ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೂಡುಬಿದಿರೆ ತಾಲೂಕು ಘಟಕ, ದ್ವಿತೀಯ ಸಾಹಿತ್ಯ ಸಮ್ಮೇಳನವು ಫೆ.21 ರಂದು ಶ್ರೀ ನಾರಾಯಣಗುರು ಸಭಾಭವನ ಕಡಂದಲೆ – ಪಾಲಡ್ಕ,ಪೂಪಾಡಿಕಲ್ಲು ಎಂಬಲ್ಲಿ ನಡೆಯಲಿದೆ.
ಬೆಳಗ್ಗೆ 8-15 ಕ್ಕೆ ಸಮ್ಮೇಳನಾಧ್ಯಕ್ಷರಿಗೆ ಮತ್ತು ಅಭ್ಯಾಗತರಿಗೆ ಸಂಪ್ರಾದಾಯಿಕ ಸ್ವಾಗತ, 9-00 ಕ್ಕೆ ಉದ್ಘಾಟನಾ ಸಮಾರಂಭ ಜರಗಲಿದೆ. 11-30ರಿಂದ 11-40ರವರೆಗೆ ಸಂಸ್ಕೃತಿಕ ವೈವಿಧ್ಯ : ಆಳ್ವಾಸ್ ಸ್ವಾಯತ್ತ ಪದವಿ ಕಾಲೇಜು ವಿದ್ಯಾರ್ಥಿಗಳಿಂದ ,11-40ರಿಂದ 12-00 ರವರೆಗೆ ವಿಶೇಷೋಪನ್ಯಾಸವು ಜೀವನ್ ರಾಂ ಸುಳ್ಯ, ಇವರಿಂದ ನಡೆಯಲಿರುವುದು.12-00 ರಿಂದ 12-10ರವರೆಗೆ ಶ್ರೀ ಧವಳ ಕಾಲೇಜು ವಿದ್ಯಾರ್ಥಿಗಳಿದ ಭಾವಗಾನ ,12-10ರಿನದ 12-20ರವರೆಗೆ ಸಂಸ್ಕೃತಿಕ ವೈವಿಧ್ಯ – ಆಳ್ವಾಸ್ ಸ್ವಾಯತ್ತ ಪದವಿ ಕಾಲೇಜು ವಿದ್ಯಾರ್ಥಿಗಳಿಂದ ,12-25ರಿಂದ 12.45ರವರೆಗೆ ಶ್ವೇತಾ ಜೈನ್,ನ್ಯಾಯವಾದಿಗಳು ಇವರಿಂದ ಶಿಕ್ಷಣ ಮತ್ತು ಸಂಸ್ಕೃತಿ ವಿಷಯದ ಕುರಿತು ವಿಶೇಷೋಪನ್ಯಾಸ ,12-45ರಿಂದ 1-30 ರವರೆಗೆ ಭೋಜನ ನಡೆಯಲಿದೆ.
02-50ರಿಂದ 03-15ರವರೆಗೆ ಸಮ್ಮೇಳನದ ಪೂರ್ವಭಾವಿಯಾಗಿ ನಡೆದ ಸಾಹಿತ್ಯಿಕ ಸ್ಪರ್ಧಾ ವಿಜೇತರಿಗೆ ಗೌರವ ಮತ್ತು ಪ್ರಮಾಣಪತ್ರ ವಿತರಣೆ , 02-30ಕ್ಕೆ ಸಮಾರೋಪ ಸಮಾರಂಭ ಜರುಗಲಿದೆ. ಶೈಕ್ಷಣಿಕ 2024-25ರ ಕನ್ನಡ ಮಾಧ್ಯಮ ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ಮೂಡುಬಿದಿರೆ ತಾಲೂಕಿಗೆ ಗರಿಷ್ಠ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಗೌರವ ಸನ್ಮಾನ ನಡೆಯಲಿರುವುದು. ಸುದರ್ಶನ ಶೆಟ್ಟಿ ಕಡಂದಲೆ,ಪ್ರಸನ್ನ ಹೆಗ್ಡೆ,ದಾಮೋದರ ಸಪಲಿಗ,ವೆಂಕಟೇಶ ಬಂಗೇರ,ಡಾ|| ಕಿರಣ್ ಭಟ್ಟ್,ಕಡಂದಲೆ,ಎಡ್ವರ್ಡ್ ರೆಬೆಲ್ಲೋ ತಾಕೋಡೆ ವಿವಿಧ ಕ್ಷೇತ್ರಗಳ ಸಾಧಕರಿಗೆ ಗೌರವ ಸನ್ಮಾನ ನಡೆಯಲಿದೆ.

