ದಾವಣಗೆರೆ : ದಾವಣಗೆರೆಯ “ಜಿಲ್ಲೆ ಸಮಾಚಾರ” ದಿನಪತ್ರಿಕಾ ಬಳಗದಿಂದ ಫೆಬ್ರವರಿ 22 ರಂದು ಭಾನುವಾರ ಅಪರಾಹ್ನ 4 ರಿಂದ ದಾವಣಗೆರೆ ವಿದ್ಯಾನಗರ ರಸ್ತೆಯಲ್ಲಿರುವ ಕುವೆಂಪು ಕನ್ನಡ ಭವನದಲ್ಲಿ ಗಾನ ಪ್ರತಿಭಾನ್ವೇಷಣೆ ಮತ್ತು ರಂಗೋಲಿ ಉಚಿತ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ಪತ್ರಿಕಾ ಬಳಗದ ಸಂಚಾಲಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.
ಅವಕಾಶವಂಚಿತರಾದ ಹಿರಿಯ, ಕಿರಿಯ ಗಾಯಕರಿಗೆ ರಂಗೋಲಿ ಬರೆಯುವ ಕಲಾವಿದರಿಗೆ ಮುಕ್ತವಾದ ವೇದಿಕೆಯನ್ನು ಕಲ್ಪಿಸುವ ಸದುದ್ದೇಶದಿಂದ ಎಲೆಮರೆಯ ಕಾಯಿಗಳ ಅವರ ಗಾನ ಕಲಾ ಪ್ರತಿಭೆಗಳನ್ನು ಅನಾವರಣಗೊಳಿಸಲು ಈ ಗಾನ ಸ್ಪರ್ಧೆ, ರಂಗೋಲಿ ಸ್ಪರ್ಧೆ ಏರ್ಪಡಿಸಿದ್ದು ಚಲನಚಿತ್ರ ಗೀತೆ, ಭಾವಗೀತೆ, ಭಕ್ತಿಗೀತೆ, ಸುಗಮ ಸಂಗೀತ ಗೀತೆಯೊಂದಿಗೆ ಕರೋಕೆಯೊಂದಿಗೆ ಹಾಡಬಹುದು, ರಂಗೋಲಿ ಹಾಕಬಹುದು.
ಉಚಿತ ಗಾನ ಸ್ಪರ್ಧೆಯ ತೀರ್ಪುಗಾರರು, ಹಿರಿಯ ಗಾಯಕರಾದ ಸಿ.ಎಸ್.ಜಗದೀಶ್‌ರವರು 9880799147, ರಂಗೋಲಿ ಬರೆಯುವ ಸ್ಪರ್ಧೆ ತೀರ್ಪುಗಾರರು ಶಿಲ್ಪಾ ಉಮೇಶ್ 9945785170, ಹೇಮಾ ಶಾಂತಪ್ಪ ಪೂಜಾರಿ 9743897578 ಸನೀಹವಾಣಿಗಳಿಗೆ ಸಂಪರ್ಕಿಸಿ 20-2-2026 ರೊಳಗೆ ಹೆಸರು ನೊಂದಾಯಿಸಬೇಕಾಗಿ ದಾವಣಗೆರೆಯ “ಜಿಲ್ಲೆ ಸಮಾಚಾರ” ದಿನಪತ್ರಿಕೆಯ ಸಂಸ್ಥಾಪಕ ಸಂಪಾದಕರಾದ ವಿ.ಹನುಮಮಂತಪ್ಪ ವಿನಂತಿಸಿದ್ದಾರೆ.
ಇಂತಹ ಅಪರೂಪದ ಮುಕ್ತವಾದ ಅವಕಾಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಗಾಯಕರು, ರಂಗೋಲಿ ಕಲಾವಿದರು ಭಾಗವಹಿಸಬೇಕಾಗಿ “ಜಿಲ್ಲೆ ಸಮಾಚಾರ” ದಿನಪತ್ರಿಕಾ ಬಳಗದಿಂದ ಪ್ರಕಟಿಸಲಾಗಿದೆ.

