ಟಿ20 ವಿಶ್ವಕಪ್‌ನಲ್ಲಿ ನ್ಯೂಜಿಲ್ಯಾಂಡ್ ಮೇಲೆ ಭರ್ಜರಿ ಗೆಲುವು – ಭಾರತಕ್ಕೆ ಐತಿಹಾಸಿಕ ಕಿರೀಟ

0
20

ಜಗತ್ತಿನಾದ್ಯಂತ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಎದುರು ನೋಡಿದ್ದ ಐಸಿಸಿ ಟಿ20 ವಿಶ್ವಕಪ್ ಫೈನಲ್ ಪಂದ್ಯ ಇಂದು ಅಹಮದಾಬಾದ್‌ನ ಭವ್ಯವಾದ ನರೇಂದ್ರ ಮೂದಿ ಸ್ಟೇಡಿಯಂ ನಲ್ಲಿ ನಡೆಯಿತು. ಈ ರೋಚಕ ಪಂದ್ಯದಲ್ಲಿ ಭಾರತ ತಂಡವು ನ್ಯೂಜಿಲ್ಯಾಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಟಿ20 ವಿಶ್ವಕಪ್ ಕಿರೀಟವನ್ನು ಮೂರನೇ ಬಾರಿ ಹಾಗೂ ಸತತ ಎರಡನೇ ಬಾರಿ ಗೆದ್ದು ಕ್ರಿಕೆಟ್ ಇತಿಹಾಸದಲ್ಲಿ ತನ್ನ ಹೆಸರನ್ನು ಸುವರ್ಣಾಕ್ಷರಗಳಲ್ಲಿ ಬರೆದಿದೆ.

ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ದಿಟ್ಟ ಆತ್ಮವಿಶ್ವಾಸ ಮತ್ತು ಶಿಸ್ತಿನ ಆಟದೊಂದಿಗೆ 255 ರನ್‌ಗಳ ಭಾರೀ ಮೊತ್ತ ಕಲೆಹಾಕಿ ಬಲಿಷ್ಠ ಭದ್ರ ಬುನಾದಿ ನಿರ್ಮಿಸಿತು. ಆರಂಭಿಕ ಬ್ಯಾಟರ್ ಸಂಜು ಸ್ಯಾಮ್‌ಸನ್ ಅದ್ಭುತ ಬ್ಯಾಟಿಂಗ್ ಮೂಲಕ ಐತಿಹಾಸಿಕ ಪ್ರದರ್ಶನ ನೀಡಿ ತಂಡವನ್ನು ಫೈನಲ್‌ಗೆ ತಲುಪಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಅವರೊಂದಿಗೆ ಅಭಿಷೆಕ್ ಶರ್ಮ ಅವರ ಮಿಂಚಿನ ಆಟ, ಇಷನ್ ಕಿಷನ್ ಅವರ ಬಿರುಸಿನ ಬ್ಯಾಟಿಂಗ್ ಹಾಗೂ 360 ಡಿಗ್ರಿ ಆಟದ ಖ್ಯಾತಿಯ ನಾಯಕ ಸೂರ್ಯಕುಮಾರ್ ಯಾದವ್ ಅವರ ಚುರುಕಿನ ರನ್‌ಗಳ ಸಂಗ್ರಹ ತಂಡಕ್ಕೆ ಬಲ ನೀಡಿತು.

ಅಲ್ಲದೆ ಆಲ್‌ರೌಂಡರ್ ಹಾರ್ದಿಕ ಪಾಂಡ್ಯ, ಶಿಮಂ ದೂಬೆ ಮತ್ತು ತಿಲಕ್ ವರ್ಮ ಅವರ ಜವಾಬ್ದಾರಿಯುತ ಆಟ ಭಾರತವನ್ನು ಬಲಿಷ್ಠ ಸ್ಥಿತಿಗೆ ಕೊಂಡೊಯ್ದಿತು. ಬಳಿಕ ಬೌಲಿಂಗ್‌ಗೆ ಇಳಿದ ಭಾರತೀಯ ಬೌಲರ್‌ಗಳಲ್ಲಿ ವಿಶ್ವಪ್ರಸಿದ್ಧ ವೇಗಿ ಬುಮ್ರ ಅವರ ಮ್ಯಾಜಿಕ್ ಬೌಲಿಂಗ್ ಗಮನಸೆಳೆಯಿತು. ಅವರು ಕೇವಲ 15 ರನ್ ನೀಡಿ 4 ಓವರ್‌ಗಳಲ್ಲಿ 4 ವಿಕೆಟ್ ಪಡೆದು ನ್ಯೂಜಿಲ್ಯಾಂಡ್ ಬ್ಯಾಟರ್‌ಗಳನ್ನು ತತ್ತರಿಸಿದರು. ಜೊತೆಗೆ ಅರ್ಶದೀಪ್ ಸಿಂಗ್, ಅಕ್ಸರ್ ಪಟೇಲ್ ಹಾಗೂ ವರುಣ್ ಚಕ್ರವರ್ತಿ ಇವರುಗಳು ನಿಯಂತ್ರಿತ ಬೌಲಿಂಗ್ ಮಾಡಿ ತಂಡಕ್ಕೆ ಬೆಂಬಲ ನೀಡಿದರು.

ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಎಲ್ಲ ವಿಭಾಗಗಳಲ್ಲಿಯೂ ಸಮಗ್ರ ಪ್ರದರ್ಶನ ನೀಡಿದ ಭಾರತ ತಂಡ ನಾಯಕತ್ವ, ತಂಡದ ಒಗ್ಗಟ್ಟು ಹಾಗೂ ಶಿಸ್ತಿನ ಆಟದಿಂದ ಅಂತಿಮವಾಗಿ ಜಯದ ನಗೆ ಬೀರಿತು. ಈ ಜಯದೊಂದಿಗೆ ಭಾರತ ಮತ್ತೊಮ್ಮೆ ವಿಶ್ವ ಕ್ರಿಕೆಟ್ ವೇದಿಕೆಯಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿ ದಾಖಲೆ ಮಾಡಿತು.

ಭಾರತ ತಂಡದ ಈ ಐತಿಹಾಸಿಕ ಸಾಧನೆಗೆ ದೇಶದಾದ್ಯಂತ ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದರು. ನಗರಗಳಲ್ಲೂ ಗ್ರಾಮಗಳಲ್ಲೂ ಪಟಾಕಿ ಸಿಡಿಸಿ, ಸಿಹಿ ಹಂಚಿಕೊAಡು ಕ್ರಿಕೆಟ್ ಅಭಿಮಾನಿಗಳು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು. ಭಾರತ ಕ್ರಿಕೆಟ್ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸೋಣ.

ಹೆಚ್. ವಿ. ಮಂಜುನಾಥ ಸ್ವಾಮಿ

LEAVE A REPLY

Please enter your comment!
Please enter your name here