಂದಾಪುರ ಸುವಣ೯ ಮಹೊತ್ಸವ ಪಡೆದ ಸಂಸ್ಥೆಯಾಗಿದ್ದು ಅನೇಕ ಸಾಮಾಜಿಕ ಸೇವೆಗಳ ಮೂಲಕ ಜನ ಮನ್ನಣೆ ಪಡೆದ ಸಂಸ್ಥೆಯಾಗಿದ್ದು,ಇವರ ನೇತೃತ್ವದ ತಂಡ ಅನೇಕ ಕಾಯ೯ಕ್ರಮಗಳು,ತರಭೇತಿ ,ಶಾಲಾ ಕಾಲೇಜು ಭಾಗದಲ್ಲಿ ಮೌಲ್ಯಾಧಾರಿತ ವ್ಯಕ್ತಿತ್ವ ವಿಕಸನಗಳು ಇನ್ನೂ ಅನೇಕ ಕಾಯ೯ಕ್ರಮಗಳನ್ನು ನಡೆಸಿರುತ್ತಾರೆ

