ಮುಲ್ಕಿಯಲ್ಲಿ ರೋಟರಿ ಇಂಟರಾಕ್ಟ್ ಕ್ಲಬ್‌ಗಳ ಜಿಲ್ಲಾ ಸಮಾವೇಶ: 800ಕ್ಕೂ ಅಧಿಕ ಪ್ರತಿನಿಧಿಗಳ ಭಾಗಿ
ಮುಲ್ಕಿ: ಮುಲ್ಕಿ ರೋಟರಿ ಕ್ಲಬ್ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 5 ವಲಯದ ರೋಟರಿ ಕ್ಲಬ್ ಪ್ರಾಯೋಜಿತ ಇಂಟರಾಕ್ಟ್ ಕ್ಲಬ್ ಗಳ ಜಿಲ್ಲಾ ಸಮಾವೇಶವು ಆಗಸ್ಟ್ 8 ನೇ ತಾರೀಕು ಶನಿವಾರ, ಬಪ್ಪನಾಡು ದೇವಸ್ಥಾನದ ಅನ್ನಪೂರ್ಣ ಸಭಾಭವನದಲ್ಲಿ ನಡೆಯಲಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು ಹೇಳಿದರು
ಅವರು ಮಾಧ್ಯಮದ ಜೊತೆ ಮಾತನಾಡಿ ಜಿಲ್ಲಾ ರಾಜ್ಯಪಾಲ ಸತೀಶ್ ಬೋಳಾರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ರೋಟರಿಯ ಜಿಲ್ಲಾ ಸಲಹೆಗಾರ ಡಾ. ಭಾಸ್ಕರ್ ಉಪಸ್ಥಿತರಿರುವರು.
ರಾಷ್ಟ್ರೀಯ ಮಟ್ಟದ ತರಬೇತುದಾರ ಜೆಸಿ ರಾಜೇಂದ್ರ ಭಟ್ ಕೆ ಉಪನ್ಯಾಸ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ರೋಟರಿ ಕ್ಲಬ್ ನ ಡಿ ಜಿ ಇ ಯಶಸ್ವಿ ಸೋಮಶೇಖರ್, ಡಿ. ಜಿ. ಯನ್ ಡಾ. ಸೂರ್ಯನಾರಾಯಣನ್ ಕೆ, ಗೋಪಾಲಕೃಷ್ಣ ಶೆಟ್ಟಿ, ಡಾ.ರಂಜನ್, ಡಾ. ಅರವಿಂದ ಭಟ್, ವಲಯದ ಸಹಾಯಕ ಗವರ್ನರ್ ರೊ. ಜೋಯಲ್ ಹೆರಾಲ್ಡ್ ಡಿ ಸೋಜ , ಡಾ. ಎ ಜಯಕುಮಾರ್ ಶೆಟ್ಟಿ, ಕ್ಷಿತಿಜ್ ಎಸ್ ಶೆಟ್ಟಿ, ದೇವಿದಾಸ ಶೆಟ್ಟಿ,ತ್ಯಾಗರಾಜ ಆಚಾರ್ಯ ಉಪಸ್ಥಿತರಿರುವರು.
ಸಮಾವೇಶದಲ್ಲಿ 800 ಕ್ಕೂ ಅಧಿಕ ರೋಟರಿ ಜಿಲ್ಲಾ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಸಂಯೋಜಕಿ ಮುಲ್ಕಿ ರೋಟರಿ ಕ್ಲಬ್ ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

