ಮೂಲ್ಕಿ : ಎಸ್.ಎಸ್.ಎಲ್.ಸಿ ಯಲ್ಲಿ ಹಳೆಯಂಗಡಿಯ ತೋಕೂರು ಗ್ರಾಮಕ್ಕೆ ದಿಗಂತ್ ಎಸ್.ಶೆಟ್ಟಿ 6ನೇ ರ್‍ಯಾಂಕ್

0
13

ಮೂಲ್ಕಿ : 2025 -26ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶ್ರೀ ವ್ಯಾಸ ಮಹರ್ಷಿ ವಿದ್ಯಾ ಪೀಠ,ಕಿಲ್ಪಾಡಿ, ಮೂಲ್ಕಿ ಇಲ್ಲಿನ ವಿದ್ಯಾರ್ಥಿ ದಿಗಂತ್ ಎಸ್.ಶೆಟ್ಟಿ ಇವರು 99.2℅ ಅಂಕಗಳನ್ನು ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿ 6ನೇ ರ್‍ಯಾಂಕ್ ಪಡೆದು ತೋಕೂರು ಎಂಬ ಸಣ್ಣ ಗ್ರಾಮದ ಹೆಸರನ್ನು ರಾಜ್ಯಕ್ಕೆ ಪಸರಿಸಿದ್ದಾರೆ.

ಇವರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ತೋಕೂರು,ಹಳೆಯಂಗಡಿ ಇದರ ಅಧ್ಯಕ್ಷರು ಮತ್ತು ಮಹಿಳಾ ಕಾರ್ಯಕಾರಿ ಸಮಿತಿ ಸದಸ್ಯೆ ಹಾಗೂ ಮಾಗಂದಡಿ ಮನೆತನದ ಸುರೇಶ್ ಶೆಟ್ಟಿ ಮತ್ತು ಉಷಾ.ಎಸ್ ಶೆಟ್ಟಿ ದಂಪತಿಗಳ ಪುತ್ರರಾಗಿರುತ್ತಾರೆ.

ರ್‍ಯಾಂಕ್ ಪಡೆದ ದಿಗಂತ್ ಶೆಟ್ಟಿ ಇವರಿಗೆ ಸಂಸ್ಥೆಯ ಸರ್ವ ಸದಸ್ಯರು,ಸದಸ್ಯೆಯರು ಅಭಿನಂದನೆ ಸಲ್ಲಿಸಿರುತ್ತಾರೆ.

LEAVE A REPLY

Please enter your comment!
Please enter your name here