ಉಡುಪಿ : ಶ್ರೀ ಕೃಷ್ಣ ಮಠದಲ್ಲಿ ಬ್ರಹ್ಮ ರಥೋತ್ಸವವು ವಿಜೃಂಭಣೆಯಿಂದ ನೆರವೇರಿತು. ಪರ್ಯಾಯ ಶ್ರೀ ಪುತ್ತಿಗೆ ಮಠದ ಉಭಯ ಶ್ರೀಪಾದರು, ಅದಮಾರು ಮಠದ ಶ್ರೀಗಳು ಹಾಗೂ ಪೇಜಾವರ ಮಠದ ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ರಥೋತ್ಸವ ಅತ್ಯಂತ ಭಕ್ತಿಭಾವದಿಂದ ನಡೆಯಿತು.
ಬ್ರಹ್ಮ ರಥೋತ್ಸವದ ಅಂಗವಾಗಿ ಶ್ಚೂರ್ಣೋತ್ಸವವೂ ಯಶಸ್ವಿಯಾಗಿ ಸಂಪನ್ನಗೊಂಡಿತು. ದೇವರ ದರ್ಶನಕ್ಕಾಗಿ ಹಾಗೂ ರಥೋತ್ಸವ ವೀಕ್ಷಿಸಲು ಸಾವಿರಾರು ಭಕ್ತಾದಿಗಳು ಮಠದ ಆವರಣದಲ್ಲಿ ಸೇರಿದ್ದರು.
ಭಕ್ತರ ಭಜನೆ, ವೇದಘೋಷ, ಮಂಗಳ ವಾದ್ಯಗಳ ನಡುವೆ ಉತ್ಸವವು ಆಧ್ಯಾತ್ಮಿಕ ಸೌಭಾಗ್ಯವನ್ನು ಹೆಚ್ಚಿಸಿತು. ಭದ್ರತೆ ಹಾಗೂ ವ್ಯವಸ್ಥೆಗೆ ಮಠದ ಸಿಬ್ಬಂದಿ ಹಾಗೂ ಸ್ವಯಂಸೇವಕರು ಸಮರ್ಪಕ ವ್ಯವಸ್ಥೆ ಮಾಡಿದ್ದರು.

