“ಭರವಸೆಯ ಬದುಕಿಗೆ ಬೆಳಕು ನೀಡಿದ ನೇತಾಜಿ ಬ್ರಿಗೇಡ್ (ರಿ.) ಮೂಡುಬಿದಿರೆ

0
17

ನೇತಾಜಿ ಬ್ರಿಗೇಡ್ (ರಿ.) ಮೂಡುಬಿದಿರೆ “ಭರವಸೆಯ ಬದುಕಿಗೆ ಬೆಳಕು ನೀಡೋಣ” 22 ನೇ ಸೇವಾ ಯೋಜನೆಯಲ್ಲಿ ಸಂಗ್ರಹವಾದ ಒಟ್ಟು ಮೊತ್ತ ₹ 1,88,928/-ರೂಗಳನ್ನು ಮೂಡುಬಿದಿರೆ ಕೋಡಂಗಲ್ಲು ನಿವಾಸಿಯಾದ “ಅದ್ವಿತ್ ಡಿ ದೇವಾಡಿಗ” ಮತ್ತು ಪುತ್ತಿಗೆ ನಿವಾಸಿಯಾದ “ಅಕ್ಷತಾ ಕುಮಾರಿ” ರವರಿಗೆ ತಲಾ ₹94464/- ರಂತೆ ಇಬ್ಬರಿಗೂ ವಿತರಿಸಲಾಯಿತು.

ವೇಷವನ್ನು ಧರಿಸಿರುವ ನಮ್ಮ ಪದಾಧಿಕಾರಿಗಳಾದ “ಸುಶಾಂತ್ ಸುವರ್ಣ, ನಿಖಿಲ್ ಭಟ್, ಸುಶಾಂತ್ ಚಾಮುಂಡಿ ಬೆಟ್ಟ” ರವರನ್ನು ಗೌರವಿಸಲಾಯಿತು. ನಮ್ಮ ಸೇವಾ ಯೋಜನೆಗೆ ಸಂಪೂರ್ಣವಾಗಿ ಸಹಕಾರ ನೀಡಿರುವ ಆಳ್ವಾಸ್ ವಿದ್ಯಾ ಸಂಸ್ಥೆಯ ಯುವ ಉತ್ಸಾಹಿ ತರುಣರಿಗೆ ಗೌರವಿಸಲಾಯಿತು.

ಪುರಸಭಾ ನಿಕಟ ಪೂರ್ವ ಉಪಾಧ್ಯಕ್ಷರಾದ ನಮ್ಮ ಗೌರವ ಸಲಹೆಗಾರರಾದ ನಾಗರಾಜ್ ಪೂಜಾರಿ , ಮೂಡುಬಿದಿರೆ ಕೋಟಿಚೆನ್ನಯ ಜೋಡುಕರೆ ಕಂಬಳ ಸಮಿತಿ ಕಾರ್ಯದರ್ಶಿಗಳಾದ “ ರಂಜಿತ್ ಪೂಜಾರಿ” , ಉದ್ಯಮಿಗಳಾದ “ಸಂತೋಷ್ ಶೆಟ್ಟಿ” ಪುತ್ತಿಗೆ ಗುತ್ತು. ಆಳ್ವಾಸ್ ತರುಣರ ನಾಯಕರಾದ “ಧನುಷ್ ಕುಲಾಲ್” ನೇತಾಜಿ ಬ್ರಿಗೇಡ್ ಸ್ಥಾಪಕರು , ಅಧ್ಯಕ್ಷರು ನಮ್ಮೆಲ್ಲ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here