ಮಂಗಳೂರಿನಲ್ಲಿ “ಬಾಲ್ಯ ವಿವಾಹ ಮುಕ್ತ ಭಾರತ” ಅಭಿಯಾನದಡಿ ಕಾನೂನು ಅರಿವು ಕಾರ್ಯಾಗಾರ

0
26

ವರದಿ : ಮಂದಾರ ರಾಜೇಶ್ ಭಟ್

​ಮಂಗಳೂರು : ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ (ಬೆಂಗಳೂರು), ಜಿಲ್ಲಾ ನ್ಯಾಯಾಂಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಜಿಲ್ಲಾಡಳಿತ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಬ್ಯಾಂಕುಗಳ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ “ಬಾಲ್ಯ ವಿವಾಹ ಮುಕ್ತ ಭಾರತ” ಅಭಿಯಾನದಡಿ ಕಾನೂನು ಅರಿವು ಕಾರ್ಯಾಗಾರವನ್ನು ​ದಿನಾಂಕ: 07-02-2026 ರಂದು ಕುದ್ಮುಲ್ ರಂಗರಾವ್ ಪುರಭವನ, ಕ್ಲಾಕ್ ಟವರ್ ಹತ್ತಿರ, ಹಂಪನಕಟ್ಟೆ, ಮಂಗಳೂರು ಇಲ್ಲಿ ಆಯೋಜಿಸಲಾಗಿದೆ.

ಜೈಬುನ್ನೀಸ, ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ದ.ಕ – ಮಂಗಳೂರು. ಇವರು ಕಾರ್ಯಕ್ರಮದ ಸಂಯೋಜನೆ ಮತ್ತು ಅತಿಥಿಗಳ ಸ್ವಾಗತ ನೆರವೇರಿಸಲಿದ್ದಾರೆ. ಗೌರವಾನ್ವಿತ ಹೆಚ್. ಶಶಿಧರ ಶೆಟ್ಟಿ, ಜಿಲ್ಲಾ ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿಗಳು, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು. ಇವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಸಭಾ ಕಾರ್ಯಕ್ರಮದ ​ಅಧ್ಯಕ್ಷತೆ ಶ್ರೀ ರಾಘವೇಂದ್ರ ಹೆಚ್.ವಿ, ಅಧ್ಯಕ್ಷರು, ವಕೀಲರ ಸಂಘ – ದ.ಕ, ಮಂಗಳೂರು. ವಹಿಸಿಕೊಳ್ಳಲಿದ್ದು

ಮುಖ್ಯ ಅತಿಥಿಗಳಾಗಿ

*ಜೈಶಂಕರ್, ಅಧ್ಯಕ್ಷರು, ಖಾಯಂ ಜನತಾ ನ್ಯಾಯಾಲಯ, ದ.ಕ – ಮಂಗಳೂರು.
*ದರ್ಶನ್ ಹೆಚ್.ವಿ, ಜಿಲ್ಲಾಧಿಕಾರಿಗಳು, ದ.ಕ – ಮಂಗಳೂರು.
*ಸುಧೀರ್ ಕುಮಾರ್ ರೆಡ್ಡಿ, ಪೊಲೀಸ್ ಆಯುಕ್ತರು, ಮಂಗಳೂರು.
*ರವಿಚಂದ್ರ ನಾಯಕ್, ಆಯುಕ್ತರು, ಮಂಗಳೂರು ಮಹಾನಗರ ಪಾಲಿಕೆ, ದ.ಕ – ಮಂಗಳೂರು.
​*ಡಾ. ಅರುಣ್ ಕೆ, ಪೊಲೀಸ್ ವರಿಷ್ಠಾಧಿಕಾರಿಗಳು, ದ.ಕ – ಮಂಗಳೂರು.

*ಕೆ.ರವಿಶಂಕರ್, ಉಪ ಪೊಲೀಸ್ ಆಯುಕ್ತರು (ಅಪರಾಧ ಮತ್ತು ಸಂಚಾರ), ದ.ಕ – ಮಂಗಳೂರು. ಇರಲಿದ್ದಾರೆ

​ಡಾ. ತಿಮ್ಮಯ್ಯ (ಜಿಲ್ಲಾ ಆರೋಗ್ಯಧಿಕಾರಿಗಳು), ರಾಜೇಶ್ವರಿ (ಉಪ ನಿರ್ದೇಶಕರು, ಪ.ಪೂ ಶಿಕ್ಷಣ), ಶ್ರೀ ಶಶಿಧರ್ ಜಿ.ಎಸ್ (ಉಪ ನಿರ್ದೇಶಕರು, ಶಾಲಾ ಶಿಕ್ಷಣ), ಶ್ರೀಮತಿ ಹೇಮಲತಾ (ಉಪ ನಿರ್ದೇಶಕರು, ಸಮಾಜ ಕಲ್ಯಾಣ), ಶ್ರೀ ಉಸ್ಮಾನ್ ಎ (ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ), ಬಿಂದಿಯಾ.ಏನ್.ನಾಯಕ (ಜಿಲ್ಲಾ ಅಧಿಕಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ), ಅಕ್ಷತಾ ಆದರ್ಶ (ಅಧ್ಯಕ್ಷರು, ಮಕ್ಕಳ ಕಲ್ಯಾಣ ಸಮಿತಿ) ಹಾಗೂ ಜಿನೇಂದ್ರ ಕೆ.ಜಿ.ಎಸ್ (ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ). ಇವರು ಅತಿಥಿಗಳಾಗಿ ಆಗಮಿಸಲಿದ್ದಾರೆ

​ ಕಾರ್ಯಕ್ರಮದ ಮುಖ್ಯಾಂಶಗಳು

​ಆರಂಭ : ನಾಡಗೀತೆ ಮತ್ತು ಪಿ.ಎಲ್.ವಿ ಹರ್ಷಿತಾ ಎಂ.ಎ ಅವರಿಂದ ಪ್ರಾರ್ಥನೆ.

​ವಿಶೇಷ ಪ್ರಸ್ತುತಿ : ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ‘ಥೀಮ್ ಸಾಂಗ್’ ಪ್ರಸಾರ.

​ ಉದ್ಘಾಟನಾ ಭಾಷಣ :

ಗೌರವಾನ್ವಿತ ಹೆಚ್. ಶಶಿಧರ ಶೆಟ್ಟಿ ಅವರಿಂದ ಕಾರ್ಯಕ್ರಮದ ಆಶಯ ನುಡಿಗಳು. ನಂತರದಲ್ಲಿ ಅತಿಥಿ ಗಣ್ಯರು ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

​ ಜಾಗೃತಿ ಕಾರ್ಯಕ್ರಮ : ‘ರೋಷನಿ ನಿಲಯ’ದ ವಿದ್ಯಾರ್ಥಿಗಳಿಂದ ಬಾಲ್ಯ ವಿವಾಹದ ಕುರಿತು ಕಿರುನಾಟಕ ಪ್ರದರ್ಶನ.

​ಸಮಾಪ್ತಿ : ವಂದನಾರ್ಪಣೆ ಮತ್ತು ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮದ ಮುಕ್ತಾಯ.

​ ಕಾರ್ಯಕ್ರಮದ ನಿರೂಪಣೆ : ಮಾನಸ ಜೆ ಹೆಗ್ಡೆ, ಪ್ಯಾನೆಲ್ ವಕೀಲರು, ದ.ಕ – ಮಂಗಳೂರು.

LEAVE A REPLY

Please enter your comment!
Please enter your name here