ಬೆಂಗಳೂರು: ಲೆಕ್ಸಸ್ ಇಂಡಿಯಾ ತನ್ನ ಮುಂಚೂಣಿಯ ಅಲ್ಟ್ರಾ–ಐಷಾರಾಮಿ ಎಂಪಿವಿಯಾದ ಎಲ್‌ಎಂ 350ಎಚ್ ಮಾದರಿಯ ಬಲಿಷ್ಠ ಕಾರ್ಯಕ್ಷಮತೆಯ ಅಪ್‌ಡೇಟ್ ಪ್ರಕಟಿಸಿದ್ದು, ನವೆಂಬರ್ 2025ರಲ್ಲಿ ಶೇ.40ರಷ್ಟು ಬೆಳವಣಿಗೆ ದಾಖಲಿಸಿದೆ. ಜೊತೆಗೆ ಜನವರಿಯಿಂದ ನವೆಂಬರ್ 2025ರ ಅವಧಿಯಲ್ಲಿ, ಹಿಂದಿನ ವರ್ಷದ ಅದೇ ಅವಧಿಗೆ ಹೋಲಿಸಿದರೆ ಒಟ್ಟಾರೆ ಶೇ.15ರಷ್ಟು ವೃದ್ಧಿ ಕಂಡಿದೆ.
ಅಲ್ಟ್ರಾ–ಲಕ್ಷುರಿ ಮೊಬಿಲಿಟಿ ವಿಭಾಗದಲ್ಲಿ ಎಲ್‌ಎಂ 350ಎಚ್ ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿದ್ದು, ಉದ್ದೇಶಪೂರ್ಣ ವಿನ್ಯಾಸ, ಉನ್ನತ ಸೌಖ್ಯ ಹಾಗೂ ಅತ್ಯಾಧುನಿಕ ಅನುಕೂಲಗಳೊಂದಿಗೆ ಗ್ರಾಹಕರನ್ನು ಆಕರ್ಷಿಸುತ್ತಿದೆ. ಪ್ರಯಾಣವನ್ನು ತಮ್ಮ ವೈಯಕ್ತಿಕ ಸ್ಥಳದ ವಿಸ್ತರಣೆಯಾಗಿ ಕಾಣುವ ಅತಿಥಿಗಳಿಗಾಗಿ ಈ ವಾಹನವನ್ನು ವಿನ್ಯಾಸಗೊಳಿಸಲಾಗಿದೆ.
‘ಲಕ್ಸುರಿ ಲೌಂಜ್ ಆನ್ ವೀಲ್ಸ್’ ಎಂಬ ಪರಿಕಲ್ಪನೆಯೊಂದಿಗೆ ರೂಪುಗೊಂಡಿರುವ ಎಲ್‌ಎಂ 350ಎಚ್, ಲೆಕ್ಸಸ್‌ನ ಒಮೊಟೆನಾಶಿ ತತ್ವವನ್ನು ಪ್ರತಿಬಿಂಬಿಸುತ್ತದೆ. ಕ್ಯಾಬಿನ್ ಸಂಪೂರ್ಣವಾಗಿ ಶಾಂತ ಮತ್ತು ಪ್ರಯತ್ನರಹಿತ ಸೌಖ್ಯ ನೀಡುವಂತೆ ವಿನ್ಯಾಸಗೊಂಡಿದ್ದು, ಸುಧಾರಿತ ಹೈಬ್ರಿಡ್ ತಂತ್ರಜ್ಞಾನದಿಂದ ಮೃದು ಹಾಗೂ ಬಹುತೇಕ ನಿಶ್ಯಬ್ದ ಪ್ರಯಾಣ, ನಿಖರ ನಿರ್ವಹಣೆ ಮತ್ತು ಅತ್ಯುತ್ತಮ ಹಿಂಬದಿ ಆಸನ ಸೌಖ್ಯವನ್ನು ಒದಗಿಸುತ್ತದೆ.
ಈ ವಾಹನವು ನಾಲ್ಕು ಸೀಟು ಮತ್ತು ಏಳು ಸೀಟು ಸಂಯೋಜನೆಗಳಲ್ಲಿ ಲಭ್ಯವಿದ್ದು, ಹೆಚ್ಚಿನ ಮೌಲ್ಯ ಹೊಂದಿರುವ ವ್ಯಕ್ತಿಗಳು (HNI) ಹಾಗೂ ಅಲ್ಟ್ರಾ HNI ಗ್ರಾಹಕರಿಗೆ ಅಗ್ರಮಾನ್ಯದ ಐಷಾರಾಮಿ ಮೊಬಿಲಿಟಿ ಅನುಭವವನ್ನು ನೀಡುತ್ತಿದೆ.
ಈ ಕುರಿತು ಮಾತನಾಡಿದ ಲೆಕ್ಸಸ್ ಇಂಡಿಯಾದ ಅಧ್ಯಕ್ಷರಾದ ಶ್ರೀ ಹಿಕರು ಇಕ್ಯೂಚಿ ಅವರು, “ನಮ್ಮ ಅತಿಥಿಗಳು ಲೆಕ್ಸಸ್ ಮೇಲಿಟ್ಟಿರುವ ವಿಶ್ವಾಸ ಮತ್ತು ಎಲ್‌ಎಂ 350ಎಚ್‌ಗೆ ನೀಡುತ್ತಿರುವ ನಿರಂತರ ಬೆಂಬಲಕ್ಕೆ ನಾವು ಅತ್ಯಂತ ಕೃತಜ್ಞರಾಗಿದ್ದೇವೆ. ಈ ವಾಹನವು ವಿಶಾಲತೆ, ನಿಶ್ಯಬ್ದತೆ ಮತ್ತು ಸುಧಾರಿತ ಹೈಬ್ರಿಡ್ ತಂತ್ರಜ್ಞಾನಗಳ ಸಮನ್ವಯದೊಂದಿಗೆ ಐಷಾರಾಮಿ ಮೊಬಿಲಿಟಿಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ದೆಹಲಿ, ಮುಂಬೈ, ಹೈದರಾಬಾದ್ ಹಾಗೂ ಚೆನ್ನೈ ನಗರಗಳಿಂದ ದೊರೆಯುತ್ತಿರುವ ಸ್ಥಿರ ಅಖಿಲ ಭಾರತ ಬೇಡಿಕೆ, ಖಾಸಗಿ ಲೌಂಜ್ ಆನ್ ವೀಲ್ಸ್ ಪರಿಕಲ್ಪನೆಗೆ ಹೆಚ್ಚುತ್ತಿರುವ ಆದ್ಯತೆಯನ್ನು ತೋರಿಸುತ್ತದೆ. ಮುಂದಿನ ದಿನಗಳಲ್ಲಿ ಈ ವಿಭಾಗವನ್ನು ಇನ್ನಷ್ಟು ಸದೃಢಗೊಳಿಸುವತ್ತ ನಾವು ಗಮನ ಹರಿಸುತ್ತಿದ್ದೇವೆ” ಎಂದು ಹೇಳಿದರು.
