ಟಿ–20 ವಿಶ್ವಕಪ್ ಗೆದ್ದ ಮಹಿಳಾ ತಂಡ ಉಡುಪಿ ಕೃಷ್ಣ ಮಠಕ್ಕೆ ಭೇಟಿ

0
8

ಉಡುಪಿ ಕೃಷ್ಣ ಮಠಕ್ಕೆ ಭೇಟಿ ಕೊಟ್ಟ ವಿಶ್ವ ಕಪ್ ಗೆದ್ದ ಟಿ-20 ಅಂದರ ಮಹಿಳಾ ಕ್ರಿಕೆಟ್ ತಂಡದ ಸದಸ್ಯೆಯರು ಕೃಷ್ಣ ಮಠಕ್ಕೆ ಭೇಟಿ ನೀಡಿದರು.

ಮಠದ ಆಡಳಿತದವರು ವಿಜೇತ ತಂಡವನ್ನು ಸಂಭ್ರಮದಿಂದ ಬರಮಾಡಿಕೊಂಡರು.ಕನಕ ಕಿಂಡಿಯ ಮೂಲಕ ಕ್ರೀಡಾಳುಗಳು ಕೃಷ್ಣದೇವರಿಗೆ ಕೈ ಮುಗಿದು ಶ್ರೀ ಕೃಷ್ಣನ ದರ್ಶನ ಪಡೆದರು.ಪರ್ಯಾಯ ಶ್ರೀ ಶಿರೂರು ಮಠದ ವೇದವರ್ಧನ ತೀರ್ಥರಿಂದ ಗೌರವಾರ್ಪಣೆ ಮಾಡಿ ಮಂತ್ರಾಕ್ಷತೆ ಹಾಗೂ ಸಾಧನೆ ತೋರಿದ ಮಹಿಳೆಯರಿಗೆ ಶ್ರೀಗಳು ಅಭಿನಂದಿಸಿದರು.ಬಳಿಕ ಸ್ವಲ್ಪ ಸಮಯ ಶ್ರೀಗಳೊಂದಿಗೆ ವಿಜೇತ ತಂಡಸಮಾಲೋಚನೆ ನಡೆಸಿದರು.

ತಂಡದ ಸದಸ್ಯೆಯರ ಜೊತೆ ಸಮಾಲೋಚನೆ ನಡೆಸಿದ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಸಹ ವಿಜೇತ ತಂಡಕ್ಕೆ ಶುಭ ಹಾರೈಸಿದರು. ಬಳಿಕ ಕೃಷ್ಣಮಠದಲ್ಲಿ ಪ್ರಸಾದ ಸ್ವೀಕರಿಸಿ ಮಣಿಪಾಲಕ್ಕೆ ತಂಡದವರು ತೆರಳಿದರು.ನಾಳೆ ನಡೆಯಲಿರುವ ಮಣಿಪಾಲ್ ಮೇರಥಾನ್ ನಲ್ಲಿ ಭಾಗಿಯಾಗಲಿದ್ದಾರೆ

LEAVE A REPLY

Please enter your comment!
Please enter your name here