ಹಿಂದೂ ಸಂಗಮ ಆಯೋಜನಾ ಸಮಿತಿ ಅಂಬಲಪಾಡಿ ವಸತಿ : ಹಿಂದೂ ಸಂಗಮ, ಶೋಭಾಯಾತ್ರೆ

0
4

ಫೆ.15 ರವಿವಾರ ಸಂಜೆ ಅಂಬಲಪಾಡಿ ದೇವಸ್ಥಾನದ ಬಳಿ ನೂರಾರು ಹಿಂದೂ ಭಾಂದವರ ಸಮಾಗಮದೊಂದಿಗೆ ನಡೆದ ಬೃಹತ್ ಶೋಭಾಯಾತ್ರೆಗೆ ಅಂಬಲಪಾಡಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ! ನಿ.ಬೀ. ವಿಜಯ ಬಲ್ಲಾಳ್ ಅವರು ಚಾಲನೆ ನೀಡಿದರು.

ಶೋಭಾಯಾತ್ರೆಯು ಅಂಬಲಪಾಡಿ ಮಹಾಕಾಳಿ ಮಾರ್ಗ, ಬೀಡು ಮಾರ್ಗ, ಆನಂದ ರಾವ್ ಮಾರ್ಗವಾಗಿ ಮುಖ್ಯ ರಸ್ತೆ ಮೂಲಕ ಸಾಗಿ ಅಂಬಲಪಾಡಿ ಬಸ್ ನಿಲ್ದಾಣದ ಬಳಿ ಸಮಾಪನಗೊಂಡಿತು.

ಅಂಬಲಪಾಡಿಯ ಲಾಲ್ ಬಹಾದ್ದೂರ್ ಶಾಸ್ತ್ರಿ ಮೈದಾನದಲ್ಲಿ ನಡೆದ ಹಿಂದೂ ಸಂಗಮದ ಸಾರ್ವಜನಿಕ ಸಭೆಯ ಅಧ್ಯಕ್ಷತೆಯನ್ನು ಸಮಾಜ ಸೇವಕ ವಿಶುಕುಮಾರ್ ಶೆಟ್ಟಿ ಅಂಬಲಪಾಡಿ ಅವರು ವಹಿಸಿದ್ದರು.

ರಾಷ್ಟೀಯ ಸ್ವಯಂ ಸೇವಕ ಸಂಘದ ಉಡುಪಿ ಜಿಲ್ಲಾ ಸಹ ಕಾರ್ಯವಾಹ ಪ್ರಶಾಂತ್ ಅರೆಶೀರೂರು ಅವರು ಬೌದ್ಧಿಕ್ ನಡೆಸಿಕೊಟ್ಟರು.

ರಾಷ್ಟೀಯ ಸ್ವಯಂ ಸೇವಕ ಸಂಘದ ಹಿರಿಯ ಕಾರ್ಯಕರ್ತ ಶೇಖರ ಶೆಟ್ಟಿಗಾರ್ ಅಂಬಲಪಾಡಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸ್ವಯಂ ಸೇವಕ ಜಯ ಭಂಡಾರಿ ಅವರು ಸ್ವಾಗತಿಸಿ, ಪರಿಚಯಿಸಿದರು. ರಮೇಶ್ ಸಾಲ್ಯಾನ್ ಅಂಬಲಪಾಡಿ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಸ್ಕಾರ ಭಾರತಿ ಉಡುಪಿ ಜಿಲ್ಲಾ ಮುಖ್ಯ ಕಾರ್ಯದರ್ಶಿ ಗಣೇಶ್ ಶೆಣೈ ಅಂಬಲಪಾಡಿ ಕಾರ್ಯಕ್ರಮ ನಿರೂಪಿಸಿದರು. ಚೇತನ್ ಆಚಾರ್ಯ ಅಂಬಲಪಾಡಿ ವಂದಿಸಿದರು.

ವಿಜಯ ಭಟ್ ಕಡೆಕಾರು ವಂದೇ ಮಾತರಂ ಹಾಡಿದರು. ಶಂಕರ ಅಂಬಲಪಾಡಿ ಮತ್ತು ಪದ್ಮನಾಭ ಅಂಬಲಪಾಡಿ ಅವರು ವೈಯಕ್ತಿಕ ಗೀತೆ ಹಾಡಿದರು. ಹಿರಿಯ ಸ್ವಯಂ ಸೇವಕ ಉಮೇಶ್ ಶೆಟ್ಟಿಗಾರ್ ಅಂಬಲಪಾಡಿ ಮತ್ತು ಸುಧಾಕರ್ ಶೆಟ್ಟಿ ಅಂಬಲಪಾಡಿ ಅತಿಥಿಗಳನ್ನು ಗೌರವಿಸಿದರು.

LEAVE A REPLY

Please enter your comment!
Please enter your name here