ವಿಶ್ವ ಮಹಿಳಾ ದಿನಾಚರಣೆ

0
43

ವಿಶ್ವ ಮಹಿಳಾ ದಿನದ ಅಂಗವಾಗಿ ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆಗೆ ಸಂಬಂಧಿಸಿದ ಮಂಗಳೂರು ಸೋಮೇಶ್ವರ ಲಯನ್ಸ್ ಕ್ಲಬ್ ವತಿಯಿಂದ ಕನೀರ್ ತೋಟ , ಕೊಲ್ಯ, ಮಂಗಳೂರಿನ ನಿವಾಸಿಯಾದ ಖ್ಯಾತ ಹಾಗೂ ಚುರುಕು ಮಹಿಳಾ ಟ್ರಕ್/ಬಸ್ ಚಾಲಕಿ ಶ್ರೀಮತಿ ಸುಕನ್ಯಾ ರಾವ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮವನ್ನು ಕ್ಲಬ್ ಅಧ್ಯಕ್ಷ ಲಯನ್ ವಿಜಯನ್ ಕೆ. ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕಮಾಂಡರ್ ಲಯನ್ ಕೆ. ವಿಜಯಕುಮಾರ್ ಮತ್ತು ಲಯನ್ ನಿರ್ಮಿತಾ ಭಂಡಾರಿ ಅವರು ಮಾತನಾಡಿ ಶ್ರೀಮತಿ ಸುಕನ್ಯಾ ರಾವ್ ಅವರ ಸಾಧನೆಯನ್ನು ಪ್ರಶಂಸಿಸಿದರು.

ಕ್ಲಬ್ ಕಾರ್ಯದರ್ಶಿ ಲಯನ್ ಕೆ. ಗೋಪಿನಾಥ್ ಸ್ವಾಗತಿಸಿದರು. ಖಜಾಂಚಿ ಲಯನ್ ನಿತೀಶ್ ಕೃಷ್ಣ ಅವರು ವಂದನಾರ್ಪಣೆ ಸಲ್ಲಿಸಿದರು.

LEAVE A REPLY

Please enter your comment!
Please enter your name here