ಉಡುಪಿ: ಜಿಲ್ಲಾಮಟ್ಟದ 3ನೇ ಚೆಸ್ ಚಾಂಪಿಯನ್‌ಶಿಪ್ ಮತ್ತು ಕಲ್ಯ ದೇವರಾಯ ಶೆಣೈ 17ನೇ ಸ್ಮರಣಾರ್ಥ ಜಿಲ್ಲಾ ಚೆಸ್ ಅಸೋಸಿಯೇಶನ್ ಹಾಗೂ ಕಲ್ಯ ದೇವರಾಯ ಶೆಣೈ ಸ್ಮಾರಕ ಚೆಸ್ ಫೌಂಡೇಶನ್ ಆಶ್ರಯದಲ್ಲಿ ಚೆಸ್ ಸ್ಪರ್ಧೆ ನಡೆಯಿತು. ಜಿಲ್ಲೆಯ ವಿವಿಧ ಭಾಗಗಳಿಂದ 195 ಆಟಗಾರರು ಭಾಗವಹಿಸಿದ್ದರು. ವಿವಿಧ ವಯೋ ವರ್ಗಗಳಲ್ಲಿ ಪಂದ್ಯ ನಡೆದು 98 ಟ್ರೋಫಿಗಳು ಹಾಗೂ 28,500 ರೂ. ನಗದು ಬಹುಮಾನ ವಿಜೇತರಿಗೆ ವಿತರಿಸಲಾಯಿತು. ಬೆಸ್ಟ್ ಅಕಾಡೆಮಿ ಪ್ರಶಸ್ತಿಯನ್ನು ಕಾಪು ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಚೆಸ್ ಹಾಗೂ ಉಪ್ಪುಂದದ ಶ್ರೀ ಸಿದ್ದಿವಿನಾಯಕ ಚೆಸ್ ಅಕಾಡೆಮಿ ಪಡೆದುಕೊಂಡಿದೆ. ಓಪನ್ ವಿಭಾಗದಲ್ಲಿ ನಿಹಾಲ್ ಎನ್. ಶೆಟ್ಟಿ ಚಾಂಪಿಯನ್, ಅನೀಶ್ ಎಸ್.ಸಿ. ದ್ವಿತೀಯ, ಚಿನ್ಮಯ ಎಸ್. ಭಟ್ ತೃತೀಯ ಸ್ಥಾನ ಗಳಿಸಿದರು. ಉತ್ತಮ ವೇಟರನ್ ಆಟಗಾರ ಪ್ರಶಸ್ತಿಯನ್ನು ರಾಮ ಶೆರಿಗಾರ್ ಹಾಗೂ ಉತ್ತಮ ಮಹಿಳಾ ಆಟಗಾರ್ತಿ ಪ್ರಶಸ್ತಿಯನ್ನು ಶಾನ್ವಿ ಎಸ್. ಬಳ್ಳಾಲ್ ಪಡೆದರು.
ಅಂಡರ್ 7 ಬಾಲಕರ ವಿಭಾಗದಲ್ಲಿ ಪರೀಕ್ಷಿತ್ ಬಿ. ಖಾರ್ವಿ(ಪ್ರ.), ಸಮ್ರಾಟ್ ಬೆಲ್ಡಡ ಕೇ (ದ್ವಿ), ಬಾಲಕಿಯರ ವಿಭಾಗದಲ್ಲಿ ಅನೇಕರ ಎ ಸಾಲ್ಯಾನ್ (ಪ್ರ), ಅಂಡರ್ 9 ಬಾಲಕರ ವಿಭಾಗದಲ್ಲಿ ಪ್ರಮುಖ್ ಬಿ. ಪೂಜಾರಿ (ಪ್ರ) ಶ್ರೀನಿತ್ ಶೆಟ್ಟಿ (ದ್ವಿ), ಬಾಲಕಿಯರ ವಿಭಾಗದಲ್ಲಿ ಬ್ರಹ್ಮಪ್ರಿಯ (ಪ್ರ.), ಇಂಚರ ಉಡುಪಿ (ದ್ವಿ), ಅಂಡರ್ 11 ಬಾಲಕರ ವಿಭಾಗದಲ್ಲಿ ಅಥರ್ವ (ಪ್ರ), ಮಾಧ್ವ ವ್ಯಾಸರಾಜ್ ತಾಂತೆಯ್ (ದ್ವಿ), ಬಾಲಕಿಯರ ವಿಭಾಗದಲ್ಲಿ ನಿರ್ವಿ ಪೂಜಾರಿ (ಪ್ರ) ಸಾನ್ವಿಕಾ ಎಸ್. ಗಣಿಗಾ (ದ್ವಿ), ಅಂಡರ್ 13 ಬಾಲಕರ ವಿಭಾಗದಲ್ಲಿ ಉತ್ಸವ್ ಬಿ. ಪಿ.(ಪ್ರ), ಅವನೀಶ್ ಪ್ರಸಾದ್ ಕೆ.(ದ್ವಿ), ಬಾಲಕಿಯರ ವಿಭಾಗದಲ್ಲಿ ಅಲಿಶಾ ರೋಡ್ರಿಗಸ್ (ಪ್ರ.) ಅಕ್ಷರಾ ಎ. (ದ್ವಿ), ಅಂಡರ್ 15 ಬಾಲಕರ ವಿಭಾಗದಲ್ಲಿ ಕೃಷಾಂಗ್ ಪ್ರಭು (ಪ್ರ) ಅಂಬರೀಷ್ ಉಪಾಧ್ಯಾಯ (ದ್ವಿ), ಬಾಲಕಿಯರ ವಿಭಾಗದಲ್ಲಿ ಶ್ರೀಲತಾ ಎಸ್. ನಾಯಕ್ (ಪ್ರ), ಸಾಥಿ (ದ್ವಿ), ಅಂಡರ್ 17 ಬಾಲಕರ ವಿಭಾಗದಲ್ಲಿ ಕಲಾಶ್ ಪಠಕ್ (ಪ್ರ), ಅಭಯ ಕಾಮತ್ (ದ್ವಿ), ಬಾಲಕಿಯರ ವಿಭಾಗದಲ್ಲಿ ಅದ್ದಿಕಾ ಪ್ರಭು (ಪ್ರ) ಕೃತಿ ಎ.ಜಿ.ಖಾರ್ವಿ (ದ್ವಿ), ಅಂಡರ್ 19 ಬಾಲಕರ ವಿಭಾಗದಲ್ಲಿ ನಿಖಿಲ್ ವಿಕ್ರಮ್ ಕೆ.ಎಸ್. (ಪ್ರ), ದಕ್ಷ ಕೆ. ಜೋಗಿ (ದ್ವಿ) ಸ್ಥಾನ ಪಡೆದರು. ಪ್ರತಿ ವಯೋ ವರ್ಗದ ಮೊದಲ ಎರಡು ಸ್ಥಾನ ಪಡೆದ ಆಟಗಾರರು ರಾಜ್ಯ ಮಟ್ಟದ ಚೆಸ್ ಚಾಂಪಿಯನ್ ಶಿಪ್ಗೆ ಜಿಲ್ಲೆಯನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ. ಪ್ರಮುಖರಾದ ಡಾ। ಪ್ರಕಾಶ್ ಶೆಣೈ ಕಲ್ಯ, ಡಾ|ಸುರೇಶ್ ಶೆಣೈ, ಡಾ| ಶೋಭಾ ಕಾಮತ್, ಡಾ। ರಾಘವೇಂದ್ರ ನಾಯಕ್, ಡಾ। ಉಲ್ಲಾಸ್ ಕಾಮತ್, ಡಾ| ಪ್ರಕಾಶ್ ಶೆಣೈ ಕಲ್ಯ, ಟಿ. ಕೇಶವರಾಯ ಪೈ, ಮಣಿಪಾಲ ಲಯನ್ಸ್ ಕ್ಲಬ್ ಅಧ್ಯಕ್ಷ ಡಾ| ನಿಶಾಂತ್ ಭಟ್, ಜಿಲ್ಲಾ ಚೆಸ್ ಅಸೋಸಿಯೇಶನ್ ಅಧ್ಯಕ್ಷ ಉಮಾನಾಥ್ ಕಾಪು, ಕಲ್ಯ ದೇವರಾಯ ಶೆಣೈ ಸ್ಮಾರಕ ಚೆಸ್ ಫೌಂಡೇಶನ್ ಅಧ್ಯಕ್ಷಡಾ। ಕೆ. ರಾಜಗೋಪಾಲ್ ಶೆಣೈ, ಆಯೋಜಕರಾದ ರಮೇಶ್ ಕಿಣಿ, ಡಾ। ಎಚ್. ಗಣೇಶ್ ಪೈ ಉಪಸ್ಥಿತರಿದ್ದರು.

