ಹೆಬ್ರಿ : ವರಂಗ ಅಂಗನವಾಡಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕಿ ವರಂಗ ವೀಣಾ ರಾಮಚಂದ್ರ ಭಟ್ ಇವರು ಕೊಡ ಮಾಡಿದ ಟೇಬಲ್, ಕುರ್ಚಿ ಹಾಗೂ ಪ್ಲಾಸ್ಟಿಕ್ ಮುಕ್ತ ಕಾರ್ಯಕ್ರಮದಡಿ ಮಕ್ಕಳಿಗೆ ಸ್ಟೀಲ್ ನೀರಿನ ಬಾಟಲ್ ಗಳನ್ನು ಮಾತಿಬೆಟ್ಟು ಅಮೂಲ್ಯ ಸಹಾಯ ಹಸ್ತ ಚಾರಿಟೇಬಲ್ ಟ್ರಸ್ಟ್ ಮೂಲಕ ಮಾ.7 ರಂದು ಹಸ್ತಾಂತರಿಸಲಾಯಿತು.

ವೇದಿಕೆಯಲ್ಲಿ ಧಾರ್ಮಿಕ ಮುಂದಾಳು ಕಬ್ಬಿನಾಲೆ ರಾಮಚಂದ್ರ ಭಟ್, ಉದ್ಯಮಿ ಅಕ್ಷಯ ಜೈನ್, ನ್ಯಾಯವಾದಿ ಸುರೇಶ ಪೂಜಾರಿ, ಸಮಾಜ ಸೇವಕಿ ವೀಣಾ ಆರ್ ಭಟ್, ಅಮೂಲ್ಯ ಸಹಾಯ ಹಸ್ತ ಚಾರಿಟೇಬಲ್ ಟ್ರಸ್ಟಿನ ವಿದ್ಯಾ, ಶಕುಂತಲಾ, ತಾಲ್ಲೂಕು ಸಂಯೋಜಕಿ ಶೋಭಾ ಎಸ್ ಭಂಡಾರಿ, ಅಂಗನವಾಡಿ ಶಿಕ್ಷಕಿ ಅಶ್ವಿನಿ, ಸಹಾಯಕಿ ವಿನೋದ ಉಪಸ್ಥಿತರಿದ್ದರು.
ನ್ಯಾಯವಾದಿ ಪೋಷಕ ಸುರೇಶ ಪೂಜಾರಿ ಸ್ವಾಗತಿಸಿದರು. ಶಿಕ್ಷಕಿ ಅಶ್ವಿನಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

