ಕಲಾಕುಂಭ ಕಲಾವಿದೆ‌ರ್ ಕುಳಾಯಿ ಮಂಗಳೂರು ‘ಪರಮಾತ್ಮ ಪಂಜುರ್ಲಿ’ ನಾಟಕದ ಮುಂಬಯಿ ಪ್ರವಾಸ

0
8

ಬೊಂಬೇ ಬಂಟ್ಸ್ ಎಸೋಸಿಯೇಶನ್ ಆಶ್ರಯದಲ್ಲಿ ಉದ್ಘಾಟನೆ

ಮುಂಬಯಿ : ರಾಜ್ಯ ಪ್ರಶಸ್ತಿ ಪುರಸ್ಕೃತ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕಲಾಕುಂಭಕಲಾವಿದೆರ್ ಕುಳಾಯಿ ಮಂಗಳೂರು ಬಳಗ ಇದೀಗ ನಾಟಕ ಕೇತ್ರದಲ್ಲಿ ಹೊಸ ಭಾಷ್ಯಾ ಬರೆದ ದೈವರಾಧನೆಗೆ ಯಾವುದೇ ರೀತಿಯಲ್ಲಿ ಚ್ಯುತಿ ಬಾರದಂತೆ ಆನಿ ಆರಾದಲ ತಿರಿ ನೇಮ ಇಲ್ಲದ ‘ಪರಮಾತ್ಮ ಪಂಜುರ್ಲಿ’ ಯ ಹುಟ್ಟು ಬೆಳವಣಿಗೆ ಕಾರ್ಣಿಕ ಮೆರೆದ ಕಥಾ ಹಂದರ ಹೊಂದಿದ ಮೋಡಿ ಮಾಡುವ ಸೆಟ್ಟಿಂಗ್, ಅದ್ಭುತ ಅಭಿನಯ ದೃಶ್ಯ ಸಂಯೋಜನೆ ಡಿಜಿಟಲ್ ಲೈಟಿಂಗ್ ಎಫೆಕ್ಟ್ ನೊಂದಿಗೆ ಬಹು ಜನರ ಬೇಡಿಕೆಯ ‘ಪರಮಾತ್ಮ ಪಂಜುರ್ಲಿ’ ನಾಟಕ ಮೊತ್ತ ಮೊದಲ ಬಾರಿಗೆ ಮುಂಬಯಿ ಮಹಾನಗರಕ್ಕೆ ಇಂದಿನಿಂದ ಐದು ದಿನಗಳು ನಗರದ ವಿವಿಧ ಉಪನಗರ ಗಳಲ್ಲಿ ನಾಟಕ ಪ್ರದರ್ಶನ ನೀಡಲಿದೆ.

ಮಂಗಳೂರಿನ ಯುವ ಸಂಘಟಕ . ಮುಂಬೈ ಕುಲಾಲ ಸಂಘದ ಗೌರವ ಅಧ್ಯಕ್ಷ ದೇವದಾಸ್ ಕುಲಾಲ್ ಯವರು ಸಹೋದರ ನಾಗೇಶ ಕುಲಾಲರವರ ಸಾರತ್ಯದಲ್ಲಿ ಈ ತಂಡ ಆ.26 ರಿಂದ ಆ. 30 ರವರೆಗಿನ ಪ್ರವಾಸದಲ್ಲಿ ಐದು ಪ್ರದರ್ಶನವನ್ನು ನೀಡಲಿದೆ. ಆ.26 ರ ಬುಧವಾರ ಸಂಜೆ 5 ಕೈ ಬಂಟ್ಸ್ ಸೆಂಟರ್, ಜೂಹಿನಗರ ರೈಲ್ವೆ ಸ್ಟೇಷನ್ ಸಮೀಪ, ಜೂಹಿ ನಗರ, ನವಿಮುಂಬಯಿ ಇಲ್ಲಿ ಬೊಂಬೇ ಬಂಟ್ಸ್ ಎಸೋಸಿಯೇಶನ್ ಇವರ ಸಂಪೂರ್ಣ ಸಹಕಾರದಲ್ಲಿ ಅಸೋಸಿಯೇಷನ್ ಅಧ್ಯಕ್ಷರಾದ ನ್ಯಾಯವಾದಿ ಡಿಕೆ ಶೆಟ್ಟಿಯವರು ಮುಂಬೈ ಪ್ರವಾಸವನ್ನು ಉದ್ಘಾಟಿಸಲಿದ್ದಾರೆ ಅತಿಥಿ ಗಣ್ಯರು ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ .

ಆ.27ರ ಗುರುವಾರ ಸಂಜೆ 6 ಕ್ಕೆ, ಆದ್ಮಾ ಕ್ರಾಂತಿವೀರ್‌ವಾಸುದೇವ್ ಬಲವಂತ ಫಡೈ ಸಭಾಂಗಣ, ಹಳೆ ಪನ್ನೇಲ್ ನವಿಮುಂಬಯಿ ಇಲ್ಲಿ. ಪನ್ವೇಲ್ ಪರಿಸರದ ನಗರ ಸೇವಕ ಸಂತೋಷ್ ಜಿ. ಶೆಟ್ಟಿ ಮತ್ತು ಶ್ವೇತಾ ಸಂತೋಷ್ ಶೆಟ್ಟಿ ಯವರ ಸಂಪೂರ್ಣ ಸಹಾಯ ದಲ್ಲಿ ನಡೆಯಲಿದೆ.

ಆ.28 ರ ಶುಕ್ರವಾರ ಸಂಜೆ 6 ಕ್ಕೆ, ಹೊಟೇಲ್ ಗ್ಯಾಲಕ್ಸಿ, ಸಭಾಂಗಣ ನಾಲಾಸೋಪಾರ ( ಪ ). ಇಲ್ಲಿ ಬಂಟರ ಸಂಘ ಮುಂಬಯಿ ಇದರ ಜೊತೆ ಕೋಶಾಧಿಕಾರಿ ಶಶಿಧರ್‌ಶೆಟ್ಟಿ ಇನ್ನಂಜೆ. ಶಶಿಕಲಾ ಶಶಿಧರ್ ಶೆಟ್ಟಿ ಅವರು ಸಂಸ್ಕಾರದಲ್ಲಿ ನಡೆಉಲಿರುವುದು.

ಆ.29ರ ಶನಿವಾರ ಸಂಜೆ 6ಕ್ಕೆ, ಸ್ಸೈಂಟ್ ಲಾರೆನ್ಸ್ ಬ್ಯಾಂಕ್ವೆಟ್ ಹಾಲ್, ಮುಲುಂಡ್ ಚೆಕ್‌ನಾಕಾಸಮೀಪ, ಥಾಣೆ (ಪ) ಇಲ್ಲಿ.ಅಶೋಕ್ ಮೂಲ್ಯ ಥಾಣೆ, ಕುಲಾಲ ಸಂಘ ಮುಂಬೈಯ ಗೌರವ ಅಧ್ಯಕ್ಷ ದೇವದಾಸ್ ಕುಲಾಲ್ ಡೊಂಬಿವಲಿ ಮತ್ತು ಉದ್ಯಮಿಜಗದೀಶ್ ಆರ್ ಬಂಜನ್ ಅಂಬರ್‌ನಾಥ್ ಇವರ ಪ್ರಾಯೋಜಕತ್ವದಲ್ಲಿ ಜರಗಲಿದೆ.

ಆ.30 ರ ರವಿವಾರ ಸಂಜೆ 6 ಕ್ಕೆ, ಬಂಟರ ಭವನ, ಕುರ್ಲಾ ( ಪೂ ) ಇಲ್ಲಿ ಸಂಜೀವ ಎನ್. ಬಂಗೇರ ಸಯನ್ ಮತ್ತು ಪ್ರವೀಣ್ ಕುಲಾಲ್ ಸಯನ್ ಇವರ ಪ್ರಾಯೋಜಕತ್ವದಲ್ಲಿ, ನಡೆಯಲಿದೆ.

ಅಭಿಮಾನಿಗಳು ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರೋತ್ಸಾಹಿಸಬೇಕಾಗಿ ಸಂಘಟಕರು ವಿನಂತಿಸಿಕೊಂಡಿದ್ದಾರೆ.