ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಘಟಕ ಮಕ್ಕಳ ಕಲಾ ಲೋಕ ಇದರ 2026-27 ನೇ ಸಾಲಿನ ಅಧ್ಯಕ್ಷರಾಗಿ ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕ ರಮೇಶ ಎಂ. ಬಾಯಾರು ಪುನರಾಯ್ಕೆ ಆಗಿದ್ದಾರೆ
ದಿನಾಂಕ 21.02.2026ರಂದು ವಿಟ್ಲ ಮಾದರಿ ಶಾಲೆಯಲ್ಲಿ ಜರಗಿದ ಮಕ್ಕಳ ಕಲಾ ಲೋಕದ ಮಹಾ ಸಭೆಯಲ್ಲಿ ಈ ಆಯ್ಕೆಯನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಬಾಯಾರು ಅವರು ಲೇಖಕರು, ಭಾಷಣಕಾರರು, ಸಂಪನ್ಮೂಲ ವ್ಯಕ್ತಿಯೂ ಆಗಿರುವರಲ್ಲದೆ ಅಡ್ಯನಡ್ಕ ಜನತಾ ವಿದ್ಯಾ ಸಂಸ್ಥೆಗಳ ಗೌರವ ಆಡಳಿತಾಧಿಕಾರಿಯೂ ಆಗಿರುತ್ತಾರೆ. ಇವರು ಉತ್ತಮ ಸಂಘಟಕರೆಂಬುನ್ನು ಈ ಹಿಂದಿನ ತಾಲೂಕು ಮಕ್ಕಳ ಸಾಹಿತ್ಯ ಸಮ್ಮೇಳನಗಳು ದೃಢಪಡಿಸಿವೆ. ಮಕ್ಕಳ ಬೆಳವಣಿಗೆಯಲ್ಲಿ ಇವರು ನಿರಂತರ ಕೆಲಸ ಮಾಡುತ್ತಿರುವರು.
ಉಪಾಧ್ಯಕ್ಷರಾಗಿ ಎಂ.ಕೆ ನಾಯ್ಕ್ ಅಡ್ಯನಡ್ಕ, ಕಾರ್ಯದರ್ಶಿ ಪುಷ್ಪಾ ಎಚ್. ಖಜಾಂಚಿಯಾಗಿ ಶ್ರೀಪತಿ ನಾಯಕ್ ನಾಟೆ ಕಲ್ಲು, ಜೊತೆ ಕಾರ್ಯದರ್ಶಿಯಾಗಿ ವಿಲ್ಮಾ ಸಿಕ್ವೇರಾ, ಸಂಘಟನಾ ಕಾರ್ಯದರ್ಶಿಯಾಗಿ ಭವಾನಿ ಮಾಣಿ, ಕಾರ್ಯಕಾರಿ ಸಮಿತಿಗೆ ಸದಸ್ಯರಾಗಿ ಶಿವರಾಮ ಭಟ್ ನೆಡ್ಲೆ, ವಿಶ್ವನಾಥ ಗೌಡ ಕುಳಾಲು, ಸಂಜೀವ ಮಿತ್ತಳಿಕೆ, ಇಸ್ಮಾಯಿಲ್ ಅಳಕೆಮಜಲು, ಶ್ರೀಮತಿ ವಿಟ್ಲ, ರಾಜೇಶ ವಿಟ್ಲ,
ಗೌರವ ಸಲಹೆಗಾರರಾಗಿ ಮಕ್ಕಳ ಕಲಾ ಲೋಕದ ಮಾಜಿ ಅಧ್ಯಕ್ಷರುಗಳಾದ ಅನಂತ ಕೃಷ್ಣ ಹೆಬ್ಬಾರ್, ಭಾಸ್ಕರ ಅಡ್ವಳ ಮತ್ತು ಮಹಾಬಲ ಭಟ್ ನೆಗಳಗುಳಿ, ಮಾಧ್ಯಮ ಪ್ರತಿನಿಧಿಯಾಗಿ ಚಿನ್ನಾ ಕಲ್ಲಡ್ಕ ಆಯ್ಕೆಯಾಗಿದ್ದಾರೆ.

