ಪಡುಕೊಣಾಜೆ : ಹೌದಲ್ ಸಮೀಪ ಟೆಂಪೋ – ಬೈಕ್ ಡಿಕ್ಕಿ : ಚಾಲಕನಿಗೆ ಗಂಭೀರ ಗಾಯ

0
60

ಮೂಡುಬಿದಿರೆ : ಶಿರ್ತಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಡುಕೊಣಾಜೆಯ ಹೌದಲ್ ಅಂಗನವಾಡಿ ಕೇಂದ್ರದ ಬಳಿ ಟೆಂಪೋ ಹಾಗೂ ಬೈಕ್ ಮದ್ಯೆ ನಡೆದ ಭೀಕರ ಅಪಘಾತದಲ್ಲಿ ಬೈಕ್ ಚಾಲಕನಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಗಾಯಗೊಂಡವರು ಮೂಡುಬಿದಿರೆಯ ರೋಟರಿ ಅಂಗ್ಲ ಮಾಧ್ಯಮ ಶಾಲೆಯ ಮೂಡುಬಿದಿರೆಯಲ್ಲಿ ಪದವೀಧರ ಸಹಾಯಕ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ವಿದೀಪ್ ಡಿ.ಕೆ. ಎಂದು ತಿಳಿದು ಬಂದಿದೆ. ಅಪಘಾತದ ತೀವ್ರತೆಗೆ ಸವಾರನು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯರು ತಕ್ಷಣವೇ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ವ್ಯವಸ್ಥೆಯನ್ನು ನಡೆಸಿದರು ಎನ್ನಲಾಗಿದೆ. ಘಟನೆ ಕುರಿತು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here