ಬಹುಮುಖ ಪ್ರತಿಭೆ ಬಾಲಕ ಅಮೋಘ್ ಭಟ್ ಕೆ.

0
28

ಸಂಭ್ರಮ ಭಟ್ ಹಾಗೂ ಶ್ರೀಯುತ ಕಾರ್ತಿಕ್ ಭಟ್ ಇವರ ಮಗನಾದ ಅಮೋಘ್ ಭಟ್ ಕೆ. ಇವರು ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ತಾಲೂಕಿನ ಕಿನ್ನಿಗೋಳಿಯ ಗೋಪಾಲಕೃಷ್ಣ ನಗರದಲ್ಲಿ ನೆಲೆಸಿದ್ದು,
ಶ್ರೀ ದುರ್ಗಾಪರಮೇಶ್ವರಿ ಆಂಗ್ಲ ಮಾಧ್ಯಮ ಶಾಲೆ ಕಟೀಲಿನಲ್ಲಿ ಎರಡನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.. ಸಂಗೀತ,ಚೆಂಡೆ, ಯಕ್ಷಗಾನದಲ್ಲಿ ಆಸಕ್ತಿ ಹೊಂದಿರುವ ಇವರು ಅದರ ಅಭ್ಯಾಸದ ಹಾದಿಯಲ್ಲಿದ್ದಾರೆ.

ಕಟೀಲಿನಲ್ಲಿ ನಡೆಯುವ ಕೃಷ್ಣ ಜನ್ಮಾಷ್ಟಮಿಯ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದುಕೊಂಡಿರುತ್ತಾರೆ,ಹಾಗೂ ಸುರಗಿರಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿ ವರ್ಷ ನಡೆಯುವ ಸಂಸ್ಕಾರ ಶಿಬಿರದಲ್ಲಿ ಭಾಗವಹಿಸಿ ಹಲವಾರು ಉತ್ತಮ ವಿಷಯಗಳನ್ನು ಕಲಿಯುತ್ತಾ, ಸಂಸ್ಕಾರಗಳನ್ನು ಅರಿಯುತ್ತಾ, ಹಲವಾರು ಸ್ತೋತ್ರಗಳನ್ನು ಕಲಿತುಕೊಂಡಿರುತ್ತಾರೆ,ಪ್ರಶಸ್ತಿ ಪತ್ರವನ್ನು ಪಡೆದಿರುತ್ತಾರೆ.

ಶಾಲೆಯಲ್ಲಿ ನಡೆಸಿದ ಛದ್ಮವೇಷ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಮಾತುಗಾರಿಕೆಯಲ್ಲಿ ,ಜಾನಪದ ಗೀತೆಯಲ್ಲಿ ಯೂ ಬಹುಮಾನ ಪಡೆದುಕೊಂಡಿರುತ್ತಾರೆ… ಕಥಾ ಬಿಂದು ಪ್ರಕಾಶನದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪತ್ರವನ್ನು ಪಡೆದಿರುತ್ತಾರೆ. ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಂಸಾಳೆ ನೃತ್ಯ ಮಾಡಿರುತ್ತಾನೆ .. ದೇಶ ಭಕ್ತಿಗೀತೆ, ಜಾನಪದ ಗೀತೆ, ಭಕ್ತಿಗೀತೆಯನ್ನು ಹಾಡುವುದರ ಜೊತೆಗೆ ಉಗಾಭೋಗಗಳು ಮತ್ತು ಭಗವದ್ಗೀತೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದು ಅಭ್ಯಾಸಿಸುತ್ತಿದ್ದಾರೆ.

ವಾಯ್ಸ್ ಆಫ್ ಆರಾಧನಾ ತಂಡದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದು ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ ಹಾಗೂ ತಿಂಗಳ ವಿಜೇತರಾಗಿ ಅಗರಿ ಎಂಟರ್ಪ್ರೈಸಸ್ ನಿಂದ ಬಹುಮಾನವನ್ನು ಪಡೆದುಕೊಂಡಿರುತ್ತಾರೆ.. ಮಕ್ಕಳ ಹಬ್ಬ ಕಾರ್ಯಕ್ರಮದಲ್ಲಿ ಚಾರ್ಲಿ ಚಾಪ್ಲಿನ್ ನಟನೆ ಮಾಡಿ ಜನರನ್ನು ರಂಜಿಸಿರುತ್ತಾರೆ. ಸ್ಪೂರ್ತಿ ವಿಶೇಷ ಮಕ್ಕಳ ಶಾಲೆಯಲ್ಲಿ ಕಾರ್ಯಕ್ರಮ ನೀಡಿ ಪ್ರಶಸ್ತಿ ಪತ್ರವನ್ನು ಪಡೆದಿರುತ್ತಾನೆ.

ಆಭರಣ ಜ್ಯುವೆಲ್ಲರಿಯವರು ಆಯೋಜಿಸಿದ್ದ ಮಕ್ಕಳ ದಿನಾಚರಣೆಯ ವಿಶೇಷ ಕಾರ್ಯಕ್ರಮದಲ್ಲಿ ಮ್ಯ್ಯಾಜಿಕ್ ಮಾಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವರ ಸನ್ನಿಧಾನದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಕ್ತಿಗೀತೆಯನ್ನು ಹಾಡಿ ಮೆಚ್ಚುಗೆಗೆ ಪಾತ್ರರಾಗಿರುತ್ತಾರೆ.. ಕರ್ನಾಟಕ ಬ್ಯಾಂಕ್ ಗೆ ಸಂಬಂಧಿಸಿದಂತೆ ಹಿರಿಯ ಕಲಾವಿದರಾದ ಟೆನ್ನಿಸ್ ಕೃಷ್ಣ ಸರ್ ಜೊತೆಗೆ ಜಾಹಿರಾತಿನಲ್ಲಿ ನಟಿಸಿರುತ್ತಾರೆ. ವಾಯ್ಸ್ ಆಫ್ ಆರಾಧನಾ ತಂಡದಲ್ಲಿ ಈ ತಿಂಗಳ ವಿಜೇತರಲ್ಲಿ ಒಬ್ಬರಾದ ಇವರು ಜನ ಸಾಮಾನ್ಯರನ್ನು ತಲುಪುವ ಮಾಧ್ಯಮವಾದ “ತುಳು ನಾಡ ವಾರ್ತೆ” ಯೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here