ವೀರಕಂಭ ಗ್ರಾಮದ ಸ್ನೇಹ ಸಂಜೀವಿನಿ ಒಕ್ಕೂಟದಲ್ಲಿ ಆಟಿದ ಕೂಟ

0
9

ಕಲ್ಲಡ್ಕ : ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದ ಸ್ನೇಹ ಸಂಜೀವಿನಿ ಒಕ್ಕೂಟದಲ್ಲಿ ಆಟಿದ ಕೂಟ ಕಾರ್ಯಕ್ರಮ ಅಗೋಷ್ಟ್ 11 ರ ಮಂಗಳವಾರ ವೀರಕಂಭ ಪಂಚಾಯತ್ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಒಕ್ಕೂಟದ ಅಧ್ಯಕ್ಷೆ ಕುಸುಮಾ ಶೆಟ್ಟಿ ಆಟಿ ತಿಂಗಳ ಬಗ್ಗೆ ಆಹಾರ ಪದ್ಧತಿ ಹಾಗೂ ಆಚರಣೆ ಬಗ್ಗೆ ಮಾಹಿತಿಯನ್ನು ನೀಡಿದರು. ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಗರ್ಭಕಂಠ ಕ್ಯಾನ್ಸರ್ ಬಗ್ಗೆ ಏನ್ ಜಿ ಒ ಅಮಿತಾ ವಿಡಿಯೋ ಮೂಲಕ ಮಾಹಿತಿಯನ್ನು ನೀಡಿದರು.

ಈ ಸಂದರ್ಭದಲ್ಲಿ ರೂಪ ಆಟಿದ ಮದಿಪು ಎಂಬ ಶೀರ್ಷಿಕೆಯೊಂದಿಗೆ ಆಟಿಯ ಬಗ್ಗೆ ವಿವರವಾಗಿ ತಿಳಿಸಿದರು. ಸದಸ್ಯರಾದ ಪ್ರೇಮ ಮತ್ತು ಗೀತಾ ರವರು ನೃತ್ಯ ಮೂಲಕ ಎಲ್ಲರನ್ನು ಮನೋರಂಜಿಸಿದರು. ವೇದ ಮತ್ತು ಗೀತಾ ರವರು ಪಾರ್ದನ ಹಾಡಿದರೂ ಸದಸ್ಯರು ಆಟಿಯ ತಿಂಡಿ ತಿನಸುಗಳನ್ನು ತಮ್ಮ ತಮ್ಮ ಮನೆಯಲ್ಲಿ ತಯಾರಿಸಿ ತಂದು ಪರಸ್ಪರಹಂಚಿಕೊಂಡು ಸಂಭ್ರಮಿಸಿದರು.

ಹಿಂದಿನ ಕಾಲದ ವಸ್ತುಗಳ ಪ್ರದರ್ಶನವನ್ನು ಮಾಡಲಾಯಿತು. ಎಲ್ ಸಿ ಆರ್ ಪಿ ಜಯಂತಿ ಸ್ವಾಗತಿಸಿ,,ಕೃಷಿ ಸಖಿ ನಮಿತ ವಂದಿಸಿದರು.ಪಶು ಸಖಿ ಪ್ರಾಚೀನಾ ಕಾರ್ಯಕ್ರಮ ನಿರೂಪಿಸಿದರು . ಕಾರ್ಯಕ್ರಮದಲ್ಲಿ ಸ್ನೇಹ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರುಗಳು, ಅಂಗನವಾಡಿ ಶಿಕ್ಷಕಿಯರು, ಗ್ರಾಮ ವ್ಯಾಪ್ತಿಯ ಆರೋಗ್ಯ ಸುರಕ್ಷಣಾಧಿಕಾರಿ,ಆಶಾ ಕಾರ್ಯಕರ್ತೆಯರು, ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.