ಬಂಟ್ವಾಳ : ಮಾನವೀಯ ಮೌಲ್ಯಗಳಿಲ್ಲದ ಜ್ಞಾನಕ್ಕೆ ಬೆಲೆಯಿಲ್ಲ. ಕೇವಲ ಪಠ್ಯಕ್ರಮವಷ್ಟೇ ಶಿಕ್ಷಣವಲ್ಲ.ವಿದ್ಯಾರ್ಥಿಯ ಸರ್ವಾಂಗೀಣಅಭಿವೃದ್ಧಿಗೆ ಪೂರಕವಾಗುವುದೇ ಶಿಕ್ಷಣ.ಎಂದುಪುತ್ತೂರಿನ ಸಂತಫಿಲೋಮಿನಾ ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಚಂದ್ರಶೇಖರ್ ನುಡಿದರು.
ಇವರು ಶ್ರೀ ವೆಂಕಟರಮಣಸ್ವಾಮೀಕಾಲೇಜು, ಬಂಟ್ವಾಳದ ವಿಜ್ಞಾನ ಸಂಘ, ಐ.ಐ.ಸಿ ಹಾಗೂ ಐ.ಕ್ಯು.ಎ.ಸಿ.ಯ ಸಂಯುಕ್ತಾಶ್ರಯದಲ್ಲಿನೊಬೆಲ್ ಪ್ರಶಸ್ತಿ ಪುರಸ್ಕೃತ ಸರ್ ಸಿ.ವಿ.ರಾಮನ್ ಜನ್ಮದಿನದ ಅಂಗವಾಗಿ ನಡೆದ ರಾಷ್ಟ್ರೀಯ ವಿಜ್ಞಾನ ದಿನ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿಭಾಗವಹಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ವಿಜ್ಞಾನವೆಂದರೆ ತಾರ್ಕಿಕ ಜ್ಞಾನದೊಂದಿಗೆ ವಸ್ತುನಿಷ್ಠವಿಷಯವನ್ನು ಪ್ರತಿಪಾದಿಸುವುದಾಗಿದೆ. ನಮ್ಮ ಬದುಕಿನ ಪ್ರತಿಯೊಂದು ಹಂತದಲ್ಲಿಯೂ ವಿಜ್ಞಾನವು ಸೇರಿದಎಂದುಕಾರ್ಯಕ್ರಮದಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ.ಎಂ.ಡಿ.ಮಂಚಿ ತಿಳಿಸಿದರು.
ವಿಜ್ಞಾನ ಸಂಘದ ಸಂಯೋಜಕರಾದ ಡಾ.ವಿನಾಯಕಕೆ.ಎಸ್. ಸ್ವಾಗತಿಸಿ, ಶ್ರೀದೇವಿ ವಂದಿಸಿದರು. ಸುಪ್ರೀತ್ ಕಡಕೋಳ್ ಅತಿಥಿಗಳನ್ನು ಪರಿಚಯಿಸಿದರು. ಕು.ವೀಕ್ಷಿತಾಗಟ್ಟಿ ನಿರೂಪಿಸಿದರು.ವಿದ್ಯಾರ್ಥಿನಿಯರಾದ ವಂದಿತ ಹಾಗೂ ನಿಧಿ ಪ್ರಾರ್ಥಿಸಿದರು. ರಾಷ್ಟ್ರೀಯ ವಿಜ್ಞಾನದಿನದ ಅಂಗವಾಗಿ ಏರ್ಪಡಿಸಿದ್ದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

