ಶ್ರೀ ಕೃಷ್ಣ ಯುವಕ ಮಂಡಲ (ರಿ) ಪುತ್ತೂರು ಸಿಟಿಗುಡ್ಡೆಯವರಿಂದ ಜನವರಿ ತಿಂಗಳ ಸಹಾಯ ಧನ ಹಸ್ತಾಂತರ

0
46


ಪುತ್ತೂರು ತಾಲೂಕು ಯುವಜನ ಇಲಾಖೆ ಪ್ರಶಸ್ತಿ ಪುರಸ್ಕೃತ ಶ್ರೀ ಕೃಷ್ಣ ಯುವಕ ಮಂಡಲ (ರಿ.) ಸಿಟಿಗುಡ್ಡೆ ನೆಹರು ನಗರ ಪುತ್ತೂರು ಇದರ 69ನೇ ಸಹಾಯ ಯೋಜನೆಯ ಜನವರಿ ತಿಂಗಳ ಸಹಾಯಧನವನ್ನು ಪುತ್ತೂರು ನರಿಮೊಗರು ನಿವಾಸಿಯಾದ ಶ್ರೀಮತಿ ಗಾಯತ್ರಿ ಮತ್ತು ಗಣೇಶ್‌ರವರಿಗೆ ಜನಿಸಿದ 14 ದಿನದ ಹೆಣ್ಣುಮಗುವಿನ ಚಿಕಿತ್ಸೆ ಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ದಿನಾಂಕ 15..02..2026ರಂದು ನೀಡಲಾಯಿತು.ಹೆಣ್ಣುಮಗುವು ಅಸ್ಪಿರೇಷನ್ ನ್ಯುಮೋನಿಯಾ, ಸೆಕೆಂಡರಿ PTHNL ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು ಪ್ರಸ್ತುತ ಮಗುವನ್ನು PC-AC ಮೋಡ್‌ನಲ್ಲಿ ventilationನಲ್ಲಿ ಇಡಲಾಗಿದ್ದು, obstructive mixed TAPVC ಇರುವುದು ಪತ್ತೆಯಾಗಿದೆ. ಈಗ ಶಸ್ತ್ರಚಿಕಿತ್ಸೆಗೆ ಬೆಂಗಳೂರಿನ ನಾರಾಯಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, CT ಪಲ್ಮನರಿ ಅಂಜಿಯೋಗ್ರಾಪಿ ಮಾಡಲಾಗಿದೆ. ಗಣೇಶರವರು ರಿಕ್ಷಾ ಚಾಲಕರಾಗಿದ್ದು, ಚಿಕಿತ್ಸೆಯ ಖರ್ಚನ್ನು ಭರಿಸಲಾಗದೆ ಸಹಾಯ ಹಸ್ತ ನೀಡಲು ಮನವಿ ನೀಡಿದ್ದರು ಮಾನವೀಯ ಸಹೃದಯಿ ದಾನಿಗಳಿಂದ ಸಂಗ್ರಹಿಸಿದ ಮೂವತ್ತು ಸಾವಿರದ ಇನ್ನೂರು ರೂಪಾಯಿ(30,200)ಯನ್ನು ದಿನಾಂಕ 15..02..2026ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಕೊಡುಗೈ ದಾನಿ ಸಮಾಜ ಸೇವಕ ಪಂಜಿಗುಡ್ಡೆ ಈಶ್ವರಭಟ್ ರವರ ಮೂಲಕ ಮಗುವಿನ ಹೆತ್ತವರಿಗೆ ಹಸ್ತಾಂತರ ಮಾಡಲಾಯಿತು.ಈ ಸಂದರ್ಭದಲ್ಲಿ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು,ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ರಾದ ಶ್ರೀಯುತ ವಸಂತ ಕೆದಿಲಾಯ, ಸಾಹಿತಿ ಶಿಕ್ಷಕಿ ಡಾ.ಶಾಂತಾ ಪುತ್ತೂರು,ಸಮಾಜ ಸೇವಕಿ ದೀಕ್ಷಾ ಮೇಡಂ ಮಂಗಳೂರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here