ಶ್ರೀದೇವಿ ಮತ್ತು ಶ್ರೀ ವೆಂಕಟರಮಣ ದೇವಸ್ಥಾನ, ಹೊದ್ದೂರು, 10ನೇ ವರ್ಷದ ಗುಳಿಗರಾಜ ಮತ್ತು ಶ್ರೀ ದುರ್ಗಿ ದೇವಿಯ ಉತ್ಸವ

0
1

ಶ್ರೀದೇವಿ ಮತ್ತು ಶ್ರೀ ವೆಂಕಟರಮಣ ದೇವಸ್ಥಾನ ಮಡಿಕೇರಿ ತಾಲೂಕು ಹೊದ್ದೂರು ಗ್ರಾಮದ ಪಾಲೆಮಾಡು 10ನೇ ವರ್ಷದ ಗುಳಿಗರಾಜ ಮತ್ತು ಶ್ರೀ ದುರ್ಗಿ ದೇವಿಯ ಉತ್ಸವವನ್ನು ಪ್ರತಿ ಐದು ವರ್ಷಕ್ಕೊಮ್ಮೆ ಇಲ್ಲಿನ ಕುಂಬಾರ ಜನಾಂಗದ ಕುಟುಂಬಸ್ಥರು ಹಾಗೂ ನೆರೆಕರೆಯವರು ನಡೆಸುತ್ತ ಬಂದಿರುತ್ತಾರೆ, ಅದೇ ರೀತಿ ಈ ವರ್ಷ 2026, ಫೆಬ್ರವರಿ 13ನೇ ತಾರೀಖು ಶುಕ್ರವಾರ ಮತ್ತು 14ನೇ ತಾರೀಖು ಶನಿವಾರ ತಂತ್ರಿಗಳಾದ ಶ್ರೀ ಜಿ ಕೆ ನಂಬೂದರಿ ಇವರ ನೇತೃತ್ವದಲ್ಲಿ ಶ್ರೀ ದುರ್ಗಿದೇವಿ ಉತ್ಸವವನ್ನು ನಡೆಸಲು ನಿಶ್ಚಯಿಸಲಾಗಿರುತ್ತದೆ. ದಿನಾಂಕ 13.02.2026ನೇ ಶುಕ್ರವಾರ ಸಂಜೆ 5:00 ಗಂಟೆಯಿಂದ ರಾತ್ರಿ 9:00 ಗಂಟೆವರೆಗೆ ಸ್ಥಾನಗಳ ಶುದ್ದ, ಪುಣ್ಯಹ ದೇವಿ ಪೂಜೆ ಮತ್ತು ಕುರುದಿ ಪೂಜೆ ಇರುತ್ತದೆ. ತದನಂತರ ಹೊದ್ದೂರು ಗ್ರಾಮದ ಶ್ರೀಮತಿ ಶ್ರೀ ಕೆ.ಕೆ.ಶೀಲಾ, ಅಶೋಕ ಮತ್ತು ಮಕ್ಕಳು ಇವರಿಂದ ರಾತ್ರಿ ಅನ್ನ ಸಂತರ್ಪಣೆ ಇರುತ್ತದೆ.

ದಿನಾಂಕ 14.02.2026 ನೇ ಶನಿವಾರ ವೃಷಭ ಲಗ್ನದಲ್ಲಿ ಬೆಳಗ್ಗೆ 6:00 ಗಂಟೆಯಿಂದ ಮಧ್ಯಾಹ್ನ 12:00 ಗಂಟೆಯವರೆಗೆ ಗಣಪತಿ ಹೋಮ, ಕಲಶಪೂಜೆ, ಕಲಶಾಭಿಷೇಕ ನಡೆಯಲಿದ್ದು, ಮತ್ತು ಮಧ್ಯಾಹ್ನ 1:00 ಗಂಟೆಗೆ ಮಹಾಪೂಜೆ ನಡೆಯಲಿದೆ. ಪೂಜೆ ನಂತರ ಪ್ರಸಾದ ವಿತರಣೆ ಮತ್ತು ಹೊದ್ದೂರು ಗ್ರಾಮದ ಶ್ರೀಮತಿ ಶ್ರೀ ಹೆಚ್. ಪಿ ಭಾರತಿ, ಮನೋಹರ ಮತ್ತು ಮಕ್ಕಳು ಹಾಗೂ ಬಿ.ಜಿ ನಾಗರತ್ನ ಇವರಿಂದ ಅನ್ನ ಸಂತರ್ಪಣೆ ಇರುತ್ತದೆ.

ಈ ದೇವತಾ ಉತ್ಸವಕ್ಕೆ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಕೋರುವ

ಅಧ್ಯಕ್ಷರು ಮತ್ತು ಆಡಳಿತ ಮಂಡಳಿ
ಶ್ರೀದೇವಿ ಮತ್ತು ಶ್ರೀ ವೆಂಕಟರಮಣ ದೇವಸ್ಥಾನ ಹೊದ್ದೂರು,
ಮಡಿಕೇರಿ ತಾಲೂಕು, ಕೊಡಗು ಜಿಲ್ಲೆ.

ವರದಿ : ಪುಷ್ಪ ಪ್ರಸಾದ್ ಉಡುಪಿ

LEAVE A REPLY

Please enter your comment!
Please enter your name here