ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ದೋಣಿಯಿಂದ ಮೀನುಗಾರರೊಬ್ಬರು ಆಯತಪ್ಪಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ಬೈಂದೂರು ಉಪ್ಪುಂದ ಗ್ರಾಮದ ಮೆಡಿಕಲ್ ಬಳಿ ನಡೆದಿದೆ . ಮೃತರನ್ನು ಹರಿಶ್ಚಂದ್ರ ಖಾರ್ವಿ ಎಂದು ಗುರುತಿಸಲಾಗಿದೆ . ಇವರು ದೋಣಿಯಲ್ಲಿ ಇತರ ಮೀನುಗಾರರೊಂದಿಗೆ ಡಿ.15 ರಂದು ಸಂಜೆ ಮೀನುಗಾರಿಕೆಗೆ ತೆರಳಿದ್ದು , ಸಮುದ್ರ ಮಧ್ಯೆ ಮೀನುಗಾರಿಕೆ ಮಾಡುತ್ತಿದ್ದಾಗ ಹರಿಶ್ಚಂದ್ರ ಖಾರ್ವಿ ದೋಣಿಯಿಂದ ಆಯತಪ್ಪಿ ನೀರಿಗೆ ಬಿದ್ದರು ಎಂದು ಹೇಳಲಾಗಿದೆ . ಕೂಡಲೇ ಅವರನ್ನು ಇತರ ಮೀನುಗಾರರು ನೀರಿನಿಂದ ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲಿಸಿದರು. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಇವರು ಡಿ.18 ರಂದು ಬೆಳಗ್ಗೆ ಇವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ .

