ಲೋಲಾಪಲೂಜಾ ಇಂಡಿಯಾ 2026ರಲ್ಲಿ ಏರ್‌ಬಿಎನ್‌ಬಿಯಿಂದ ವಿಶೇಷ ಕಾರ್ಯಕ್ರಮಗಳು

0
37


● ಲೋಲಾಪಲೂಜಾ ಇಂಡಿಯಾ 2026ರಲ್ಲಿ ಏರ್‌ಬಿಎನ್‌ಬಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಈಗಲೇ ಬುಕ್ ಮಾಡಬಹುದು.
● ಅಭಿಮಾನಿಗಳು ಬ್ಯಾಕ್‌ಸ್ಟೇಜ್‌ನಲ್ಲಿ ನಡೆಯುವ ಆಗುಹೋಗುಗಳು, ಕಲಾವಿದರು ನಡೆಸುವ ಸೆಷನ್‌ಗಳು ಮತ್ತು ಅಂಕುರ್ ತಿವಾರಿ, ಓಎಎಫ್ಎಫ್ ಮತ್ತು ಸವೇರಾ ಹಾಗೂ ರಾಶಿ ಸಂಘವಿ ಅವರು ಸಿದ್ಧಪಡಿಸಿದ ಬಿಹೈಂಡ್ ದಿ ಸೀನ್ ಗಳನ್ನು ಆನಂದಿಸಬಹುದು.
ಏರ್‌ಬಿಎನ್‌ಬಿ ಸಂಸ್ಥೆಯು ಇದೇ ಮೊದಲ ಬಾರಿಗೆ ಗ್ಲೋಬಲ್ ಲೈವ್ ಮ್ಯೂಸಿಕ್ ಕಾರ್ಯಕ್ರಮದ ಜೊತೆ ಸಹಭಾಗಿತ್ವ ಮಾಡಿಕೊಂಡಿದ್ದು, ಅದರ ಭಾಗವಾಗಿ ಜನವರಿ 24 ಮತ್ತು 25ರಂದು ಮುಂಬೈಯ ಮಹಾಲಕ್ಷ್ಮಿ ರೇಸ್‌ಕೋರ್ಸ್‌ನಲ್ಲಿ ನಡೆಯಲಿರುವ ಲೋಲಾಪಲೂಜಾ ಇಂಡಿಯಾ 2026ರಲ್ಲಿ ವಿಶೇಷ ಅನುಭವ ಒದಗಿಸುವ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.
ಇದು ಭಾರತದಲ್ಲಿ ಏರ್‌ಬಿಎನ್‌ಬಿಯ ಹೊಸ ಅಧ್ಯಾಯವಾಗಿದ್ದು, ಪ್ರಯಾಣ, ಸಂಸ್ಕೃತಿ ಮತ್ತು ಸೃಜನಶೀಲತೆಯ ಮೂಲಕ ಜನರನ್ನು ಪರಸ್ಪರ ಸಂಪರ್ಕಿಸುವ ಏರ್‌ಬಿಎನ್‌ಬಿಯ ಬದ್ಧತೆಯನ್ನು ಮತ್ತಷ್ಟು ಬಲಪಡಿಸುತ್ತದೆ.
ಬ್ಯಾಕ್‌ಸ್ಟೇಜ್ ಟೂರ್‌ಗಳು, ಕಲಾವಿದರು ನಡೆಸುವ ಸೃಜನಶೀಲ ಸೆಷನ್‌ಗಳು ಮತ್ತು ಲೋಲಾಪಲೂಜಾ ಇಂಡಿಯಾ ಇನ್‌ಸೈಡರ್ ಮಾರ್ಗದರ್ಶನದಲ್ಲಿ ಸಿದ್ಧಪಡಿಸಲಾದ ಬಿಹೈಂಡ್ ದಿ ಸೀನ್ ಅನುಭವ- ಹೀಗೆ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಪ್ರತೀ ಅನುಭವವೂ ಭಾರತದ ಅದ್ದೂರಿ ಸಂಗೀತ ಉತ್ಸವಗಳಲ್ಲಿ ಒಂದಾದ ಈ ಕಾರ್ಯಕ್ರಮವನ್ನು ಮತ್ತಷ್ಟು ಅವಿಸ್ಮರಣೀಯಗೊಳಿಸಲಿದೆ.
ಈ ಕುರಿತು ಮಾತನಾಡಿರುವ ಏರ್‌ಬಿಎನ್‌ಬಿಯ ಭಾರತ ಮತ್ತು ಆಗ್ನೇಯ ಏಷ್ಯಾದ ಕಂಟ್ರಿ ಹೆಡ್ ಅಮನ್‌ಪ್ರೀತ್ ಬಜಾಜ್ ಅವರು, “ಲೈವ್ ಮ್ಯೂಸಿಕ್ ಮತ್ತು ಪ್ರಯಾಣ ಯಾವಾಗಲೂ ಜತೆಯಲ್ಲಿಯೇ ಇರುತ್ತವೆ. ಜನರು ಕೇವಲ ಸಂಗೀತೋತ್ಸವಗಳಿಗೆ ಹಾಜರಾಗುವುದಿಲ್ಲ, ಜೊತೆಗೆ ಅವರು ಆ ಉತ್ಸವಗಳನ್ನು ಆಯೋಜಿಸುವ ನಗರಗಳನ್ನು ಸುತ್ತಾಡುತ್ತಾರೆ. ವಿಶೇಷ ಕ್ಷಣಗಳ ಅನುಭ ಹೊಂದುತ್ತಾರೆ. ಲೋಲಾಪಲೂಜಾ ಜೊತೆಗಿನ ನಮ್ಮ ಪಾಲುದಾರಿಕೆಯ ಭಾಗವಾಗಿ ಏರ್‌ಬಿಎನ್‌ಬಿ ರೂಪಿಸಿರುವ ವಿಶೇಷ ಕಾರ್ಯಕ್ರಮಗಳ ಮೂಲಕ ಅಭಿಮಾನಿಗಳನ್ನು ಆ ಜಗತ್ತಿಗೆ ಇನ್ನಷ್ಟು ಹತ್ತಿರ ತರುತ್ತದೆ. ಈ ಕಾರ್ಯಕ್ರಮಗಳು ಅವರಿಗೆ ಉತ್ಸವವನ್ನು ಕೇವಲ ಅತಿಥಿಗಳಾಗಿ ಅಲ್ಲ, ಕಾರ್ಯಕ್ರಮದ ಭಾಗವಾಗಿರುವ ಇನ್‌ಸೈಡರ್‌ಗಳಾಗಿ ನೋಡುವ ಅಪರೂಪದ ಅವಕಾಶವನ್ನು ಕಲ್ಪಿಸುತ್ತದೆ” ಎಂದು ಹೇಳಿದರು.
ಲೋಲಾಪಲೂಜಾ ಇಂಡಿಯಾದಲ್ಲಿ ಅಂಕುರ್ ತಿವಾರಿಯವರ ಜೊತೆ ಸೇರಿ
ಭಾರತದ ಅತ್ಯಂತ ಜನಪ್ರಿಯ ಗಾಯಕ-ಗೀತರಚನೆಕಾರ, ಸಂಯೋಜಕ ಮತ್ತು ಕಥೆಗಾರ ಅಂಕುರ್ ತಿವಾರಿಯವರ ಜೊತೆಗೆ ಬಿಹೈಂಡ್ ದಿ ಸೀನ್ ಅನುಭವಗಳನ್ನು ನಿಮ್ಮದಾಗಿಸಿಕೊಳ್ಳಬಹುದು. ಈ ವಿಶೇಷ ಏರ್‌ಬಿಎನ್‌ಬಿ ಕಾರ್ಯಕ್ರಮವು ಅಭಿಮಾನಿಗಳನ್ನು ಅಂಕುರ್ ಅವರ ಸೃಜನಶೀಲ ಜಗತ್ತಿಗೆ ಕರೆದೊಯ್ಯುತ್ತದೆ. ಅವರ ಗುಂಪಿನೊಂದಿಗೆ ಬ್ಯಾಕ್‌ಸ್ಟೇಜ್ ಪ್ರವೇಶ, ಪ್ರದರ್ಶನಕ್ಕೆ ಮುಂಚಿನ ಅಭ್ಯಾಸಗಳ ವೀಕ್ಷಣೆ ಮತ್ತು ಲೋಲಾಪಲೂಜಾ ಇಂಡಿಯಾದ ಆಫ್ಟರ್‌ಶೋದಲ್ಲಿ ಭಾಗವಹಿಸುವಿಕೆ ಇತ್ಯಾದಿ ಅನುಭವ ಹೊಂದಬಹುದು.
ಜನವರಿ 24, 2026ರಂದು ಈ ಅನುಭವ ನಿಮ್ಮದಾಗಿಸಿಕೊಳ್ಳಬಹುದಾಗಿದ್ದು, ಇಲ್ಲಿ ಬುಕ್ ಮಾಡಬಹುದು.
ಓಎಎಫ್ಎಫ್ ಮತ್ತು ಸವೇರಾ ಜೊತೆ ವಿಶೇಷ ಅನುಭವ ಹೊಂದಿರಿ
ಭಾರತದ ಅತ್ಯಂತ ಜನಪ್ರಿಯ ಸೌಂಡ್‌ಟ್ರ್ಯಾಕ್‌ಗಳು ಮತ್ತು ಹಿಟ್‌ ಗೀತೆಗಳ ಹಿಂದಿನ ಪ್ರಸಿದ್ಧ ಸಂಯೋಜಕ-ನಿರ್ಮಾಪಕ ಜೋಡಿಯಾಗಿರುವ ಓಎಎಫ್ಎಫ್ ಮತ್ತು ಸವೇರಾ ಜೊತೆಗೆ ಸೇರಿಕೊಳ್ಳಿ. ಚಲನಚಿತ್ರ, ಪಾಪ್ ಮತ್ತು ಪ್ರಾಯೋಗಿಕ ಸಂಗೀತಕ್ಕೆ ಸೇತುವೆ ನಿರ್ಮಿಸುವ ಧ್ವನಿಯ ಮೂಲಕ ಅವರು ಭಾರತದ ಬೆಳೆಯುತ್ತಿರುವ ಸಮಕಾಲೀನ ಸಂಗೀತದ ಪ್ರಮುಖ ಶಕ್ತಿಯಾಗಿ ಹೊರಹೊಮ್ಮಿದ್ದಾರೆ. ಈ ಆಕರ್ಷಕ ಏರ್‌ಬಿಎನ್‌ಬಿ ಕಾರ್ಯಕ್ರಮದಲ್ಲಿ ಅತಿಥಿಗಳು ಈ ಜೋಡಿಯ ಜೊತೆ ಸ್ಟೇಜ್ ನ ಹಿಂದೆ ಹೋಗುತ್ತಾರೆ. ಅವರ ಪ್ರದರ್ಶನಕ್ಕೆ ಮೊದಲ ಸೃಜನಶೀಲ ಅಭ್ಯಾಸ ಪ್ರಕ್ರಿಯೆಗೆ ಸಾಕ್ಷಿಯಾಗುತ್ತಾರೆ ಮತ್ತು ಅವರ ತಂಡದ ಜೊತೆ ಸಂಪರ್ಕ ಸಾಧಿಸುತ್ತಾರೆ. ಭಾರತದ ಅತ್ಯಂತ ಪ್ರತಿಭಾವಂತ ಕಲಾವಿದರು ಸ್ಟುಡಿಯೋದಿಂದ ಸ್ಟೇಜ್‌ವರೆಗೆ ಹೇಗೆ ಇರುತ್ತಾರೆ ಎಂಬುದನ್ನು ನೋಡುವ ಅಪರೂಪದ ಅವಕಾಶವಿದು.
ಈ ಅನುಭವವನ್ನು ಜನವರಿ 25, 2026ರಂದು ಆನಂದಿಸಬಹುದಾಗಿದೆ ಮತ್ತು ಇಲ್ಲಿ ಬುಕ್ ಮಾಡಬಹುದು.
ರಾಶಿ ಸಂಘವಿ ಜೊತೆ ಬಿಹೈಂಡ್ ದಿ ಸೀನ್ ಟೂರ್
ಲೋಲಾಪಲೂಜಾ ಇಂಡಿಯಾದ ಇನ್‌ಸೈಡರ್ ಆಗಿರುವ ರಾಶಿ ಸಂಘವಿ ಅವರ ಜೊತೆ ಭಾರತದ ಅತಿ ದೊಡ್ಡ ಲೈವ್ ಸಂಗೀತ ಕಾರ್ಯಕ್ರಮವೊಂದು ಹೇಗೆ ರೂಪುಗೊಳ್ಳುತ್ತದೆ ಎಂಬ ಅರಿವನ್ನು ಮೂಡಿಸುವ ಬಿಹೈಂಡ್ ದಿ ಸೀನ್ ಟೂರ್ ಅನುಭವ ಪಡೆಯಿರಿ. ಉತ್ಸವ ಆಯೋಜನೆ ಮತ್ತು ಜಾಗತಿಕ ಪಾಲುದಾರಿಕೆಗಳ ಹಿಂದಿನ ದೊಡ್ಡ ಶಕ್ತಿಯಾಗಿರುವ ರಾಶಿ ಅವರು ಲೈವ್ ಮನೋರಂಜನೆ, ಬ್ರ್ಯಾಂಡ್ ಸಹಯೋಗಗಳು ಮತ್ತು ದೊಡ್ಡ ಪ್ರಮಾಣದ ಕಾರ್ಯಕ್ರಮ ನಿರ್ವಹಣೆಯಲ್ಲಿ ಹಲವು ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಈ ಅನುಭವದ ಮೂಲಕ ರಾಶಿ ಅವರು ಸೊಗಸಾದ ಕಥೆಗಳನ್ನು, ಒಳನೋಟಗಳನ್ನು ಮತ್ತು ಉತ್ಸವದ ಮಾಹಿತಿಗಳನ್ನು ಹಂಚಿಕೊಳ್ಳಲಿದ್ದಾರೆ. ನೀವು ಸಂಗೀತ ಪ್ರೇಮಿ ಅಥವಾ ದೊಡ್ಡ ಪ್ರಮಾಣದ ಲೈವ್ ಕಾರ್ಯಕ್ರಮಗಳು ಹೇಗೆ ರೂಪುಗೊಳ್ಳುತ್ತವೆ ಎಂಬ ಕುತೂಹಲಿಗಳಾಗಿದ್ದರೆ ನಿಮಗೆ ಈ ಅವಕಾಶ ಸೊಗಸಾದ ಅನುಭವ ನೀಡಲಿದೆ.
ಈ ಅನುಭವವನ್ನು ಜನವರಿ 24, 2026ರಂದು ಹೊಂದಬಹುದಾಗಿದೆ ಮತ್ತು ಇಲ್ಲಿ ಬುಕ್ ಮಾಡಬಹುದು.
ಈ ಕುರಿತು ಮಾತನಾಡಿದ ಬುಕ್‌ಮೈಶೋನ ಲೈವ್ ಈವೆಂಟ್ಸ್‌ ನ ಚೀಫ್ ಬಿಸಿನೆಸ್ ಆಫೀಸರ್ ನಮನ್ ಪುಗಳಿಯಾ ಅವರು, “ಲೋಲಾಪಲೂಜಾ ಇಂಡಿಯಾ ಅತ್ಯುತ್ತಮ ಪ್ರದರ್ಶನಗಳ ಜೊತೆಗೆ ಸಂಗೀತದ ಜೊತೆ ಮಿಳಿತವಾಗಿರುವ ಸಂಸ್ಕೃತಿ, ಸಮುದಾಯ ಮತ್ತು ಸೃಜನಶೀಲತೆಯ ಸಂಭ್ರಮವನ್ನು ದಾಟಿಸುತ್ತದೆ. ಏರ್‌ಬಿಎನ್‌ಬಿ ಜೊತೆಗಿನ ಸಹಭಾಗಿತ್ವದ ಮೂಲಕ ನಾವು ಅನುಭವವನ್ನು ಮತ್ತಷ್ಟು ಗಾಢಗೊಳಿಸುತ್ತಿದ್ದೇವೆ. ಅಭಿಮಾನಿಗಳಿಗೆ ಸಂಗೀತೋತ್ಸವವನ್ನು ರೂಪಿಸುವ ಜನರನ್ನು ನೋಡುವ, ಅಲ್ಲಿನ ಕಥೆಗಳನ್ನು ಕೇಳುವ ಮತ್ತು ಆ ಮಾಯಕ ಕ್ಷಣಗಳಿಗೆ ಸಾಕ್ಷಿಯಾಗುವ ಅವಕಾಶ ಒದಗಿಸುತ್ತಿದ್ದೇವೆ. ಈ ವಿಶೇಷತೆಗಳು ಲೋಲಾಪಲೂಜಾ ಇಂಡಿಯಾವನ್ನು ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರಕ್ಕೆ ತರಲಿದೆ” ಎಂದು ಹೇಳಿದರು.
ಹೇಗೆ ಬುಕ್ ಮಾಡಬೇಕು:
● ಪ್ರತೀ ವಿಶೇಷ ಕಾರ್ಯಕ್ರಮದ ಬೆಲೆ ₹5850 ಆಗಿರುತ್ತದೆ.
● ಅನುಭವಗಳ ಬುಕಿಂಗ್ ಡಿಸೆಂಬರ್ 15ರಂದು ಬೆಳಗ್ಗೆ 10 ಗಂಟೆಗೆ ಆರಂಭವಾಗಿದೆ.
● ಮೊದಲು ಬಂದವರಿಗೆ ಮೊದಲ ಸೀಟು ಆದ್ಯತೆ ನೀಡಲಾಗುತ್ತದೆ.
● ಅತಿಥಿಗಳು ಮುಂಬೈಗೆ ಮತ್ತು ಅಲ್ಲಿಂದ ಹಿಂದಿರುಗುವ ಪ್ರಯಾಣಕ್ಕೆ ತಾವೇ ಜವಾಬ್ದಾರರಾಗಿರುತ್ತಾರೆ.
ಲೋಲಾಪಲೂಜಾ ಇಂಡಿಯಾ 2026 ಲಾಂಗ್ ವೀಕೆಂಡ್‌ನಲ್ಲಿ ನಡೆಯುತ್ತಿರುವುದರಿಂದ, ಏರ್‌ಬಿಎನ್‌ಬಿ ನಗರದಲ್ಲಿನ ಅತ್ಯಂತ ಆಕರ್ಷಕ ವಾಸ್ತವ್ಯ ಸೌಲಭ್ಯಗಳನ್ನು ಒದಗಿಸುತ್ತದೆ. ಈ ಮೂಲಕ ಸಂಗೀತೋತ್ಸವ ಮತ್ತು ಮುಂಬೈ ಅನ್ನು ಸುಲಭವಾಗಿ ಆನಂದಿಸಲು ಸಹಾಯ ಮಾಡುತ್ತದೆ

LEAVE A REPLY

Please enter your comment!
Please enter your name here