ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕಾರ್ಕಳ ತಾಲೂಕಿನ 9 ವಾತ್ಸಲ್ಯ ಕುಟುಂಬಗಳಿಗೆ ವಾತ್ಸಲ್ಯ ಕಿಟ್ ವಿತರಣೆ

0
38

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪ್ರತೀ ತಿಂಗಳು ಮಾಸಾಶನ ಪಡೆಯುತ್ತಿರುವ ಕಾರ್ಕಳ ತಾಲೂಕಿನ ವಾತ್ಸಲ್ಯ ಸದಸ್ಯರಿಗೆ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ತಾಲೂಕಿನ 9 ಕುಟುಂಬ ಗಳಿಗೆ ವಾತ್ಸಲ್ಯ ಕಿಟ್ ಮಂಜೂರಾಗಿದ್ದು 5-02-2026 ರಂದು ತಾಲೂಕಿನ ಮಿಯಾರು ವಲಯದ ಅಮ್ಮನಿ ಆಚಾರಿ ಕುಂಟಿ ಬೈಲು ರತಿ ಶೆಟ್ಟಿ , ಹೊಸ್ಮಾರು ವಲಯದ ಪರಲ್ಕೆ ವಾತ್ಸಲ್ಯ ಸದಸ್ಯರಾದ ಹೇಮಾವತಿ, ಬಜಗೋಳಿ ವಲಯ ಹುಕ್ರಟ್ಟೆ ರುಕ್ಮಿಣಿ ಶೇರಿಗಾರ್, ಮುಡಾರು ಪ್ರಕಾಶ್, ಮುಡಾರು ಸುಶೀಲ ಆಚಾರ್ತಿ, ಅಪ್ಪಿ ಮುಡಾರು ರಾಮೆರಗುತ್ತು, ಕುಕ್ಕುಂದೂರು ವಲಯ ಡೊಂಬಿ ಪರತಿ, ಬೈಲೂರು ವಲಯ ಸುಮತಿ ಇವರಿಗೆ ಕ್ಷೇತ್ರದಿಂದ ನೀಡಿದ ಬಟ್ಟೆ , ಚಾಪೆ , ಹೊದಿಕೆ, ದಿಂಬು, ಟವಲ್, ಸೀರೆ, ಲಂಗ, ಪಂಚೆ, ಶರ್ಟ್, ಸೋಪ್ ಬಾಚಣಿಗೆ , ವಾತ್ಸಲ್ಯ ಮಿಕ್ಸ್, ಇರುವ ವಾತ್ಸಲ್ಯ ಕಿಟ್ ನ್ನು ತಾಲೂಕಿನ ಯೋಜನಾ ಅಧಿಕಾರಿ ಬಾಲಕೃಷ್ಣ ಹೀರಿಂಜ, ಜ್ಞಾನ ವಿಕಾಸ ಯೋಜನಾ ಅಧಿಕಾರಿ ಮಲ್ಲಿಕಾ, ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಸವಿತಾ , ವಲಯ ಮೇಲ್ವಿಚಾರಕರು,ಊರಿನ ಗಣ್ಯರು, ಒಕ್ಕೂಟದ ಅಧ್ಯಕ್ಷರು, ವಲಯ ಅಧ್ಯಕ್ಷರು , ಜನಜಾಗೃತಿ ಸದಸ್ಯರು, ಸೇವಾಪ್ರತಿನಿಧಿ, ಶೌರ್ಯ ಘಟಕ ಪ್ರತಿನಿಧಿ ಉಪಸ್ಥಿತಿಯಲ್ಲಿ ಕುಟುಂಬಕ್ಕೆ ವಿತರಿಸಲಾಯಿತು.

ಎಲ್ಲಾ ವಾತ್ಸಲ್ಯ ಸದಸ್ಯರು ಕೃತಜ್ಞತಾ ಪೂರ್ವಕವಾಗಿ ಸ್ವೀಕರಿಸಿ ಪೂಜ್ಯರು ಹಾಗೂ ಮಾತೃಶ್ರೀ ಹೇಮಾವತಿ ಅಮ್ಮನವರಿಗೆ ಅಭಿನಂದನೆಗಳನ್ನು ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here