ದಾವಣಗೆರೆ : ಕಲಾಕುಂಚ ಮಹಿಳಾ ವಿಭಾಗದಿಂದ ಇತ್ತೀಚಿಗೆ ಅಂತರಾಷ್ಟಿçÃಯ ಮಹಿಳಾ ದಿನಾಚರಣೆ ಪ್ರಯುಕ್ತ ಹಮ್ಮಿಕೊಳ್ಳಲಾದ “ಆಕರ್ಷಕ ಗೃಹಿಣಿ” ಸ್ಪರ್ಧೆಯಲ್ಲಿ ವಿಜೇತರಾದವರು ಪ್ರಥಮ ಸಿಂಧು ಕಾಂತರಾಜ್, ದ್ವಿತೀಯ ಚೈತ್ರಾ ನಾಗರಾಜ್, ತೃತೀಯ ರಾಧಾ ಭರತ್ ಪಡೆದಿರುತ್ತಾರೆ ಎಂದು ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷರಾದ ತೀರ್ಪುಗಾರರಲ್ಲಿ ಒಬ್ಬರಾದ ಹೇಮಾ ಶಾಂತಪ್ಪ ಪೂಜಾರಿಯವರು ತಿಳಿಸಿದ್ದಾರೆ.
ಕಲಾಕುಂಚ ಕಛೇರಿ ಸಭಾಂಗಣದಲ್ಲಿ ನಡೆದ ಈ ವೈಭವಪೂರ್ಣ ವಿಜೃಂಭಣೆಯ ಸಮಾರಂಭದಲ್ಲಿ ಆಶುಭಾಷಣ, ಪ್ರಶ್ನೋತ್ತರ, ರಸಪ್ರಶ್ನೆ, ಲಿಖಿತ ಪ್ರಶ್ನೆಗೆ ಉತ್ತರ, ಆಟೋಟ ಸ್ಪರ್ಧೆ ಹಮ್ಮಿಕೊಂಡಿದ್ದು, “ಆಕರ್ಷಕ ಗೃಹಿಣಿ” ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಮುತ್ತೆöÊದೆಯರಿಗೆ ಕನ್ನಡ ತಿಲಕವಿಟ್ಟು, ಕನ್ನಡ ಕಂಕಣಕಟ್ಟಿ, ಕನ್ನಡ ಆರತಿ ಬೆಳಗಿ ಕಲಾಕುಂಚದ ಮುತ್ತೆöÊದೆಯರು ಗೌರವಿಸಿದರು.
ಈ ಸ್ಪರ್ಧೆಯಲ್ಲಿ ತೀರ್ಪುಗಾರರಾಗಿ ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಜ್ಯೋತಿ ಗಣೇಶ್‌ಶೆಣೈ, ಕಲಾಕುಂಚ ಎಲೆಬೇತೂರು ಶಾಖೆಯ ಅಧ್ಯಕ್ಷರಾದ ಡಾ|| ನಿರ್ಮಲಾ ವಿಶ್ವನಾಥ್ ಕುಲಕರ್ಣಿ, ಕಲಾಕುಂಚ ಸಿದ್ದವೀರಪ್ಪ ಬಡಾವಣೆಯ ಶಾಖೆಯ ಅಧ್ಯಕ್ಷರಾದ ಶ್ರೀಮತಿ ಲಲಿತಾ ಕಲ್ಲೇಶ್, ಸಮಿತಿ ಸದಸ್ಯರಾದ ಶ್ರೀಮತಿ ಲೀಲಾ ಸುಭಾಷ್ ಮುಂತಾದವರು ತೀರ್ಪು ನೀಡಿದರು.
ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಹಾಗೂ ಭಾಗವಹಿಸಿದವರಿಗೆ ಸರ್ವರಿಗೂ ಕನ್ನಡ ತಾಯಿ ಶ್ರೀ ಭುವನೇಶ್ವರಿ ಸ್ಮರಣಿಕೆ, ಅಭಿನಂದನಾ ಪತ್ರ ವಿತರಿಸಲಾಯಿತು ಎಂದು ಕಲಾಕುಂಚ ಮಹಿಳಾ ವಿಭಾಗದ ಸಮಿತಿ ಸದಸ್ಯರಾದ ಶ್ರೀಮತಿ ಶಿಲ್ಪಾ ಉಮೇಶ್ ಪ್ರಕಟಿಸಿದ್ದಾರೆ.

