ಮೂಡುಶೆಡ್ಡೆಯಲ್ಲಿ ಕಾಲು ಸಂಕಕ್ಕೆ ಶಿಲಾನ್ಯಾಸ, ಮೇಲ್ಚಾವಣಿ ಕಾಮಗಾರಿ

0
7

ವರದಿ ರಾಯಿ ರಾಜ ಕುಮಾರ

ದಕ್ಷಿಣ ಕನ್ನಡ ಜಿಲ್ಲೆಯ ಮೂಡುಶೆಡ್ಡೆ ಗ್ರಾಮ ಪಂಚಾಯತ್ ನ ಕುಸುಮಾಕರ ಶೆಟ್ಟಿಯವರ ಮನೆಯ ಹತ್ತಿರ ಸುಮಾರು 20 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಲು ಸಂಕಲವನ್ನು ನಿರ್ಮಿಸಲು ಶಿಲಾನ್ಯಾಸವನ್ನು ಶಾಸಕ ಉಮಾನಾಥ ಕೋಟ್ಯಾನ್ ಫೆಬ್ರವರಿ 16 ರಂದು ನೆರವೇರಿಸಿದರು. ಇದೇ ಸಂದರ್ಭದಲ್ಲಿ ಗ್ರಾಮದ ಮೂರು ಅಂಗನವಾಡಿಗಳಿಗೆ ಅಳವಡಿಸಲಾಗಿರುವ ಮೇಲ್ಚಾವಣಿಯ ಕಾಮಗಾರಿಯನ್ನು ವೀಕ್ಷಿಸಿ ಸೂಕ್ತ ನಿರ್ದೇಶನವನ್ನು ನೀಡಿದರು.

ಶಾಸಕರೊಂದಿಗೆ ಮೂಡುಶೆಡ್ಡೆ ಗ್ರಾಮ ಪಂಚಾಯತ್ ಅಧ್ಯಕ್ಷ ಅನಿಲ್ ಕುಮಾರ್, ಉಪಾಧ್ಯಕ್ಷ ಬಬಿತಾ ಶೆಟ್ಟಿ, ಗ್ರಾಮಾಂತರ ಸಿಡಿಪಿಓ ಶೈಲಾ, ಅಂಗನವಾಡಿಯ ಶಿಕ್ಷಕಿಯರುಗಳಾದ ಲತಾ, ರತೀಶ್ ಶೆಟ್ಟಿ, ಸರಸ್ವತಿ, ಪಂಚಾಯತ್ ಸದಸ್ಯರುಗಳಾದ ಚಂದ್ರಶೇಖರ ತಂಕಲಾಜೆ, ಜಯಶ್ರೀ, ಹರಿಪ್ರಸಾದ್ ಶೆಟ್ಟಿ, ರಮಾನಾಥ ಅಯ್ಯರ್, ಹಾಗೂ ಸ್ಥಳೀಯ ಸಾರ್ವಜನಿಕರು ಹಾಜರಿದ್ದರು.

LEAVE A REPLY

Please enter your comment!
Please enter your name here