ಹಿನ್ನೆಲೆ ಗಾಯಕ ವಿಜಯ ಪ್ರಕಾಶ್ : ಕಾಪು ಮಾರಿಯಮ್ಮ ದೇವಸ್ಥಾನದಲ್ಲಿ ಭಕ್ತಾದಿಗಳಿಗೆ ಒಂದು ದಿನದ ವಿಶೇಷ ಅನ್ನದಾನ ಸೇವೆ

0
98

ಖ್ಯಾತ ಭಾರತೀಯ ಹಿನ್ನೆಲೆ ಗಾಯಕ ವಿಜಯ ಪ್ರಕಾಶ್ ಅವರು ಜನವರಿ 3ರ ಸಂಜೆ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮ ದೇವಿಯ ದರುಶನ ಪಡೆದರು.

ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯ ಅಮ್ಮನ ಅನುಗ್ರಹ ಪ್ರಸಾದ ನೀಡಿದರು.

ಪೂಜಾ ಸಂದರ್ಭದಲ್ಲಿ ಆಗಮಿಸಿದ್ದ ಗಾಯಕ ವಿಜಯ ಪ್ರಕಾಶ್ ಕರ್ನಾಟಕದ ಬೃಹತ್ ಘಂಟೆಯನ್ನು ಬಾರಿಸಿದರು. ನಂತರ ನಿತ್ಯ ಅನ್ನದಾನ ನಡೆಯುತ್ತಿರುವುದರಿಂದ ಒಂದು ದಿನದ ವಿಶೇಷ ಅನ್ನದಾನ ಸೇವೆಯನ್ನು ನೀಡಿ, ನವದುರ್ಗಾ ಲೇಖನ ಮಂಟಪದ ಲೇಖನ ಯಜ್ಞದ ಪುಣ್ಯ ಭೂಮಿಯಲ್ಲಿ ಮೊದಲ ದಿನದ ಲೇಖವನ್ನು ಬರೆದರು ಇನ್ನುಳಿದ ಲೇಖನವನ್ನು 9 ದಿನಗಳವರೆಗೆ ಮನೆಯಲ್ಲಿಯೇ ಬರೆದು ಶಾಶ್ವತ ಸೇವೆಯೊಂದಿಗೆ ಸಮರ್ಪಿಸುವುದಾಗಿ ಹೇಳಿದರು.

ದೇವಳದ ವ್ಯವಸ್ಥಾಪನಾ ಸಮಿತಿ ಮತ್ತು ಅಭಿವೃದ್ಧಿ ಸಮಿತಿಯಿಂದ ಗೌರವಿಸಲಾಯಿತು.

ದೇವಳದ ಕಾರ್ಯನಿರ್ವಹಣಾಧಿಕಾರಿ ರವಿಕಿರಣ್, ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಮತ್ತು ವ್ಯವಸ್ಥಾಪನಾ ಸಮಿತಿಯ ಸದಸ್ಯ ಮಾದವ ಆರ್. ಪಾಲನ್, ಘಂಟಾನಾದ ಸೇವಾ ಸಮಿತಿ ಅಧ್ಯಕ್ಷ ಮತ್ತು ಪ್ರಚಾರ ಸಮಿತಿ ಪ್ರಧಾನ ಸಂಚಾಲಕ ಯೋಗೀಶ್ ವಿ. ಶೆಟ್ಟಿ, ಪ್ರಚಾರ ಸಮಿತಿ ಸಂಚಾಲಕ ಜಯರಾಮ ಆಚಾರ್ಯ, ನವದುರ್ಗಾ ಲೇಖನ ಯಜ್ಞ ಸಮಿತಿಯ ಮಹಿಳಾ ಪ್ರಧಾನ ಸಂಚಾಲಕಿ ಸಾವಿತ್ರಿ ಗಣೇಶ್, ಪ್ರಬಂಧಕ ಗೋವರ್ಧನ್ ಸೇರಿಗಾರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ವರದಿ ವಿನೋದ್ ಶೆಟ್ಟಿ ಉಡುಪಿ

LEAVE A REPLY

Please enter your comment!
Please enter your name here