ಮುಳಿಹಿತ್ಲು ,ಮಂಗಳೂರು : 167ನೇ ವರ್ಷದ ಕಲ್ಲುರ್ಟಿ-ಕಲ್ಕುಡ ದೈವಗಳ ಕೋಲ ವಾರ್ಷಿಕ ಮಹೋತ್ಸವ

0
172

ಮುಳಿಹಿತ್ಲು – ಮಂಗಳೂರು : ದಿನಾಂಕ 13-02-2026 ರಿಂದ 16-02-2026 ರವರೆಗೆ , ಶ್ರೀ ಗುರು ತಿಲಕನಾಥ ಸ್ವಾಮಿ ಕ್ಷೇತ್ರ ಕಲ್ಲುರ್ಟಿ-ಕಲ್ಕುಡ ದೈವಸ್ಥಾನ, ಇಲ್ಲಿ 167ನೇ ವರ್ಷದ ಕಲ್ಲುರ್ಟಿ-ಕಲ್ಕುಡ ದೈವಗಳ ಕೋಲ ವಾರ್ಷಿಕ ಮಹೋತ್ಸವವು ನಡೆಯಲಿದೆ.

ದಿನಾಂಕ 13-02-2026 ನೇ ಶುಕ್ರವಾರದಂದು : ಬೆಳ್ಳಿಗ್ಗೆ 8 ಗಂಟೆಗೆ ಗಣಹೋಮ,10-00 ಗಂಟೆಗೆ ಶ್ರೀ ಸತ್ಯನಾರಾಯಣ ಪೂಜೆ,12-00 ಗಂಟೆಗೆ ಶ್ರೀ ಗುರುತಿಲಕನಾಥ ಸ್ವಾಮಿಯವರಿಗೆ ಪಂಚಾಮೃತಾಭಿಷೇಕ, ಗುರುಪೂಜೆ,ಮಧ್ಯಾಹ್ನ 1-00 ಗಂಟೆಗೆ ಅನ್ನ ಪ್ರಸಾದ ವಿತರಣೆ ನಡೆಯಲಿದೆ.

ದಿನಾಂಕ 14-02-2026 ನೇ ಶನಿವಾರ : ಬೆಳ್ಳಿಗ್ಗೆ 10-00 ರಿಂದ 10-30 ರವರೆಗೆ ಮುಡಿಪು ಶುದ್ಧೀಕರಣ,10-30 ಗಂಟೆಗೆ ಶ್ರೀ ನಾಗದೇವರಿಗೆ ತನು-ತಂಬಿಲ, ಪ್ರಸನ್ನ ಪೂಜೆ,11-00 ಗಂಟೆಗೆ ನಾಗದರ್ಶನ,ಮಧ್ಯಾಹ್ನ 1-00 ಗಂಟೆಗೆ ಅನ್ನಪ್ರಸಾದ ವಿತರಣೆ,ರಾತ್ರಿ 7-00 ಗಂಟೆಗೆ ಭಂಡಾರ ಹೊರಡಲಿರುವುದು,ರಾತ್ರಿ 9-00 ಗಂಟೆಗೆ ಅನ್ನ ವಿತರಣೆ ಹಾಗೂ ರಾತ್ರಿ 11-30 ಕ್ಕೆ ಕಲ್ಲುರ್ಟಿ-ಕಲ್ಕುಡ ದೈವಗಳ ಕೋಲ ನಡೆಯಲಿದೆ.

ತಾರೀಕು: 16-02-2026ನೇ ಸೋಮವಾರ – ಸಂಜೆ 4.00ಕ್ಕೆ ಭಂಡಾರ ಹೊರಡುವುದು, ರಾತ್ರಿ8.00 ಗಂಟೆಗೆ ಅನ್ನಪ್ರಸಾದ ವಿತರಣೆ ,ರಾತ್ರಿ 8.00 ಗಂಟೆಗೆ ಅಗ್ನಿಕೊರತಿ-ಗುಳಿಗ ದೈವಗಳ ಕೋಲ ಮತ್ತು ಕೆಂಡಸೇವೆ
ನಂತರ ಮಂತ್ರದೇವತೆ ಕೋಲ ನಡೆಯಲಿದುವುದು.

ತಾರೀಕು: 22-02-2026ನೇ ಆದಿತ್ಯವಾರದಂದು – ರಾತ್ರಿ ಗಂಟೆ 8.30 ಕ್ಕೆ ಕಲ್ಲುರ್ಟಿ-ಕಲ್ಕುಡ, ಅಗ್ನಿಕೊರತಿ, ಮಂತ್ರದೇವತೆ ದೈವಗಳಿಗೆ ಶುದ್ಧದ ಅಗೆಲು ಮತ್ತು ಭಕ್ತರ ಅಗೆಲು ಸೇವೆ ನಡೆಯಲಿದೆ.

LEAVE A REPLY

Please enter your comment!
Please enter your name here