ಉಡುಪಿ : ಹಿರಿಯ ಕೊಲಾಜ್ ಕಲಾವಿದರಾದ ಎಂ. ಪ್ರಭಾಕರ್ ಕಿಣಿ, ಚಿತ್ರಕಲಾವಿದ ರಾದ ರವಿ ಹಿರೇಬೆಟ್ಟು ಮತ್ತು ಯು. ಶಕುಂತಲಾ ರಾಜಾರಾಮ ಶೆಣೈ ಅವರ ಚಿತ್ರಕಲಾ ಪ್ರದರ್ಶನವು ಮಾರ್ಚ್ 14, 15 ಎರಡು ದಿನಗಳ ಕಾಲ ಉಡುಪಿ ಸಿಟಿ ಬಸ್ ನಿಲ್ದಾಣ ಎದುರಿನ ವಿಭೂತಿ ಆರ್ಟ್ ಗ್ಯಾಲರಿಯ ಚಿತ್ರಕಲಾ ಮಂದಿರದಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಎಂ. ಪ್ರಭಾಕರ್ ಕಿಣಿ (ಆಶಾ ಕಲಾ ನಿಕೇತನ ಗ್ಯಾಲರಿ) ದೀಪ ಬೆಳಗುವ ಮೂಲಕ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಹೊಸಬೆಳಕುಆಶ್ರಮ ಸಂಸ್ಥಾಪಕಿ ತನೂಲಾ ತರುಣ್ ಭಾಗವಹಿಸಲಿದ್ದಾರೆ. ಹಿರಿಯ ಕಲಾವಿದರಾದ ಪಿ.ಎನ್.ಆಚಾರ್ಯ ಹಾಗೂ ಉಡುಪಿ ನಿರಂಜನ್ ಚಿತ್ರಕಲಾ ಮಂದಿರದ ಕಲಾವಿದರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ.
ಚಿತ್ರಕಲಾ ಪ್ರದರ್ಶನವು ಶನಿವಾರ ಮತ್ತು ಭಾನುವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸಾರ್ವಜನಿಕರಿಗೆ ವೀಕ್ಷಣೆಗೆ ತೆರೆಯಲ್ಪಟ್ಟಿರುತ್ತದೆ.

