ಉಡುಪಿ : ನಗರದ ಕುಂಜಿಬೆಟ್ಟುವಿನ ರಿಲಯನ್ಸ್ ಮಾರ್ಟ್ ಚಕ್ ಪಾಯಿಂಟ್ ಬಳಿಯ ಡಿ.ಬಿ.ಎಸ್. ಬ್ಯಾಂಕ್, ಧರಣಿ ಆರ್ಕೇಡ್, ಕಲ್ಸಂಕ, ಗುಂಡಿಬೈಲು ಮುಖ್ಯ ರಸ್ತೆಯಲ್ಲಿರುವ ಸ್ಥಳದಲ್ಲಿ ಆಗಸ್ಟ್ 27ರಂದು ಬೆಳಿಗ್ಗೆ 10 ಗಂಟೆಗೆ ವಿವಿಧ ಹುದ್ದೆಗಳಿಗಾಗಿ ನೇರ ಸಂದರ್ಶನ ನಡೆಯಲಿದೆ.
ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಆಯೋಜಿಸಲಾಗಿರುವ ಈ ನೇರ ಸಂದರ್ಶನದಲ್ಲಿ ರಿಲೇಷನ್‌ಶಿಪ್ ಮ್ಯಾನೇಜರ್ ಹಾಗೂ ರಿಲೇಷನ್‌ಶಿಪ್ ಆಫೀಸರ್ ಹುದ್ದೆಗಳಿಗೆ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.
ಈ ಹುದ್ದೆಗಳಿಗೆ ಪಿಯುಸಿ, ಡಿಪ್ಲೊಮಾ ಹಾಗೂ ವಿವಿಧ ಪದವಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ. ಆಸಕ್ತ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಗೆ ಸಂಬಂಧಿಸಿದ ಅಂಕಪಟ್ಟಿ, ಸ್ವವಿವರವುಳ್ಳ ರೆಸ್ಯೂಮ್ ಅಥವಾ ಸಿವಿ ಹಾಗೂ ಆಧಾರ್ ಕಾರ್ಡ್ ಪ್ರತಿಯನ್ನು ಕಡ್ಡಾಯವಾಗಿ ತರಬೇಕು ಎಂದು ಸೂಚಿಸಲಾಗಿದೆ.
ನೇರ ಸಂದರ್ಶನದಲ್ಲಿ ಭಾಗವಹಿಸಲು ಬಯಸುವ ಅಭ್ಯರ್ಥಿಗಳು ನಿಗದಿತ ಸಮಯಕ್ಕೆ ಸ್ಥಳಕ್ಕೆ ಹಾಜರಾಗುವಂತೆ ಉದ್ಯೋಗ ವಿನಿಮಯ ಕಚೇರಿ ತಿಳಿಸಿದೆ. ಉದ್ಯೋಗಾವಕಾಶಕ್ಕಾಗಿ ಕಾಯುತ್ತಿರುವ ಅರ್ಹ ಯುವಜನರಿಗೆ ಈ ನೇರ ಸಂದರ್ಶನ ಉತ್ತಮ ಅವಕಾಶವಾಗಿದ್ದು, ಅಗತ್ಯ ದಾಖಲೆಗಳೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಜಿಲ್ಲಾಧಿಕಾರಿ ಸಂಕೀರ್ಣ, ರಜತಾದ್ರಿ, ಮಣಿಪಾಲ, ಉಡುಪಿ ಕಚೇರಿಯನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ 8105618291, 9945856670, 8150961875 ಹಾಗೂ 9901472710 ದೂರವಾಣಿ ಸಂಖ್ಯೆಗಳಿಗೂ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

