ಸೇವಾಪ್ರತಿನಿಧಿಗಳ ಕೌಶಲ್ಯಾಭಿವೃದ್ಧಿ ತರಬೇತಿ

0
58

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ ರಿ ಗುರುವಾಯನಕೆರೆ ಯೋಜನ ವ್ಯಾಪ್ತಿಯ ಸೇವಾಪ್ರತಿನಿಧಿಗಳ ವಿಶೇಷ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಬೆಳ್ತಂಗಡಿ ತರಬೇತಿ ಕೇಂದ್ರದಲ್ಲಿ ನಡೆಸಲಾಯಿತು .

ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ನಿರ್ದೇಶಕರಾದ ದಿನೇಶ್, ಪೂಜಾರಿ ರವರು. ಗ್ರಾಮಾಬಿವೃದ್ಧಿ ಯೋಜನೆಯ ಹಿನ್ನಲೆ , ಗ್ರಾಮ ಅಭಿವೃದ್ಧಿ ಯೋಜನೆ ನಡೆದು ಬಂದ ದಾರಿ ಬಗ್ಗೆ ವಿವರಿಸಿದರೂ, ತಂಡಗಳ ಮೇಲ್ದರ್ಜೆಗೆ ಏರಿಸುವಲ್ಲಿ ಸುತ್ತೋಲೆ 64ರ ಎಂಟು ಅಂಶಗಳ ಬಗ್ಗೆ ಮಾಹಿತಿ ಮಾದೇಶ ನೀಡಿದರು.

ಉಡುಪಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಆನಂದ ಸುವರ್ಣ, ಸೇವಾ ಪ್ರತಿನಿಧಿಗಳಿಗೆ,,, ಶ್ರೀ ಕ್ಷೇತ್ರದ ಬಗ್ಗೆ, ಅಂಗ ಸಂಸ್ಥೆಗಳ ಬಗ್ಗೆ, ವಿವರಿಸುತ್ತಾ ತಾಲೂಕಿನ ಸರ್ವತೋಮುಖ ಅಭಿವೃದ್ಧಿಯ ಕನಸು ಕಂಡ ಪೂಜ್ಯರು ಪ್ರಾರಂಭಿಸಿದ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಅಂದಿನ ಕಾರ್ಯಕರ್ತರು ಮನೆ ಬೇಟಿ ಮಾಡಿ ಪ್ರತಿಯೊಂದು ಕುಟುಂಬದ ಕಷ್ಟ ಸುಖಗಳಲ್ಲಿ ಭಾಗಿಯಾಗಿ ಶ್ರಮ ಪಟ್ಟು ಪ್ರಾಮಾಣಿಕವಾದ ಸೇವೆಯನ್ನು ನೀಡಿದ್ದಾರೆ. ನಾವು ಸದಸ್ಯರ ಸ್ಥಾನ ಮಾನ ವ್ಯಕ್ತಿತ್ವಕ್ಕೆ ಗೌರವವನ್ನು ನೀಡಬೇಕು.

ತಾಲೂಕಿನ ಎಷ್ಟೋ ಮನೆಗಳಿಗೆ ಪೂಜ್ಯರು ಖುದ್ದು ಭೇಟಿ ನೀಡಿದ್ದಾರೆ . ನಾವು ಒಬ್ಬ ಒಳ್ಳೆಯ ಮನುಷ್ಯರಾಗಬೇಕು . ಉತ್ತಮ ಕಾರ್ಯಕರ್ತರಾಗಬೇಕು. ನಾವು ಮಾಡುವ ಸೇವೆ ಬೆಳಗುವ ದೀಪಕ್ಕೆ ಎಣ್ಣೆ ಯನ್ನು ಹಾಕುವ ಕೆಲಸವಾಗಬೇಕು. ನಾವು ಮನುಷ್ಯರಾಗಿ ಮಾಡಬೇಕಾದ ಕೆಲಸ ಬಹಳಷ್ಟು ಇದೆ. ಸೇವೆಗಾಗಿ ನಮಗೆ ಸಿಕ್ಕಿದ ಅವಕಾಶ ಬೇರೆ ಯಾರಿಗೂ ಸಿಗಲು ಸಾಧ್ಯವಿಲ್ಲ . ನಮ್ಮ ಸಂಸ್ಥೆ ನಮಗೆ ಉತ್ತಮ ಸೌಲಭ್ಯವನ್ನು ನೀಡಿದೆ.

ನಾವು ಸಂಪಾದನೆಗಾಗಿ ಮಾಡುವ ಸೇವೆ ಒಂದು ಕಡೆಯಾದರೆ ಪುಣ್ಯಕ್ಕಾಗಿ ಮಾಡುವ ಸೇವೆ ಇನ್ನೊಂದು ಕಡೆಯಾಗಿದ್ದು ಅದಕ್ಕೆ ಸ್ವಾಮಿಯೇ ಪ್ರತಿಫಲ ನೀಡುತ್ತಾನೆ. ಗೆಲ್ಲುವುದು ನಂಬಿಕೆ ಪ್ರೀತಿ ವಿಶ್ವಾಸ ಪ್ರಾಮಾಣಿಕವಾದ ಸೇವೆ ಮತ್ತು ಗೌರವದ ಸೇವೆಯನ್ನು ನೀಡಿ ಎಂದರು.

ಉತ್ತಮ ಗುರಿಯನ್ನು ಇಟ್ಟುಕೊಂಡು ಬೇಟಿ ಮಾಡಿ ಪರಿಶೀಲನಾ ಕ್ರಮ ಉತ್ತಮವಾಗಿದ್ದಲ್ಲಿ ನಮಗೆ ಯಾವುದೇ ರೀತಿಯ ಒತ್ತಡ ಆಗಲು ಸಾಧ್ಯವಿಲ್ಲ ನಾವು ಮಾಡುವ ತಪ್ಪುಗಳೇ ನಮಗೆ ಒತ್ತಡವಾಗುತ್ತದೆ ಎಲ್ಲರನ್ನೂ ಮಾತನಾಡಿಸಿ ಅವರ ಸಮಸ್ಯೆಗಳಿಗೆ ಪರಿಹಾರ ನೀಡಿದ ಹೆಚ್ಚು ಹೆಚ್ಚು ಅಧ್ಯಯನದಿಂದ ವಿಶ್ವಾಸ ನಂಬಿಕೆ ಹೆಚ್ಚಾಗುತ್ತದೆ ಹೆಚ್ಚಾಗುತ್ತದೆ ಎಂದು ಮಾರ್ಗದರ್ಶನ ನೀಡಿದರು.

LEAVE A REPLY

Please enter your comment!
Please enter your name here