ಜ.14 ರಂದು ತುಳುವಿನಿಂದ ಇಂಗ್ಲೀಷ್ ಗೆ ಅನುವಾದಗೊಂಡ ಅಮೃತರ ನಾಟಕ ಕೃತಿ ಬಿಡುಗಡೆ

0
67

ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ ಡಾ. ಅಮೃತ ಸೋಮೇಶ್ವರ ಅವರ 3 ನಾಟಕಗಳ ಇಂಗ್ಲೀಷ್ ಅನುವಾದ ಕೃತಿಯ ಬಿಡುಗಡೆ ಕಾರ್ಯಕ್ರಮ ಜ.14 ರ ಮಧ್ಯಾಹ್ನ 3.00 ಗಂಟೆಗೆ ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಸಾನಿಧ್ಯ ಸಭಾಂಗಣದಲ್ಲಿ ನಡೆಯಲಿದೆ.

ಅಮೃತ ಸೋಮೇಶ್ವರ ಅವರ ‘ಗೊಂದೋಳು’, ‘ಸತ್ಯನಾಪುರತ ಸಿರಿ’, ‘ರಾಯ ರಾವುತೆ’ ಈ ಮೂರು ನಾಟಕ ಕೃತಿಯನ್ನು ಅಲೋಶಿಯಸ್ ವಿ.ವಿ.ಯ ಆಂಗ್ಲ ಭಾಷಾ ಉಪನ್ಯಾಸಕಿ ಡಾ. ಸಿಲ್ವಿಯಾ ರೇಗೊ ಅವರು ಇಂಗ್ಲೀಷ್ ಅನುವಾದಿಸಿರುತ್ತಾರೆ. ವಿಶ್ರಾಂತ ಕುಲಪತಿಗಳಾದ ಡಾ.ಬಿ.ಎ.ವಿವೇಕ ರೈ ಅವರು ಕೃತಿ ಬಿಡುಗಡೆ ಮಾಡುವರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಕುಲಪತಿಗಳಾದ ರೆ.ಡಾ.ಪ್ರವೀಣ್ ಮಾರ್ಟಿಸ್ ಎಸ್.ಜೆ. ವಹಿಸಲಿದ್ದಾರೆ. ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಪ್ರಾಸ್ತಾವಿಕ ಮಾತುಗಳನ್ನಾಡುವರು .

ವಿಶ್ರಾಂತ ಆಕಾಶವಾಣಿ ಕಾರ್ಯಕ್ರಮ ನಿರೂಪಕ ಮುದ್ದು ಮೂಡುಬೆಳ್ಳೆ, ನಿವೃತ್ತ ಸಹ ಪ್ರಾಧ್ಯಾಪಕ ಡಾ. ಚೇತನ್ ಸೋಮೇಶ್ವರ ಮುಖ್ಯ ಅತಿಥಿಯಾಗಿ ಭಾಗವಹಿಸುವರು ಎಂದು ತುಳು ಅಕಾಡೆಮಿಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here