ವಿಟ್ಲ : ಪೆರ್ನೆ ವಲಯದ ಮಧುರ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ

0
103

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ ) ವಿಟ್ಲ ತಾಲೂಕಿನ ಪೆರ್ನೆ ವಲಯದ ಮಧುರ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ ಕೆದಿಲ ಶ್ರೀ ದೇವಿ ಮಂದಿರದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆ ಹಿರಿಯ ಸದಸ್ಯರಾದ ಭಾಗಿರತಿಯವರು ನೇರವೇರಿಸಿ ಜ್ಞಾನವಿಕಾಸ ಕೇಂದ್ರಕ್ಕೆ ಶುಭ ಹಾರೈಸಿದರು.

ಒಕ್ಕೂಟದ ಉಪಾಧ್ಯಕ್ಷರು ಕಾರ್ಯಕ್ರಮದಲ್ಲಿ ಭಾಗವಹಿಸಿ ಜ್ಞಾನವಿಕಾಸ ಕೇಂದ್ರದಲ್ಲಿ ಉತ್ತಮ ಮಾಹಿತಿ ದೊರೆಯುತ್ತಿದ್ದು ಇದರ ಸದುಪಯೋಗ ಪಡೆಯುವ೦ತೆ ತಿಸಿದರು. ತಾಲೂಕು ವಿಚಕ್ಷಣಧಿಕಾರಿ ಭಾಗವಹಿಸಿ ಸಂಸ್ಕಾರ ಸಂಸ್ಕೃತಿ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೀನಾಕ್ಷಿಯವರು ವಹಿಸಿದ್ದರು, ಜ್ಞಾನವಿಕಾಸ ಸಮನ್ವಯಧಿಕಾರಿ ಪ್ರಸ್ತಾವಿಕ ಮಾತುಗಳನ್ನಾಡಿದರು , ಕಾರ್ಯಕ್ರದಲ್ಲಿ ಕೇಂದ್ರ ದ ಸದಸ್ಯರು, ಶೌರ್ಯ ತಂಡದ ಸದಸ್ಯರು ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮ ಬಹುಮಾನ ವಿತರಣೆ ಮಾಡಲಾಯಿತು. ಕಾರ್ಯಕ್ರಮ ನಿರೂಪಣೆ ಸೇವಾಪ್ರತಿನಿಧಿ ಶಾರದಾ, ಸ್ವಾಗತ ಸೇವಾಪ್ರತಿನಿಧಿ ಜಯಂತಿ, ಕೇಂದ್ರದ ಸದಸ್ಯರಾದ ಸ್ವಾತಿ ವಂದಿಸಿದರು.

LEAVE A REPLY

Please enter your comment!
Please enter your name here