ಸಸಿಹಿತ್ಲು: ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದ ಬ್ರಹ್ಮಕಲಶ ಧಾರ್ಮಿಕ ಸಭೆ

0
2

ಮುಲ್ಕಿ:ದೇವಸ್ಥಾನ ದೈವಸ್ಥಾನಗಳ ಅಭಿವೃದ್ಧಿಗೆ ನೀಡಿದ ದಾನವು ಸತ್ಪಾತ್ರ ಎನಿಸುವುದರಿಂದ ಶ್ರೀದೇವರ ಆಶೀರ್ವಾದ ಲಭ್ಯವಾಗುವುದು ಎಂದು ಶ್ರೀಕ್ಷೇತ್ರ ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಶೇಖರ ಬೆಳ್ಚಡ ಹೇಳಿದರು.
ಸಸಿಹಿತ್ಲು ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಉಳ್ಳಾಯ ಮದಿಪು ಚಾವಡಿಯಲ್ಲಿ ನಡೆದ ಧರ್ಮ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಶ್ರೀಕ್ಷೇತ್ರ ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ಅನುವಂಶಿಕ ಮೊಕ್ತೇಸರಹಾಗೂ ಅರ್ಚಕ ಶ್ರೀನಿವಾಸ ಯಾನೆ ಅಪ್ಪು ಪೂಜಾರಿ ಆಶೀರ್ವಚನ ನೀಡಿದರು.ಮುಂಬೈ ಉದ್ಯಮಿ ಉಮಾ ಕೃಷ್ಣ ಶೆಟ್ಟಿ, ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ವೇತಾ ಪಳ್ಳಿ, ಶ್ರೀ ನಾರಾಯಣ ಗುರು ವಿಚಾರ ವೇದಿಕೆಯ ರಾಜ್ಯಾಧ್ಯಕ್ಷ ಸತ್ಯಜೀತ್ ಸುರತ್ಕಲ್,ಶ್ರೀಕ್ಷೇತ್ರದ ಪ್ರಧಾನ ಅರ್ಚಕ ತೋಚೋಡಿ ಶೇಖರ ಪೂಜಾರಿ, ಅರ್ಚಕರಾದ ಸುರೇಶ್ ಪೂಜಾರಿ, ಕೊಲ್ಲೂರು ಶ್ರೀ ಕಾಂತಾಬಾರೆ ಬೂದಾಬಾರೆ ಕ್ಷೇತ್ರದ ಕೋಶಾಧಿಕಾರಿ ಹರೀಂದ್ರ ಸುವರ್ಣ, ಎನ್‌ಐಟಿಕೆ ಪ್ರಾದ್ಯಾಪಕ ಡಾ.ಶ್ರೀಕಾಂತ ರಾವ್, ಬಿಲ್ಲವರ ಹಿತವರ್ದಕ ಸಂಘದ ಅಧ್ಯಕ್ಷಜಗನ್ನಾಥ ಕೋಟ್ಯಾನ್,ಮುಂಬೈ ಸಮಿತಿ ಅಧ್ಯಕ್ಷ ಸತೀಶ್ ಕೋಟ್ಯಾನ್,ಸಂಚಾಲಕ ಅನಿಲ್ ಪೂಜಾರಿ ಮತ್ತಿತರರಿದ್ದರು. ಬ್ರಹ್ಮ ಕಲಶೋತ್ಸವ ಸಮಿತಿಯ ಅಧ್ಯಕ್ಷ ಸಿ.ಬಿ.ಕರ್ಕೇರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಯಶೋಧರ ಕೋಟ್ಯಾನ್ ಸ್ವಾಗತಿಸಿದರು,ವಿಜಯ ಸನಿಲ್ ವಂದಿಸಿದರು, ಭಾಸ್ಕರ ಸುವರ್ಣ ನಿರೂಪಿಸಿದರು.

ಸಸಿಹಿತ್ಲು: ಇಂದು(ಫೆ. 8) ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಮುಲ್ಕಿ: ಹಳೆಯಂಗಡಿ ಸಮೀಪದ ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಮಾರ್ಚ್ 4 ರಿಂದ 8ರವರೆಗೆ ನಡೆಯಲಿದ್ದು ಪೂರ್ವಭಾವಿಯಾಗಿ
ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದಲ್ಲಿ ಫೆ.8 ಬೆಳಿಗ್ಗೆ 11ಗಂಟೆಗೆ ನಡೆಯಲಿದೆ ಎಂದು ಕ್ಷೇತ್ರದ ಬ್ರಹ್ಮಕಲಶೋತ್ಸವ ಹಾಗೂ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪ್ರಕಟಣೆ ತಿಳಿಸಿದೆ

LEAVE A REPLY

Please enter your comment!
Please enter your name here