ಗ್ರಾಮ ಪಂಚಾಯತ್ ಬಂದಾರು, ವಿವಿಧ ಸಂಘ ಸಂಸ್ಥೆಗಳು ಹಾಗೂ ಊರವರ ನೇತೃತ್ವದಲ್ಲಿ ಡಾ. ಬಿ. ಆರ್ ಅಂಬೇಡ್ಕರ್ ಜಯಂತಿ ಆಚರಣೆ ಹಾಗೂ ನಿರುoಬುಡ – ಅಂಡೆಕೇರಿ- ಸುಣ್ಣಾನ- ನಾವುಳೆ – ಖಂಡಿಗ ರಸ್ತೆಯ ಇಕ್ಕೆಲದಲ್ಲಿ ಸ್ವಚ್ಛತಾ ಕಾರ್ಯಕ್ರಮ

0
8

ಬಂದಾರು: ಎ 14.ಗ್ರಾಮ ಪಂಚಾಯತ್ ಬಂದಾರು, ವಿವಿಧ ಸಂಘ ಸಂಸ್ಥೆಗಳು ಹಾಗೂ ಊರವರ ನೇತೃತ್ವದಲ್ಲಿ ಡಾ. ಬಿ. ಆರ್ ಅಂಬೇಡ್ಕರ್ ಜಯಂತಿ ಆಚರಣೆ ಹಾಗೂ ರಸ್ತೆಯ ಬದಿ ಸ್ವಚ್ಛತಾ ಕಾರ್ಯಕ್ರಮ ಸುಣ್ಣಾನ ಅಂಗನವಾಡಿ ಕೇಂದ್ರ ವಠಾರದಲ್ಲಿ ಎಪ್ರಿಲ್ 14 ರಂದು ಕಾರ್ಯಕ್ರಮ ನೆರವೇರಿತು.

ಈ ಸಂದರ್ಭದಲ್ಲಿ ಬಂದಾರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ, ಪಂಚಾಯತ್ ಮಾಜಿ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ, ಪದ್ಮುಂಜ ಸಿ ಎ ಬ್ಯಾಂಕ್ ಉಪಾಧ್ಯಕ್ಷರಾದ ಅಶೋಕ ಗೌಡ ಪಾಂಜಾಳ, ತಮ್ಮಯ್ಯ ಗೌಡ ನಾವುಳೆ, ಶಿವಪ್ಪ ಗೌಡ ನಾವುಳೆ, ಉಮರಬ್ಬ,ಇಸುಬು,ಎಂ ಪಿ ಅಶ್ರಫ್,ಮೊಹಮ್ಮದ್, ಅಂಡೆಕೇರಿ, ದಿನೇಶ್ ಗೌಡ ದಾಸರಕೋಡಿ, ಶೀನಪ್ಪ ಗೌಡ ಸುಣ್ಣಾನ, ತುಕಾರಾಮ ಕೊಂಬೇಡಿ, ಚಂದ್ರಶೇಖರ ಪಾಂಜಾಳ, ಮನೋಜ್ ನಾವುಳೆ, ಗಣೇಶ್ ಕೇದಗೆದಕೊಡಿ,ಮೀನಾಕ್ಷಿ , ಶುಶೀಲ ಬಚ್ಚಿರಪಳಿಕೆ, ನಳಿನಿ ನಾವುಳೆ, ವಿಶ್ವನಾಥ ಸುಣ್ಣಾನ,ಗುರುಕಿರಣ್ ಸುಣ್ಣಾನ,ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಬಂದಾರು ಗ್ರಾಮದ ನಿರುoಬುಡ – ಸುಣ್ಣಾನ- ಅಂಡೆಕೇರಿ – ನಾವುಳೆ-ಖಂಡಿಗ ರಸ್ತೆಯ ಇಕ್ಕೆಲದಲ್ಲಿರುವ ಹುಲ್ಲು, ಗಿಡ, ಕಸ ಕಡ್ಡಿಗಳನ್ನು ತೆಗೆಯುವ ಮೂಲಕ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು.

LEAVE A REPLY

Please enter your comment!
Please enter your name here