ಕುಂದಾಪುರ : ಚಿನ್ನದ ಸರ ಕಳವು ಪ್ರಕರಣ – ಆರೋಪಿಯ ಬಂಧನ

0
194

ಶಾಸ್ತ್ರೀ ಸರ್ಕಲ್ ಬಳಿಯ ಎಸ್‌ಪಿಜಿ ಗೋಲ್ಡ್ ಮತ್ತು ಡೈಮಂಡ್ ಅಂಗಡಿಯಲ್ಲಿ ಚಿನ್ನ ತೆಗೆದುಕೊಳ್ಳುವ ನೆಪದಲ್ಲಿ ಕೆಲಸದವರ ಕಣ್ಣು ತಪ್ಪಿಸಿ 9 ಗ್ರಾಂ ಮೌಲ್ಯದ ₹1.25 ಲಕ್ಷ ಮೌಲ್ಯದ ಚಿನ್ನದ ಸರ ಕಳವು ಮಾಡಿದ್ದ ಬಂಟ್ವಾಳ ತಾಲ್ಲೂಕಿನ ಬಡಗ ಕಜೆಕಾರ್ ಗ್ರಾಮದ ರಮೇಶ (42) ಎಂಬಾತನನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ.

ಆರೋಪಿಯಿಂದ ಕಳ್ಳತನ ಮಾಡಿದ್ದ ಚಿನ್ನದ ಚೈನ್, ಆತನಲ್ಲಿದ್ದ ₹33 ಸಾವಿರ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

LEAVE A REPLY

Please enter your comment!
Please enter your name here