ಹೆಬ್ರಿ : ಮುದ್ರಾಡಿ ಗ್ರಾಮದ ಬಲ್ಲಾಡಿಯ ಶ್ರೀ ಅಬ್ಬಗ ದಾರಗ ಅರ್ಧನಾರೀಶ್ವರ ದೇವಸ್ಥಾನ ಹಾಗೂ ಬ್ರಹ್ಮ ಬೈದರ್ಕಳ ಗರಡಿಯ ಜೀರ್ಣೋದ್ದಾರ ಸಮಿತಿ ವತಿಯಿಂದ ಜೀರ್ಣೋದ್ದಾರ ಕಾರ್ಯದ ವಿಜ್ಞಾಪನಾ ಪತ್ರ ಬಿಡುಗಡೆ ಕಾರ್ಯಕ್ರಮವು ದೇವಸ್ಥಾನದ ವಠಾರದಲ್ಲಿ ಫೆ. 7 ರಂದು ನಡೆಯಿತು.
ಜೀರ್ಣೋದ್ದಾರ ಸಮಿತಿ ಮತ್ತು ವ್ಯವಸ್ಥಾಪನಾ ಸಮಿತಿ ಪದಾಧಿಕಾರಿಗಳು, ಸದಸ್ಯರು, ಅರ್ಚಕರು ಜೀರ್ಣೋದ್ದಾರ ಕಾರ್ಯದ ಸೇವೆಯಲ್ಲಿ ಎಲ್ಲರೂ ಪಾಲ್ಗೊಳ್ಳಲು ಮತ್ತು ಸಹಕಾರ ನೀಡಲು ವಿಜ್ಞಾಪನಾ ಪತ್ರವನ್ನು ಬಿಡುಗಡೆ ಗೊಳಿಸುವುದಾಗಿ ದೇವರಲ್ಲಿ ಪ್ರಾರ್ಥಿಸಿದರು.
ವಿಜ್ಞಾಪನ ಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದ ದೇವಸ್ಥಾನ ಜೀರ್ಣದ್ದಾರ ಸಮಿತಿ ಅಧ್ಯಕ್ಷರಾದ ದಿವಾಕರ ಎನ್ ಶೆಟ್ಟಿಯವರು ಮಾತನಾಡಿ ಸಮಗ್ರ ಜೀರ್ಣೋದ್ದಾರ ಕಾರ್ಯಕ್ಕೆ ವಾಸ್ತು ತಜ್ಞರ ಮಾರ್ಗ ದರ್ಶನದಲ್ಲಿ ನೀಲ ನಕ್ಷೆಯನ್ನು ರಚಿಸಿಕೊಂಡಿದ್ದು ಅಂದಾಜು 4.75 ಕೋಟಿ ರೂಪಾಯಿಗಳು ತಗಲಬಹುದು, ಗ್ರಾಮದ ಎಲ್ಲಾ ಮನೆಗಳನ್ನು ಸಂಪರ್ಕಿಸಿ, ಗ್ರಾಮಸ್ಥರ ಸಹಕಾರ ಕೋರಿ, ಹಾಗೂ ಪರವೂರ ದಾನಿಗಳ ನೆರವಿನೊಂದಿಗೆ ಆದಷ್ಟು ಬೇಗ ಈ ಮಹತ್ಕಾರ್ಯ ವನ್ನು ನಡೆಸಬೇಕಾಗಿದೆ, ಜೀರ್ಣಾವಸ್ಥೆಯಲ್ಲಿರುವ ದೇವಾಲಯವನ್ನು ಮತ್ತು ಗರಡಿಯನ್ನು ಪುನರ್ ನಿರ್ಮಾಣಗೊಳಿಸುವ ಮೂಲಕ ಶ್ರದ್ಧೆ,ಭಕ್ತಿ ಭಾವನೆಗಳನ್ನು ಉದ್ದೀಪನ ಗೊಳಿಸುವ ದೈವಿಕ ಶಕ್ತಿಯ ಜಾಗೃತ ಪೀಠವನ್ನು ಭದ್ರಗೊಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.
ಜೀರ್ಣೋದ್ದಾರ ಸಮಿತಿ ಉಪಾಧ್ಯಕ್ಷರಾದ ಉದಯ ಹೆಗ್ಡೆ ಕೊಳಂಬೆ ಮಾತನಾಡಿ ಬೆಂಗಳೂರಿನಲ್ಲಿ ನೆಲೆಸಿರುವ ಊರಿನ ಜನರ ಸಂಪರ್ಕವನ್ನು ಮಾಡಿಕೊಂಡು ಜೀರ್ಣೋದ್ದಾರ ಕಾರ್ಯಕ್ಕೆ ದೇಣಿಗೆ ಸಂಗ್ರಹ ಮಾಡುವ ಜವಾಬ್ದಾರಿ ನನ್ನದು ಎಂದು ಹೇಳಿದರು.
ಫ್ಲೆಕ್ಸ್ ಗಳನ್ನು ಪೇಟೆಗಳಲ್ಲಿ ಅಲ್ಲಲ್ಲಿ ಅಳವಡಿಸಿ ಹೆಚ್ಚು ಪ್ರಚಾರ ನೀಡಬೇಕಾಗಿದೆ ಎಂದು ವ್ಯವಸ್ಥಾಪನಾ ಅಧ್ಯಕ್ಷರಾದ ಶುಭಧರ ಶೆಟ್ಟಿ ತಿಳಿಸಿದರು.
ಮುದ್ರಾಡಿ ಗ್ರಾಮ ಪಂಚಾಯತ್ ಹಿರಿಯ ಸದಸ್ಯರಾದ ಗಣಪತಿ ಎಂ. ಉಪಸ್ಥಿತರಿದ್ದು ಮನೆ ಮನೆಗಳಿಗೆ ತೆರಳಿ ವಿಜ್ಞಾಪನ ಪತ್ರ ನೀಡಿ ಹೆಚ್ಚು ಪ್ರಚಾರ ಮಾಡಲು ಸಲಹೆ ನೀಡಿದರು.
ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರಾದ ಗುರು ಪ್ರಸಾದ್ ಕೊಳಂಬೆ, ಮುದ್ರಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಮಂಜುನಾಥ ಹೆಗ್ಡೆ,ಸದಸ್ಯರಾದ ಸನತ್ ಕುಮಾರ್, ವ್ಯವಸ್ಥಾಪನಾ ಸಮಿತಿಯ ಸದಸ್ಯರು, ಜೀರ್ಣೋದ್ಧಾರ ಸಮಿತಿ ಸದಸ್ಯರು, ಹಾಗೂ ಊರ ಭಕ್ತರು ಹಾಜರಿದ್ದರು.
ಶ್ರೀಧರ್ ಹೆಬ್ಬಾರ್ ಕಾಪೋಳಿ ಯವರು ಸ್ವಾಗತಿಸಿ ಪ್ರಾಸ್ತಾಪಿಸಿದರು. ಗರಡಿ ಅರ್ಚಕರಾದ ಸಂತೋಷ್ ಆರ್. ಪೂಜಾರಿ ವಂದಿಸಿದರು.

