ಮುಚ್ಚೂರು ಜನಾರ್ಧನ ಗೌಡ ಮತ್ತು ಶಿಬ್ರಿಕೆರೆ ವಿಜಯ ಗೌಡರಿಗೆ ಆದಿ ಲೋಕೋತ್ಸವ ಪುರಸ್ಕಾರ

0
77

ವರದಿ ರಾಯಿ ರಾಜ ಕುಮಾರ

ಗೋವಾ ಸರ್ಕಾರ ಮತ್ತು ಆದರ್ಶ ಯುವ ಸಂಘದ ವತಿಯಿಂದ ನೀಡಲಾಗುವ ಆದಿ ಲೋಕೋತ್ಸವ ಪುರಸ್ಕಾರಕ್ಕೆ ಕರ್ನಾಟಕದ ಕುಡುಬಿ ಸಮಾಜದ ಮುಚ್ಚೂರು ಜನಾರ್ಧನ ಗೌಡ ಹಾಗೂ ಶಿಬ್ರಿಕೆರೆ ವಿಜಯ ಗೌಡ ಅವರು ಆಯ್ಕೆಯಾಗಿರುತ್ತಾರೆ.

ಸಮಾಜ ಸೇವೆಯ ಅಡಿಯಲ್ಲಿ ಗುರಿತಿಸಲ್ಪಟ್ಟ ಇವರು ಕುಡುಬಿ ಸಮಾಜದ ಸಂಘಟನೆಯಲ್ಲೂ ಸಾಕಷ್ಟು ದುಡಿದಿರುತ್ತಾರೆ. ಗೋವಾದ ಕಾನಕೋಣದಲ್ಲಿ ನಡೆಯುವ ಸಮಾರಂಭದಲ್ಲಿ ಈ ಪ್ರಶಸ್ತಿಗಳನ್ನು ನೀಡಲಾಗುವುದು ಎಂದು ತಿಳಿದುಬಂದಿದೆ. ಜನವರಿ 9,10,11ರಂದು ಆದಿಲೋಕೋತ್ಸವ ಕಾರ್ಯಕ್ರಮ ನಡೆಯಲಿದೆ.

ವಿಜಯ ಗೌಡ ಶಿಬ್ರಿಕೆರೆ ಕುಡುಬಿ ಜನಾಂಗದ ಪ್ರಥಮ ನೋಟರಿ ವಕೀಲರಾಗಿದ್ದು ಕೊಂಕಣಿ ಸಾಹಿತ್ಯ ಅಕಾಡೆಮಿಯ ಸದಸ್ಯ, ಜಾನಪದ ಕಲಾವಿದ, ರಾಜ್ಯಮಟ್ಟದ ಯೋಗ ಪಟು ಆಗಿರುತ್ತಾರೆ. ಸ್ವಂತ ಹಣದಲ್ಲಿ ಸುಮಾರು ಎರಡೂವರೆ ಕೋಟಿ ರೂಪಾಯಿ ವೆಚ್ಚದ ಸಭಾಭವನ ನಿರ್ಮಿಸಿ ವಿವಿಧ ಕಾರ್ಯಕ್ರಮಗಳಿಗೆ ಉಚಿತವಾಗಿ ಒದಗಿಸುತ್ತಿದ್ದಾರೆ. ಮುಚ್ಚೂರು ಜನಾರ್ಧನ ಗೌಡ ಅವರು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ, ಕುಡುಬಿ ಮಾತೃ ಸಂಘದ ಸ್ಥಾಪಕರಾಗಿ, ಜಿಲ್ಲಾ ಕೊಡುಗೆ ಸಮಾಜ ಸೇವಾ ಸಂಘದ ಸಂಘಟನೆಗೆ ಶ್ರಮಿಸಿದ್ದು ಮಾತ್ರವಲ್ಲ ಅಶಕ್ತ ರೋಗಿಗಳಿಗೆ ನೆರವು ನೀಡುತ್ತಾ ಸಮಾಜದ ಅಭಿವೃದ್ಧಿಗೆ ಪ್ರಯತ್ನಿಸುತ್ತಿದ್ದಾರೆ.
.

LEAVE A REPLY

Please enter your comment!
Please enter your name here