ಭಜನಾ ಸಂಭ್ರಮ ಐತಿಹಾಸಿಕ ದಾಖಲೆ : ಸದಾಶಿವ ಉಪಾಧ್ಯಾಯ
ಹೆಬ್ರಿ : ಭಜನೆಯು ಭಗವಂತನಿಗೆ ಅತ್ಯಂತ ಪ್ರೀತಿಯ ಸೇವೆ. ಭಜನೆಯ ಮೂಲಕ ಭಗವಂತನನ್ನು ಆರಾಧಿಸಿದಾಗ ನಮ್ಮ ಬದುಕು ಸಮೃದ್ಧವಾಗುತ್ತದೆ ಎಂಬುದಕ್ಕೆ ಸೂರಿಮಣ್ಣು ಸುವರ್ಣ ಭಜನಾ ಸಂಭ್ರಮ ಎಲ್ಲರ ಕೈಜೋಡಿಸುವಿಕೆಯಿಂದ ಅತ್ಯಂತ ಯಶಸ್ವಿಯಾಗಿ ಐತಿಹಾಸಿಕ ದಾಖಲೆಯಾಗಿರುವುದೇ ಸಾಕ್ಷಿಯಾಗಿದೆ ಎಂದು ಸೂರಿಮಣ್ಣು ಭಜನೆಯ ರೂವಾರಿ ವೇದಮೂರ್ತಿ ಸೂರಿಮಣ್ಣು ಸದಾಶಿವ ಉಪಾಧ್ಯಾಯ ಹೇಳಿದರು.
ಅವರು ಭಾನುವಾರ ಸೂರಿಮಣ್ಣು ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನ ಸೂರಿಮಣ್ಣು ಮಠದಲ್ಲಿ ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿ ಮತ್ತು ಶ್ರೀ ಲಕ್ಷ್ಮೀನಾರಾಯಣ ಮಹಿಳಾ ಭಜನಾ ಮಂಡಳಿ ಸೂರಿಮಣ್ಣು ಇದರ ವತಿಯಿಂದ ೮ ದಿನಗಳ ಕಾಲ ನಡೆದ ಭಜನಾ ಸುವರ್ಣ ಸಂಭ್ರಮ ಯಶಸ್ವಿ ಸಂಪನ್ನದ ಹಿನ್ನಲೆಯಲ್ಲಿ ಕೃತಜ್ಞತೆ ಸಮರ್ಪಣಾ ಸಭೆಯಲ್ಲಿ ಮಾತನಾಡಿದರು.
ಸೂರಿಮಣ್ಣಿನಲ್ಲಿ ಭಜನೆಯ ಲೋಕವನ್ನೇ ಸೃಷ್ಠಿಸಿ ಅದ್ಬುತ ಸೇವೆ ನಡೆದಿದೆ, ಭಜನಾ ಸೇವೆಯು ನಿರಂತರವಾಗಿ ಸೂರಿಮಣ್ಣಿನಲ್ಲಿ ನಡೆಯುತ್ತಿರಲಿ ಎಂದು ಭಜನಾ ಸುವರ್ಣ ಸಂಭ್ರಮ ಸಮಿತಿಯ ಅಧ್ಯಕ್ಷ ಶಿವಪುರ ಸುರೇಶ ಶೆಟ್ಟಿ ಕೃತಜ್ಞತೆ ಸಲ್ಲಿಸಿದರು. ಹೆಬ್ರಿ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರಮೇಶ ಕುಮಾರ್ ಶಿವಪುರ, ಕಾರ್ಯದರ್ಶಿ ರಾಧಾಕೃಷ್ಣ ಪುತ್ತಿ, ವರಂಗ ಕೆ. ರಾಮಚಂದ್ರ ಭಟ್ ಮಾತನಾಡಿದರು. ಶಿವಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶೇಖರ ಶೆಟ್ಟಿ ಶಿವಪುರ, ಉಪ್ಪಳ ಸಂತೋಷ ಕುಮಾರ್ ಶೆಟ್ಟಿ, ಸೂರಿಮಣ್ಣು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿ ಮತ್ತು ಶ್ರೀ ಲಕ್ಷ್ಮೀನಾರಾಯಣ ಮಹಿಳಾ ಭಜನಾ ಮಂಡಳಿ ಹಾಗೂ ವಿವಿಧ ಭಜನ ಮಂಡಳಿಯ ಸದಸ್ಯರು, ಭಜನಾ ಸುವರ್ಣ ಸಂಭ್ರಮ ಸಮಿತಿ, ವಿವಿಧ ಉಪಸಮಿತಿಯ ಸದಸ್ಯರು, ಸ್ವಯಂ ಸೇವಕರು, ಸ್ಥಳೀಯ ಭಕ್ತ ಸಮೂಹ, ಭಜನಾ ಮಂಡಳಿಯ ಸದಸ್ಯರು, ಕಾರ್ಯದರ್ಶಿ ರಾಧಾಕೃಷ್ಣ ಪುತ್ತಿ, ಜೊತೆ ಕಾರ್ಯದರ್ಶಿ ಸುಭಾಶ್ಚಂದ್ರ ನಾಯ್ಕ್, ಕೊಶಾಧಿಕಾರಿ ಪ್ರಸನ್ನ ಶೆಟ್ಟಿ ಒಂಬತೊಕ್ಲು, ಮಹಿಳಾ ಘಟಕದ ಅಧ್ಯಕ್ಷೆ ಅಕ್ಷತಾ ಶೆಟ್ಟಿ, ಯುವ ಘಟಕದ ಅಧ್ಯಕ್ಷ ಚೇತನ್ ಕುಲಾಲ್, ಗೌರವ ಸಲಹೆಗಾರ ಸುಧಾಕರ ಶೆಟ್ಟಿ ಮುನಿಯಾಲು, ಉಪಾಧ್ಯಕ್ಷರಾದ ದಿನೇಶ ಶೆಟ್ಟಿ ಸೂರಿಮಣ್ಣು, ಸೂರಿಮಣ್ಣು ಮಠದ ವಿದ್ವಾನ್ ರವಿರಾಜ್ ಉಪಾಧ್ಯಾಯ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
