ಕಾರ್ಕಳ: ಅಯ್ಯಪ್ಪನಗರದ ವಿಜೇತ ವಿಶೇಷ ಶಾಲೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಜನಪ್ರಿಯ ರೈಸ್ ಮಿಲ್ ಮಾಲಕ ಶ್ರೀ ಮಂಜುನಾಥ್ ಪೂಜಾರಿ ಅವರು ಧ್ವಜಾರೋಹಣ ನೆರವೇರಿಸಿ, ವಿದ್ಯಾರ್ಥಿಗಳಿಂದ ಗೌರವ ವಂದನೆ ಸ್ವೀಕರಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಶ್ರೀ ಸುಧೀರ್ ಕಲ್ಮಾಡಿ ಅವರ ವತಿಯಿಂದ ಕೊಡುಗೆಯಾಗಿ ನೀಡಲಾದ ಅಸ್ತ್ರ ಒಲೆಯನ್ನು ಸ್ವಯಂಸೇವಕ ಹಾಗೂ ಸಿಎಸ್‌ಆರ್ ಹೆಡ್ ಜಯನಂದ್ ಪೀಟರ್ ಅವರು ವಿದ್ಯಾರ್ಥಿಗಳಿಗೆ ಹಸ್ತಾಂತರಿಸಿದರು.
MITE ಇಂಜಿನಿಯರಿಂಗ್ ಕಾಲೇಜಿನ NSS ಅಧಿಕಾರಿ ಶ್ರೀ ಅಕ್ಷತ್ ರಾಜ್ ಜೈನ್, ಪ್ರಾಧ್ಯಾಪಕ ಶ್ರೀ ಸುಮಂತ್ ಹಾಗೂ NSS ತಂಡದ ವತಿಯಿಂದ ಶಾಲೆಗೆ ಅಗತ್ಯವಿದ್ದ ಅಡುಗೆ ಪಾತ್ರೆಗಳನ್ನು ವಿದ್ಯಾರ್ಥಿಗಳಿಗೆ ಹಸ್ತಾಂತರಿಸಲಾಯಿತು.
ಕಾರ್ಯಕ್ರಮದಲ್ಲಿ ಕುಕ್ಕುಂದೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಶ್ರೀಮತಿ ಶಾಂತಿ ಕಿಣಿ, ವಿಜೇತ ವಿಶೇಷ ಶಾಲೆಯ ಅಧ್ಯಕ್ಷ ಶ್ರೀ ರತ್ನಾಕರ್ ಅಮೀನ್, ದುರ್ಗಾ ವಿದ್ಯಾ ಸಂಘ ಟ್ರಸ್ಟ್ ಅಧ್ಯಕ್ಷ ಶ್ರೀ ಕೆ. ರಾಧಾಕೃಷ್ಣ ಶೆಟ್ಟಿ, ಅನು ಮೆಲೋಡಿಸ್ ಮುಖ್ಯಸ್ಥ ಆನಂದ್ ನಕ್ರೆ, ಆದ್ಯ ಮೆಲೋಡಿಸ್ ಮುಖ್ಯಸ್ಥ ಶ್ರೀ ಹರೀಶ್ ಶಿರ್ವ, ಸಂಸ್ಥಾಪಕಿ ಡಾ. ಕಾಂತಿ ಹರೀಶ್ ಹಾಗೂ ಮ್ಯಾನೇಜಿಂಗ್ ಟ್ರಸ್ಟಿ ಶ್ರೀ ಹರೀಶ್ ಉಪಸ್ಥಿತರಿದ್ದರು.
ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕ–ಶಿಕ್ಷಕೇತರ ಸಿಬ್ಬಂದಿ, ಪೋಷಕರು ಹಾಗೂ ಶಾಲೆಯ ಹಿತೈಷಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಕುಕ್ಕುಂದೂರು ಗ್ರಾಮ ಪಂಚಾಯತ್ ಹಾಗೂ ಶ್ರೀ ಮಂಜುನಾಥ್ ಪೂಜಾರಿ ಮತ್ತು ಶ್ರೀಮತಿ ಶಾಂತಿ ಕಿಣಿ ಅವರ ವತಿಯಿಂದ ವಿದ್ಯಾರ್ಥಿಗಳಿಗೆ ಸಿಹಿತಿಂಡಿ ವಿತರಿಸಲಾಯಿತು.
ಅನು ಮೆಲೋಡಿಸ್ ಹಾಗೂ ಆದ್ಯ ಮೆಲೋಡಿಸ್ ತಂಡದ ವತಿಯಿಂದ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ವಿದ್ಯಾರ್ಥಿಗಳಿಗೆ ವಿಶೇಷ ಭೋಜನದ ವ್ಯವಸ್ಥೆ ಮಾಡಲಾಯಿತು. ಅಲ್ಲದೆ ಮಕ್ಕಳಿಗೆ ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು.
ವಿಶೇಷ ಶಿಕ್ಷಕಿ ಶ್ರೀಮತಿ ಹರ್ಷಿತಾ ಕಾರ್ಯಕ್ರಮ ನಿರೂಪಿಸಿದರು. ಡಾ. ಕಾಂತಿ ಹರೀಶ್ ಸ್ವಾಗತಿಸಿದರು. ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪ್ರಾರ್ಥನೆ ನೆರವೇರಿಸಿದರು. ಶ್ರೀಮತಿ ಶ್ವೇತ ವಂದಿಸಿದರು.
ವಿವಿಧ ಸಂಸ್ಥೆಗಳು ಹಾಗೂ ದಾನಿಗಳ ಸಹಕಾರದೊಂದಿಗೆ ನಡೆದ ಕಾರ್ಯಕ್ರಮವು ವಿಶೇಷ ಶಾಲೆಯ ವಿದ್ಯಾರ್ಥಿಗಳಲ್ಲಿ ಸ್ವಾತಂತ್ರ್ಯೋತ್ಸವದ ಸಂಭ್ರಮ ಮೂಡಿಸುವುದರ ಜತೆಗೆ ಅವರ ಅಗತ್ಯಗಳಿಗೆ ಸ್ಪಂದಿಸುವ ಸಮಾಜಮುಖಿ ಕಾರ್ಯಕ್ರಮವಾಗಿ ಗಮನ ಸೆಳೆಯಿತು.

