ಕಾರ್ಕಳ ಇನ್ನದ ಮನು ಶೆಟ್ಟಿ : ವಿಕಸಿತ ಭಾರತ ಯಂಗ್ ಲೀಡರ್ಸ್ ಆಯ್ಕೆ

0
70

ವರದಿ ರಾಯಿ ರಾಜ ಕುಮಾರ
ಬೆಂಗಳೂರಿನ ಚಾಣಕ್ಯ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಕಾರ್ಕಳ ತಾಲೂಕಿನ ಇನ್ನ ಗ್ರಾಮದ ಮನು ಶೆಟ್ಟಿ ಆಯ್ಕೆ ಆಗಿರುತ್ತಾರೆ. ಜನವರಿ 9 ರಿಂದ 12ರವರೆಗೆ ದೆಹಲಿಯ ಭಾರತ ಮಂಡಪ್ಪಂನಲ್ಲಿ ನಡೆಯಲಿರುವ ವಿಕಸಿತ ಭಾರತ ಯಂಗ್ ಲೀಡರ್ಸ್ 2026ರಲ್ಲಿ ಅವರು ಭಾಗವಹಿಸಲಿದ್ದಾರೆ.

ಗುಂಪು ಚರ್ಚೆಗಳಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್‌ ಭಾರತದ ಮಹಿಳಾ ಕ್ರಿಕೆಟ್ ನಾಯಕಿ ಹರ್ಮನ್ ಪ್ರೀತ್ ಕೌರ್, ಬ್ಯಾಡ್ಮಿಂಟನ್‌ ಆಟಗಾರ ಪುಲ್ಲಿಲ ಗೋಪಿಚಂದ್‌, ಖ್ಯಾತ ಸಂವಹನ ತಜ್ಞ ಪಲ್ಕಿ ಶರ್ಮ ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ.

ವಿಕಸಿತ ಭಾರತ 2047′ ಗುರಿ ತಲುಪುವಲ್ಲಿ ಯುವಜನತೆಯ ಭೂಮಿಕೆಯನ್ನು ಉತ್ತೇಜಿಸುವ ಮತ್ತು ಅವರ ಯೋಚನೆಗಳನ್ನು ಹಂಚಿಕೊಳ್ಳಲು ಉದ್ದೇಶಿಸಿರುವ ಈ ಕಾರ್ಯಕ್ರಮದಲ್ಲಿ ಸ್ಟಾಪ್ ಇಂಡಿಯಾ ಮಹಿಳಾ ನೇತೃತ್ವ, ಪಾರದರ್ಶಕ ಆಡಳಿತ, ಸಾಂಸ್ಕೃತಿಕ ಪ್ರಭಾವ ಮತ್ತು ಅವಿಷ್ಕಾರ ಮೊದಲಾದ ವಿವಿಧ ಮಹತ್ವದ ಥೀಮ್ ಆಧಾರಿತ ಚರ್ಚೆಗಳು ನಡೆಯಲಿವೆ.

..
.

LEAVE A REPLY

Please enter your comment!
Please enter your name here