ಮಂಗಳೂರು ಪಂಪ್ವೆಲ್‌ ಕಂಕನಾಡಿ ರಸ್ತೆ ಕಾಮಗಾರಿ: ಕ್ಲಪ್ತ ಸಮಯಕ್ಕೆ ಕಾಮಗಾರಿ ಮುಕ್ತಾಯಗೊಳಿಸುವಂತೆ ಐವನ್‌  ಡಿ’ಸೋಜಾರವರು ನಿರ್ದೇಶನ ಹಾಗೂ  ಸೂಚನೆ

0
4

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪಂಪ್ವೆಲ್‌ನಿಂದ ಕಂಕನಾಡಿ ರಸ್ತೆ ಕಾಮಗಾರಿಯನ್ನು ಕೈಗೊಳ್ಳಲಾಗಿದ್ದು, ಈ ಕಾಮಗಾರಿಗೆ ಒಳಚರಂಡಿ ಮತ್ತು ಇನ್ನಿತರ ಕಾಮಗಾರಿಗಳನ್ನುಅತ್ಯಂತ ಶೀಘ್ರವಾಗಿ ಮುಗಿಸಿಕೊಡುವಂತೆ  ಈ ಕಾಮಗಾರಿಗಳನ್ನು ನಡೆಸುತ್ತಿರುವ ಕಾಂಟ್ರೆಕ್ಟರ್‌ ಜೊತೆ & ಅವರ ಟೆಂಡರ್‌ ನ ನಿಯಮದಂತೆ ಕೂಡಲೇ ಕಾಮಗಾರಿ ಪೂರ್ತಿಗೊಳಿಸುವಂತೆ ತಿಳಿಸಿದರು. ಹೆಚ್ಚುವರಿ ಅನುದಾನ ಬೇಕಾದಲ್ಲಿ ಅನುದಾನ ಒದಗಿಸಿಕೊಡುವಂತೆ ಸರ್ಕಾರದ ಜೊತೆ ಚರ್ಚಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ 4 ತಿಂಗಳುಗಳ ಒಳಗಡೆ ಕಾಮಗಾರಿಯನ್ನು ಮುಗಿಸಿಕೊಡುವುದಾಗಿ ಕಾಂಟ್ರೆಕ್ಟರ್‌ ತಿಳಿಸಿದರು. ಬೇರೆ ಕಾಮಗಾರಿಗಳಿಗೆ ಸಂಬಂಧಪಟ್ಟ ಹಾಗೆ ಚರ್ಚಿಸಿ ಬೇರೆ ಬೇರೆ ಇಲಾಖೆಗಳ ಜೊತೆ ಸಂಪರ್ಕವನ್ನು ಬೆಳೆಸಿ ಸದ್ರಿ ಕಾಮಗಾರಿಯನ್ನು ಮುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅದೇ ರೀತಿ  ಟ್ರಾಫಿಕ್‌ ನಲ್ಲಿ ತೊಂದರೆಯಾಗದಂತೆ ಈಗಾಗಲೇ ಎರಡುಮುಖ ರಸ್ತೆ ಬೈಪಾಸ್ನಲ್ಲಿ ರುವ ಅಪಾಯದ ಅಂಚಿನಲ್ಲಿರುವ ರಸ್ತೆ ಭಾಗದಲ್ಲಿ ಕೂಡಲೇ ತುರ್ತು ಕಾಮಗಾರಿಯನ್ನು ಕೈಗೊಂಡು ಅಪಾಯವನ್ನು ತಪ್ಪಿಸಲು ಸೂಚಿಸಲಾಯಿತು. ನಗರಪಾಲಿಕೆ ಇಂಜಿನಿಯರ್‌ ಗಳಿಗೆ ಸೂಚಿಸಲಾಯ್ತು.

ಜಿಲ್ಲಾಧಿಕಾರಿಗಳಿಗೂ ಈ ಬಗ್ಗೆ ತಿಳಿಸಿ ಕೂಡಲೇ ಈ ಬಗ್ಗೆ ಭೇಟಿ ನೀಡಿ ಏಕಮುಖ ರಸ್ತೆಯಾಗಿರುವ ಎರಡೂ ಕಡೆಗಳಲ್ಲಿ ವಾಹನಗಳು ಪಾರ್ಕಿಂಗ್‌ ಮಾಡುವುದನ್ನು ತಪ್ಪಿಸಲು ಮಂಗಳೂರು ಟ್ರಾಫಿಕ್‌ ಪೋಲಿಸ್‌ಗೆ ಸೂಚಿಸಲಾಯ್ತು. ಜನರಿಗೆ ನಾಮಫಲಕವನ್ನು ಹಾಕಿ ಸೂಕ್ತವಾದ ನಿರ್ದೇಶನ ನೀಡಿ ಜನರಿಗೆ ಮೆಲ್ಲನೆ ತೆರಳುವಂತೆ ಸೂಚನಾ ಫಲಕಗಳನ್ನು ಹಾಕುವಂತೆ ಸೂಚಿಸಲಾಯ್ತು. ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳುವಂತೆ ಮಹಾನಗರ ಪಾಲಿಕೆ ಅಧಿಕಾರಿಯಾದ ನರೇಶ್‌ ಶೆಣೈವರಿಗೆ ತಿಳಿಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ಮೇಯರ್‌ರಾದ ಶಶಿಧರ್ ಹೆಗಡೆ, ಮಾಜಿ ಕಾರ್ಪೊರೇಟರ್‌ಗಳಾದ ನವೀನ್ ಡಿಸೋಜಾ, ಪ್ರವೀಣ್ ಚಂದ್ರ ಆಳ್ವ, ಸತೀಶ್ ಪೆಂಗಲ್, ಭಾಸ್ಕರ್ ರಾವ್, ಅಪ್ಪಿಲತಾ, ಕೇಶವ ಮರಳಿ, ನಿಗಮದ ಅಧ್ಯಕ್ಷರಾದ ಶಾಲೆಟ್ ಪಿಂಟೋ, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿಯ ಜೆ. ಅಬ್ದುಲ್ ಸಲೀಂ, ಯುವ ಕಾಂಗ್ರೆಸ್ ನಾಯಕರಾದ ಬಶೀರ್,  ಆಸಿಫ್ ಬಜ್ಜಲ್ ಹಾಗೂ ಪೃಥ್ವಿರಾಜ್, ಕಾಂಗ್ರೆಸ್ ಪಕ್ಷದ ನಾಯಕರಾದ ಚಂದ್ರಕಲಾ ಜೋಗಿ, ಇಮ್ರಾನ್ ಏ.ಆರ್, ಜೇಮ್ಸ್ ಪ್ರವೀಣ್‌ , ನೀತು ಡಿಸೋಜಾ, ಮೀನಾ ಟೆಲಿಸ್, ಅನಿಲ್ ರಸ್ಕಿನ್ನಾ, ಶಶಿಧರ್, ಉಪೇಂದ್ರ, ಪಿಯೂಷ್ ಮುಂತೆರೊ, ಅಶಿತ್, ನವಾಜ್ ಜೆಪ್ಪು, ಹೇಮಂತ ಗರೋಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here